ಏಕವಚನ ಬಳಸದಂತೆ ಅರುಣ್ ಗೆ ಬುದ್ಧಿಮಾತು
ಮನೆಯ ಸದಸ್ಯರಿಗೆ ಬಿಗ್ ಬಾಸ್ ಈ ಬಾರಿ ಒಂದು ಅಪರೂಪದ ಉಡುಗೊರೆಯನ್ನೂ ನೀಡಿದರು. ಮದರ್ಸ್ ಡೇ ನಿಮಿತ್ತ ಅರುಣ್, ರೋಹನ್, ಅನುಶ್ರೀ, ವಿಜಯ್ ರಾಘವೇಂದ್ರ, ನಿಖಿತಾ ಅವರ ತಾಯಂದಿರ ಶುಭಹಾರೈಕೆಗಳನ್ನು ಟಿವಿಯಲ್ಲಿ ತೋರಿಸಲಾಯಿತು. ಮುದ್ರಿತ ವಿಡಿಯೋ ನೋಡಿ ಎಲ್ಲರೂ ಸಂತಸ ಪಟ್ಟರು.
ಇದೇ ಸಂದರ್ಭದಲ್ಲಿ ಅರುಣ್ ಅವರಿಗೆ ಅವರ ತಾಯಿ ಬುದ್ಧಿಮಾತನ್ನೂ ಹೇಳಿದರು. ಶರ್ಮಾ ಹಾಗೂ ಸುದೀಪ್ ಅವರನ್ನು ಹೋಗೋ ಬಾರೋ ಎಂದು ಕರೆಯಬೇಡ. ಅವರೊಂದಿಗೆ ಗೌರವದಿಂದ ನಡೆದುಕೋ ಎಂದರು. ಬಳಿಕ ಅರುಣ್ ಅವರ ನೆಚ್ಚಿನ ಸಿಹಿ ರವೆಉಂಡೆ ನೆನಪಿಸಿ ಅವರ ಬಾಯಿ ಚಪ್ಪರಿಸುವಂತೆ ಮಾಡಿದರು.

ಅನುಶ್ರೀ ಅವರ ತಾಯಿಯಂತೂ ನಾನ್ ವೆಜ್ ನೆನಪಿಸಿದರು. ಮನೆಯಲ್ಲಿ ಪ್ರತಿ ಬಾರಿ ನಾನ್ ವೆಜ್ ಮಾಡಿದಾಗ ನೀನು ನೆನಪಾಗುತ್ತೀಯ ಮಗಳೆ ಎಂದರು. ಚಂದ್ರಿಕಾ ಅವರಲ್ಲಿ ಒಂದು ವಿನಂತಿಯನ್ನೂ ಮಾಡಿದರು. ತಮ್ಮ ಮಗಳು ಏನೇ ತಪ್ಪು ಮಾಡಿದರೂ ಕ್ಷಮಿಸಿ. ಅವರನ್ನು ತನ್ನ ಮಗಳು ಎಂದುಕೊಂಡು ಅವರ ತಪ್ಪುಗಳನ್ನು ಮನ್ನಿಸುವಂತೆ ಮನವಿ ಮಾಡಿಕೊಂಡರು.
ಈ ಬಾರಿ ಮನೆಯಿಂದ ಹೊರಹೋಗಲು ಮೂರು ಮಂದಿ ನಾಮಿನೇಟ್ ಆಗಿದ್ದಾರೆ. ನರೇಂದ್ರ ಬಾಬು ಶರ್ಮಾ, ಅನುಶ್ರೀ ಹಾಗೂ ರೋಹನ್ ಗೌಡ. ಈ ಮೂವರಲ್ಲಿ ಒಬ್ಬರಿಗೆ ಈ ಬಾರಿ ಮನೆಯಿಂದ ಹೊರಹೋಗಲು ಗೇಟ್ ಪಾಸ್ ಸಿಗಲಿದೆ.
ಮನೆಯಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಸ್ವಲ್ಪ ತಣ್ಣಗಾಗಿದೆ. ಆದರೆ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಅದು ಯಾವಾಗ ಮತ್ತೆ ಹೊತ್ತಿಕೊಳ್ಳುತ್ತದೋ ಏನೋ. ಈ ವಾರ ವಧುವರ ಅನ್ವೇಷಣೆಯ ಸನ್ನಿವೇಶಗಳು ಇದ್ದು ಒಂದಷ್ಟು ಮನರಂಜನೆ ನೀಡಲು ಮನೆಯ ಸದಸ್ಯರು ಸಜ್ಜಾಗಿದ್ದಾರೆ.


Click it and Unblock the Notifications











