ಅರುಣ್ ಸಾಗರ್ ರಂಗಾಯಣ ಲವ್ ಸ್ಟೋರಿ
ಇನ್ನೊಂದು ದಿನ ರಂಗಾಯಣದ ವರ್ಕ್ ಶಾಪ್ ನಲ್ಲಿ ನಾನೊಂದು ಹಾಡು ಹಾಡಿದೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಳು ಒಬ್ಬ ಹುಡುಗಿ. ನೋಡಿದರೆ ಅಯ್ಯೋ ಆ ಹೊತ್ತು ನೋಡಿದ್ದ ಉದ್ದ ಜಡೆ ಹುಡುಗಿ ಮೀರಾ ಎಂದು ಗೊತ್ತಾಯಿತು. ಬಳಿಕ ಪ್ರತಿದಿನ ಆಕೆಗೆ ಫೋನ್ ಮಾಡುವುದು ನಡೆದೇ ಇತ್ತು...
ನನಗಾಗ 400 ರು ಸ್ಟೈಪೆಂಡ್ ಬರುತ್ತಿತ್ತು. ಅದೆಲ್ಲಾ ಆಕೆಯ ಫೋನ್ ಗೆ ಖರ್ಚಾಗುತ್ತಿತ್ತು ಬಿಡಿ. ಆಗೆಲ್ಲಾ ರಂಗಾಯಣ ರಘು ಬಳಿ ಸಾಲ ಮಾಡಬೇಕಾದ ಪ್ರಸಂಗ ಬರುತ್ತಿತ್ತು ಎಂದು ತಮ್ಮ ಲವ್ ಸ್ಟೋರಿ ಹೇಳಿಕೊಂಡರು. ಒಟ್ಟಿನಲ್ಲಿ ಗಂಡ ಹೆಂಡತಿ ಟಾಸ್ಕ್ ನಿಭಾಯಿಸುವಲ್ಲಿ ನಿಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು ಎಂದು ಅರುಣ್, ಚಂದ್ರಿಕಾ ಅವರಿಗೆ ಸುದೀಪ್ ಬೆನ್ನುತಟ್ಟಿದರು.
ಇದೇ ಸಂದರ್ಭದಲ್ಲಿ ನರೇಂದ್ರ ಬಾಬು ಶರ್ಮಾ ಅವರ ಡಾನ್ಸ್ ಬಗ್ಗೆಯೂ ಸುದೀಪ್ ಪ್ರಸ್ತಾಪಿಸಿ ಇನ್ನೊಮ್ಮೆ ಕುಣಿಸಿದರು. ಶರ್ಮಾ ಅವರೇ ನಿಮ್ಮ ಡಾನ್ಸ್ ನೋಡಿ ಶಂಕ್ರಣ್ಣ ಮೇಲಿಂದಲೇ ವಿಜಲ್ ಹೊಡೆಯುತ್ತಿದ್ದರು. "ಸಂತೋಷಕ್ಕೆ ಹಾಡು ಸಂತೋಷಕ್ಕೆ" ಗೀತೆಗೆ ಚೆನ್ನಾಗಿ ಹೆಜ್ಜೆ ಹಾಕಿದಿರಿ ಗುರುಗಳೇ ಎಂದು ಹುರುದುಂಬಿಸಿದರು.

ಅಯ್ಯೋ ಗಂಡ ಎಲ್ಲಿ ಹೋಯಿತು ಎಂದು ನನಗೆ ಶಾಕ್ ಆಯಿತು ಎಂದರು. ನಿಕಿತಾ ಅವರ ಕನ್ನಡದ ಬಗ್ಗೆ ಸುದೀಪ್ ಕರುಣಾಡ ತಾಯಿ ಸದಾ ಚಿನ್ಮಯಿ ಎಂದು ಮತ್ತೊಮ್ಮೆ ಕಿಚಾಯಿಸಿದರು. ಎಲ್ಲಿ ಒಮ್ಮೆ ಜೋರಾಗಿ ನಿಮ್ಮ ಗಂಡನನ್ನು ಕರೆಯಿರಿ, ಹೇಗೆ ಕರೀತೀರೋ ನೋಡೋಣ ಎಂದರು. ಅವರೇನೋ ಕರೆದರು. ಅದರೆ ಲೂಸ್ ಮಾದ ಯೋಗೇಶ್ ಕನ್ಫೆಷನ್ ರೂಮಿನಿಂದ ಬಂದೇ ಬಿಡಬೇಕೆ.


Click it and Unblock the Notifications











