ಕನ್ಫೆಷನ್ ರೂಮಿನಲ್ಲೂ ಪತ್ನಿಯನ್ನು ಮುದ್ದಾಡಿದ ಅರುಣ್

By Rajendra
<ul id="pagination-digg"><li class="previous"><a href="/tv/nikita-anushree-emotional-moments-bigg-boss-074600.html">« Previous</a>

ಪತ್ನಿ ಜೊತೆಗಿಲ್ಲದೆ ಬಾಡಿ ಹೋದ ಬಳ್ಳಿಯಂತಾಗಿದ್ದ ಅವರ ಮುಖದಲ್ಲಿ ಮತ್ತೆ ಹೊಸ ಚಿಗುರು ಕಾಣಿಸಿಕೊಂಡಿತು. ಅವರು ಮೊದಲು ಪತ್ನಿಗೆ ತೋರಿಸಿದ್ದೇ ಬಾತ್ ರೂಂ. ಅದ್ಯಾಕೋ ಏನೋ ಗೊತ್ತಾಗಲಿಲ್ಲ. ಅಲ್ಲೇ ಇಬ್ಬರೂ ಅದೇನೋ ಪದ ಬಳಸಿದರು. ಆದರೆ ಅದು ಮ್ಯೂಟ್ ಆಗಿತ್ತು.

ಅರುಣ್ ಅವರಿಗೆ ಇಷ್ಟವಾದ ರವೆಉಂಡೆಯನ್ನು ತಂದಿದ್ದರು. ಆದರೆ ಅವರ ಕಣ್ಣೆಲ್ಲಾ ಪತ್ನಿಯ ಮೇಲೆ ಇತ್ತು. ತುಂಬಾ ಸಣ್ಣಾ ಆಗೋಗಿದ್ದೀರಾ ಅರುಣಾ. ವರ್ಕ್ ಔಟ್ ಮಾಡಬೇಕಾಗಿತ್ತು ಎಂದು ಸಲಹೆ ನೀಡಿದರು. ಅದೇನು ವರ್ಕ್ ಔಟೋ ಗೊತ್ತಾಗಲಿಲ್ಲ. ಆದರೆ ಹೊಟ್ಟೆ ಕರಗಿರುವುದನ್ನು ಅರುಣ್ ಹೇಳಿಕೊಂಡ. ಅಯ್ಯೋ ಅಷ್ಟೇ ಸಾಕು ಬಿಡಿ. ಇಲ್ಲಿಗೆ ಬಂದದ್ದಕ್ಕೆ ಹೊಟ್ಟೆನಾದ್ರು ಕರಗಿತಲ್ಲಾ ಎಂದು ಸಮಾಧಾನಪಟ್ಟರು.

Etv Kananda reality show Bigg Boss Kannada

ಕಡೆಗೆ ಹೊರಡುವಾಗಲೂ ತಮ್ಮ ಪತ್ನಿಯನ್ನು ಬಿಡದೆ ಕೆನ್ನೆಗೆ, ಗಲ್ಲಕೆ, ತುಟಿಗೆ ಮುತ್ತಿನ ಸುರಿಮಳೆ ಸುರಿಸಿದರು. ಪಾಪ ಅದೆಷ್ಟು ದಿನದ ವೇದನೆಯೋ ಏನೋ. ಎಲ್ಲವನ್ನೂ ಐದತ್ತು ನಿಮಿಷದಲ್ಲಿ ತೀರಿಸಿಕೊಂಡು ಬಿಟ್ಟ. ಕಡೆಗೆ ಕನ್ಫೆಷನ್ ರೂಮಿಗೂ ಹೋಗಿ ಪತ್ನಿಯನ್ನು ಮುದ್ದಾಡಿದ.

ಇವೆಲ್ಲವನ್ನೂ ಮೂಕವಾಗಿ ನೋಡುತ್ತಾ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಮೂಕ ವೇದನೆಯನ್ನು ಅನುಭವಿಸಿದರು. ತಮ್ಮ ಕಡೆಯಿಂದಲೂ ಯಾರಾದರೂ ಬರುತ್ತಾರಾ ಎಂದು ಸಂಜೆಯ ತನಕ ಎದುರು ನೋಡುತ್ತಲೇ ಇದ್ದರು. ಆದರೆ ಕಡೆಗೆ ಯಾರೂ ಬರದೆ ನಿರಾಸೆಗೆ ಒಳಗಾದರು.

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಇನ್ನೊಂದು ವಿಚಾರನ್ನೂ ತಿಳಿಸಿದರು. ಅದೇನೆಂದರೆ ಲೂಸ್ ಮಾದ ಯೋಗೇಶ್ ಅವರಿಗೆ ಮನೆಯಿಂದ ತುರ್ತು ಕರೆಬಂದ ಕಾರಣ ಅವರು ಅನಿವಾರ್ಯವಾಗಿ ಹೋಗಬೇಕಾಯಿತು ಎಂದು ಸ್ಪಷ್ಟಪಡಿಸಿದರು. ಒಟ್ಟಾರೆಯಾಗಿ ಬಿಗ್ ಬಾಸ್ ರಂಗಮಂಚ ದಿನದಿನಕ್ಕೆ ನಾಟಕೀಯವಾಗುತ್ತಾ ಸಾಗಿದೆ.

<ul id="pagination-digg"><li class="previous"><a href="/tv/nikita-anushree-emotional-moments-bigg-boss-074600.html">« Previous</a>

More from Filmibeat

English summary
Etv Kananda reality show Bigg Boss Kannada day 70 and 71st highlights. Many at Big Boss house were getting home sick. In fact, we have clearly seen few contestants finding it difficult to stay away from their families. Hence, Bigg Boss decided to give them some relief and bring back the lost joy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X