8ನೇ ಪ್ರಶ್ನೆಯಲ್ಲಿ ಸೋತ ಅರುಣಾ ಗಳಿಸಿದ್ದೆಷ್ಟು.? ಯಾವುದು ಆ ಪ್ರಶ್ನೆ.?

By Bharath Kumar

ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯಲ್ಲಿ ನಿನ್ನೆ ಅರುಣಾ ಎಂಬುವವರು ಭಾಗವಹಿಸಿದ್ದರು. ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸುತ್ತಿನಲ್ಲಿ ಎಲ್ಲರನ್ನ ಹಿಂದಿಕ್ಕಿದ ಇವರು ಆಟದಲ್ಲಿ ಸ್ವಲ್ಪ ಹಿಂದೆ ಬಿದ್ದರು.

ಆರಂಭದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಅರುಣಾ, ಏಂಟನೇ ಪ್ರಶ್ನೆಯಲ್ಲಿ ಎಡವಿದರು. ಈ ಪ್ರಶ್ನೆ ಅವರಿಗೆ ತುಂಬಾ ಸುಲಭವಾಗಿತ್ತು. ಆದ್ರೂ, ಯೋಚನೆ ಮಾಡುವಲ್ಲಿ ವಿಫಲರಾದರು. ಕೊನೆಯಲ್ಲಿ ಲೈಫ್ ಲೈನ್ ಕೂಡ ಬಳಸಿಕೊಂಡ್ರು, ಹಾಗಿದ್ದರೂ ಉತ್ತರ ಕೊಟ್ಟಿಲ್ಲ.

ಹೀಗಾಗಿ, 80 ಸಾವಿರದ ಪ್ರಶ್ನೆಗೆ ತನ್ನ ಆಟ ಮುಗಿಸಿದರು. ಹಾಗಿದ್ರೆ, ಅರುಣಾಗೆ ಕೇಳಲಾದ ಆ ಪ್ರಶ್ನೆ ಯಾವುದು.? ಆ ಪ್ರಶ್ನೆಗೆ ಉತ್ತರ ಏನಾಗಿತ್ತು.? ಮುಂದೆ ಓದಿ....

ಅರುಣಾ ಸೋತಿದ್ದು ಈ ಪ್ರಶ್ನೆಗೆ

ಅರುಣಾ ಸೋತಿದ್ದು ಈ ಪ್ರಶ್ನೆಗೆ

ಯಾವ ಸ್ಥಳದಲ್ಲಿ ಟಿಬೆಟಿನ್ ಶಿಬಿರಗಳು ಮತ್ತು ಸ್ಥಳೀಯವಾಗಿ ಸ್ವರ್ಣ ಮಂದಿರ ಎಂದು ಕರೆಯುವ ನ್ಯಾಮ್ ಡ್ರೋಲಿಂಗ್ ಬೌದ್ಧ ಮಠವು ಸ್ಥಾಪಿತವಾಗಿದೆ.?
A ಕುಶಾಲನಗರ
B ಸಕಲೇಶಪುರ
C ಬೈಲುಕುಪ್ಪೆ
D ವಿರಾಜಪೇಟೆ

ಸರಿಯಾದ ಉತ್ತರ ಇದಾಗಿತ್ತು

ಸರಿಯಾದ ಉತ್ತರ ಇದಾಗಿತ್ತು

80 ಸಾವಿರ ರೂಪಾಯಿ ಪ್ರಶ್ನೆ ಇದಾಗಿತ್ತು. ಈ ಪ್ರಶ್ನೆಗೆ ಉತ್ತರ ಗೊತ್ತಿರಲಿಲ್ಲ. 'ಫೋನ್ ಎ ಫ್ರೆಂಡ್' ಲೈಫ್ ಲೈನ್ ಬಳಸಿಕೊಂಡರು. ಆದ್ರೆ, ಸ್ನೇಹಿತೆ ಕೂಡ ತಪ್ಪು ಉತ್ತರ ಕೊಟ್ಟರು. ಅಂದ್ಹಾಗೆ, ಅರುಣಾ ಕೊಟ್ಟ ಉತ್ತರ: A ಕುಶಾಲನಗರ

ಸರಿಯಾದ ಉತ್ತರ : C ಬೈಲುಕುಪ್ಪೆ

'ಫಾಸ್ಟೆಸ್ಟ್ ಫಿಂಗರ್ ಫಸ್ಟ್'

'ಫಾಸ್ಟೆಸ್ಟ್ ಫಿಂಗರ್ ಫಸ್ಟ್'

ಮೊದಲನಿಂದ ಆರಂಭಿಸಿ, ಭಾರತದ ಸಾರ್ವತ್ರಿಕ ಚುನವಾಣೆಯ ಮತದಾನ ಪ್ರಕ್ರಿಯೆಯ ಈ ಹಂತಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ.?

A ಗುರುತಿನ ಚೀಟಿಯ ಪರಿಶೀಲನೆ
B ಬೆರಳಿಗೆ ಶಾಯಿಯ ಗುರುತು
C ಮತಗಟ್ಟೆಗೆ ಪ್ರವೇಶಿಸುವುದು
D ಮತ ಚಲಾಯಿಸುವುದು

ಕರೆಕ್ಟ್ ಉತ್ತರ ಇದಾಗಿತ್ತು

ಕರೆಕ್ಟ್ ಉತ್ತರ ಇದಾಗಿತ್ತು

C ಮತಗಟ್ಟೆಗೆ ಪ್ರವೇಶಿಸುವುದು
A ಗುರುತಿನ ಚೀಟಿಯ ಪರಿಶೀಲನೆ
B ಬೆರಳಿಗೆ ಶಾಯಿಯ ಗುರುತು
D ಮತ ಚಲಾಯಿಸುವುದು

ಇದು ಸರಿಯಾದ ಉತ್ತರವಾಗಿತ್ತು. ಈ ಪ್ರಶ್ನೆಗೆ ವೇಗವಾಗಿ ಮತ್ತು ಸರಿಯಾಗಿ ಉತ್ತರ ಕೊಟ್ಟಿದ್ದು, ಸವಿತಾ. ಸದ್ಯ, ಐದು ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಸವಿತಾ ನಾಳೆಗೆ ಆಟ ಮುಂದುವರಿಸಿದ್ದಾರೆ.

More from Filmibeat

English summary
'Kannadada Kotyadhipathi season 3' fifth contestant aruna has won 10 thousand rupees in show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X