ಚಂದ್ರಿಕಾಗೆ ಸಿಹಿಮುತ್ತು ಕೊಟ್ಟ ಅರುಣ್ ಸಾಗರ್
ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಚಂದ್ರಿಕಾರ ಪುನರಾಗಮನ ಸಂತಸ ತಂದಿದೆ. ಹೇಗಿದ್ದರೂ ಅವರು ಫೈನಲ್ ವರೆಗೂ ಮನೆಯಲ್ಲಿ ಇರಬಹುದು ಎಂಬುದು ಈಗಾಗಲೆ ನಿರ್ಧಾರವಾಗಿದೆ. ಕಳೆದು ಹೋಗಿದ್ದ ಗೆಳತಿಯೊಬ್ಬಳು ಅರುಣ್ ಗೆ ಮತ್ತೆ ಸಿಕ್ಕಂತಾಗಿದೆ.
ನೀವು ಏನೇನು ಮಾಡಿದಿರಿ ಎಂಬುದು ನನಗೆ ಗೊತ್ತು ಎಂದು ಚಂದ್ರಿಕಾ ಅಂದದ್ದೇ ತಡ ಬ್ರಹ್ಮಾಂಡ ಗುರುಗಳಿಗೆ ಬೆವೆತು ಹೋದರು. ಈಗೇನಪ್ಪಾ ಮಾಡುವುದು, ಇನ್ನು ಚಂದ್ರಿಕಾ ಎಷ್ಟು ದಿನ ಇರುತ್ತಾರೋ ಏನೋ ಎಂಬ ಆತಂಕದಲ್ಲಿದ್ದಾರೆ.

ರಾತ್ರಿ ಮಲಗುವ ವೇಳೆಗೆ ಅರುಣ್ ಸಾಗರ್ ಹಾಗೂ ಚಂದ್ರಿಕಾ ತುಂಬಾ ಹತ್ತಿರವಾಗಿದ್ದರು. ಚಂದ್ರಿಕಾ ಅವರಿಗೆ ಒಂದು ಮುತ್ತಿನ ಕಥೆ ಎಂದು ಸನ್ನೆಯಲ್ಲಿ ತಿಳಿಸಲು ಹೇಳಿದ. ಅದಕ್ಕೆ ಅವರು ಹಾಗೆಯೇ ಮಾಡಿ ತೋರಿಸಿದರು. ಹಂಗಲ್ಲ ಒಂದು ಮುತ್ತು ಕೊಟ್ಟು ತೋರಿಸಬೇಕು ಎಂದರು.
ಅದನ್ನೇ ತಾನು ಮಾಡಿ ತೋರಿಸುತ್ತೇನೆ ಎಂದು ಹೇಳಿ ಚಂದ್ರಿಕಾ ಹಸ್ತವನ್ನು ಚುಂಬಿಸಿದರು. ಒಟ್ಟಿನಲ್ಲಿ ಇವರಿಬ್ಬರ ಆಟ ನೋಡುತ್ತಾ ಬ್ರಹ್ಮಾಂಡ ಗುರುಗಳು ನಗುವುದೋ ಅಳುವುದೋ ಎಂಬ ಪರಿಸ್ಥಿತಿಯಲ್ಲಿದ್ದರು.
ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ವಿಜಯ್ ರಾಘವೇಂದ್ರ, ನಿಕಿತಾ, ನರೇಂದ್ರ ಬಾಬು ಶರ್ಮಾ ಹಾಗೂ ಚಂದ್ರಿಕಾ. ಉಳಿದ ಸ್ಪರ್ಧಿ ಅರುಣ್ ಸಾಗರ್ ಮಾತ್ರ ಫುಲ್ ಸೇಫ್. ಮನೆಯಲ್ಲಿ ಇನ್ನೇನು ರಾದ್ಧಾಂತ ಕಾದಿದೆಯೋ ಏನೋ?


Click it and Unblock the Notifications











