For Quick Alerts
  ALLOW NOTIFICATIONS  
  For Daily Alerts

  ಆರ್ಯವರ್ಧನ್ ಮತ್ತು ಅನು ಸಿರಿಮನೆ ಅದ್ದೂರಿ ಮದುವೆ ಸಂಭ್ರಮ

  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಕೂಡ ಒಂದು. ಅದ್ದೂರಿಯಾಗಿ ಮೂಡಿಬರುತ್ತಿರುವ ಧಾರಾವಾಹಿಗಳಲ್ಲಿ ಜೊತೆಜೊತೆಯಲಿ ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಾಗಲ್ಲ. ಯಾವ ಸಿನಿಮಾಗೂ ಕಡಿಮೆ ಇಲ್ಲದ ಹಾಗೆ ಈ ಧಾರಾವಾಹಿ ಮೂಡಿಬರುತ್ತಿದೆ. ಈಗಾಗಲೇ ನಟ ಅನಿರುದ್ಧ ಮತ್ತು ಮೇಘಾ ಶೆಟ್ಟಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

  ಆರ್ಯ ವರ್ಧನ್ ಆಗಿ ನಟ ಅನಿರುದ್ಧ ಕಾಣಿಸಿಕೊಂಡಿದ್ದಾರೆ. ಅನು ಸಿರಿಮನೆ ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ಮಿಂಚಿದ್ದಾರೆ. ತನಗಿಂತ ತುಂಬಾ ದೊಡ್ಡವಾದ ಆರ್ಯವರ್ಧನ್ ಪ್ರೀತಿಯಲ್ಲಿದ್ದ ಅನು, ಮದುವೆಯಾಗ್ತಾರೋ ಇಲ್ವೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಅಂತು ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಪ್ರೇಕ್ಷಕರು. ಇಷ್ಟು ದಿನ ಇಬ್ಬರ ಪ್ರೀತಿ, ಪ್ರೇಮವನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಈಗ ಮದುವೆ ಸಂಭ್ರಮ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.

  ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ವೈಭವದ ಮದುವೆ ಸೆಟ್, ಅಲಂಕಾರ ಎಲ್ಲವೂ ಭರ್ಜರಿಯಾಗಿದ್ದು, ನೋಡುಗರ ಕಣ್ಣು ಕುಕ್ಕುತ್ತಿದೆ. ಯಾವುದೇ ರಿಯಲ್ ಮದುವೆಗಿಂತ ಕಮ್ಮಿ ಇಲ್ಲದ ಹಾಗೆ ಈ ಮದುವೆಯನ್ನು ಚಿತ್ರೀಕರಣ ಮಾಡುತ್ತಿದೆ ಧಾರಾವಾಹಿ ತಂಡ. ಅಂದಹಾಗೆ ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಸಾರಥ್ಯದಲ್ಲಿ ಮೂಡಿಬರುತ್ತಿದೆ.

  ಆರ್ಯವರ್ಧನ್ ಮತ್ತು ಅನು ಮದುವೆ ಅನೇಕ ವಿಘ್ನಗಳು ಎದುರಾಗಿದ್ದವು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ತೆಗೆದುಕೊಂಡಿದ್ದ ಧಾರಾವಾಹಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲದೊಂದಿಗೆ ನೋಡಿಸಿಕೊಂಡು ಹೋಗುತ್ತಿದೆ. ಇದೀಗ ಮದುವೆ ಸಂಭ್ರಮ ನಡೆಯುತ್ತಿದ್ದು, ಅಗರ್ಭ ಶ್ರೀಮಂತ ಆರ್ಯವರ್ಧನ್ ಮನೆಗೆ ಅನು ಸಿರಿಮನೆ ಸೊಸೆಯಾಗಿ ಹೋಗುತ್ತಿದ್ದಾರೆ. ಈ ಸಂಭ್ರಮ ಧಾರಾವಾಹಿ ತಂಡದಲ್ಲೂ ಮನೆಮಾಡಿದೆ. ಪ್ರತಿಯೊಬ್ಬರು ಅದ್ದೂರಿಯಾಗಿ ಡ್ರೆಸ್ ಮಾಡಿಕೊಂಡು ಮದುವೆಗೆ ಸಿದ್ಧರಾಗಿದ್ದಾರೆ.

  ಎಕರೆಗಟ್ಟಲೆ ವಿಶಾಲವಾದ ಜಾಗದಲ್ಲಿ ಮದುವೆ ಸೆಟ್ ಹಾಕಲಾಗಿದೆ. ಯಾವುದೇ ರಿಯಲ್ ಮದುವೆಗೂ ಕಮ್ಮಿ ಇಲ್ಲದ ಹಾಗೆ ಸಂಭ್ರಮ, ಸಡಗರ, ಅದ್ದೂರಿತನ ನೋಡಿ ಪ್ರೇಕ್ಷಕರು ಸಹ ಅಚ್ಚರಿ ಪಡುತ್ತಿದ್ದಾರೆ. ಅಂದಹಾಗೆ ಆರ್ಯವರ್ಧನ್ ಮತ್ತು ಅನು ಸಿರಿಮನೆ ಮದುವೆ ಸಂಚಿಕೆ ಇಂದಿನ (ಆಗಸ್ಟ್ 16) ಪ್ರಸಾರವಾಗಲಿದೆ. ಮದುವೆ ತಯಾರಿಯ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

  ಕಿರುತೆರೆಯಲ್ಲೂ ಸಾಕಷ್ಟು ಪೈಪೋಟಿ ಇದ್ದು, ಉಳಿದ ಧಾರಾವಾಹಿಗಿಂತ ಎಷ್ಟು ವಿಭಿನ್ನವಾಗಿ ಕಟ್ಟಿಕೊಡಲು ಸಾಧ್ಯವೂ ಅಷ್ಟು ವಿಭಿನ್ನವಾಗಿ ಜೊತೆ ಜೊತೆಯಲಿ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ ನಿರ್ದೇಶಕ ಆರೂರು ಜಗದೀಶ್. ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ ಮಾಡುತ್ತಿರುವ ಖುಷಿ ಇಡೀ ತಂಡಕ್ಕಿದೆ.

  ಈ ಬಗ್ಗೆ ಆರೂರು ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, "ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಒಂದು ಅದ್ಭುತ ತಯಾರಿಯೊಂದಿಗೆ ಈ ಮದುವೆ ಮಾಡಿದ್ದೇವೆ. ಆದಷ್ಟು ಬೇಗ ನಿಮ್ಮ ಮುಂದೆ ಬರ್ತಾ ಇದೆ ನಾವು ಎಷ್ಟೇ ಚೆನ್ನಾಗಿ ಮಾಡಿದಿವಿ ಅಂದ್ರು ಕೂಡ ಅದಕ್ಕೆ ನಿಮ್ಮ ಅಭಿಪ್ರಾಯ ಮೆಚ್ಚುಗೆ ಕಾರಣವಾಗುತ್ತೆ. ಅದಕ್ಕೋಸ್ಕರ ನಮ್ಮ ಇಡೀ ಟೀಮ್ ಕಾಯ್ತಾ ಇರ್ತೀವಿ" ಹೇಳಿದ್ದಾರೆ.

  ಇತ್ತೀಚಿಗಷ್ಟೆ ನಾಗಿಣಿ ಧಾರಾವಾಹಿ ತಂಡ ಕೂಡ ಅದ್ದೂರಿಯಾಗಿ ಮದುವೆ ಮಾಡುವ ಮೂಲಕ ಪ್ರೇಕ್ಷಕರ ಗಮನಸೆಳೆದಿದ್ದರು. ಅದು ರಿಯಲ್ ಮದುವೆನಾ ಅಥಾವ ರೀಲ್ ಮದುವೆನಾ ಎನ್ನುವ ಅನುಮಾನ ಕೂಡ ಪ್ರೇಕ್ಷಕರಲ್ಲಿ ಮೂಡಿತ್ತು. ಅಷ್ಟರ ಮಟ್ಟಿಗೆ ಅದ್ದೂರಿಯಾಗಿ ಮದುವೆ ಮಾಡಿದ್ದರು. ಇದೀಗ ಆರ್ಯವರ್ಧನ್ ಮತ್ತು ಅನು ಮದುವೆ ಕೂಡ ಅಷ್ಟೇ ಅದ್ದೂರಿಯಾಗಿ ನಡೆಯುತ್ತಿದೆ.

  ನಟ ಅನಿರುದ್ಧ್ ಸಿನಿಮಾರಂಗಕ್ಕಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಜನಪ್ರಿಯಗಳಿಸಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಅನಿರುದ್ಧ ವೃತ್ತಿ ಬದುಕಿಗೆ ದೊಡ್ಡ ಮೈಲೇಜ್ ತಂದುಕೊಟ್ಟ ಧಾರಾವಾಹಿಯಾಗಿದೆ. ಆರ್ಯವರ್ಧನ್ ಆಗಿ ಅನಿರುದ್ಧ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ.

  English summary
  Aryavardhan and Anu Sirimane grand marriage in Jothe Jotheyali serial, video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X