ಗಿಲ್ಲಿ ಅಭಿಮಾನಿಯಾದ ತಪ್ಪಿಗೆ ರೋಡ್‌ ಅಲ್ಲಿ ಮುಖ ತೋರಿಸೋಕೆ ಆಗ್ತಿಲ್ಲ ; ಕೆರಳಿ ಕೆಂಡವಾದ ಟ್ಯಾಟೂ ಕುಮಾರ್

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ. ಅವರ ನಡೆ ನುಡಿಯನ್ನೆಲ್ಲ ಅನುಸರಿಸುತ್ತಾರೆ.

ಇನ್ನೂ ಈಗೀಗ ಕೇವಲ ಸಿನಿಮಾ ಮತ್ತು ಧಾರಾವಾಹಿ ತಾರೆಯರಿಗೆ ಮಾತ್ರ ಈ ಅಭಿಮಾನಿ ಬಳಗ ಹುಟ್ಟಿಕೊಳ್ಳುತ್ತಿಲ್ಲ. ಬದಲಿಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದವರಿಗೆ ಕೂಡ ಅಭಿಮಾನದ ಶ್ರೀರಕ್ಷೆ ದೊರೆಯುತ್ತಿದೆ. ಇದಕ್ಕೆ ಗಿಲ್ಲಿ ಸದ್ಯದ ತಾಜಾ ಉದಾಹರಣೆ.

Ashamed to Face the Public Tattooed Fan Slams Gilli Nata as BBK12 Finale Promise Turns Into Betrayal

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಬಿಗ್ ಬಾಸ್'' ಮನೆಗೆ ಸಾಮಾನ್ಯನಂತೆ ಹೋದ ಗಿಲ್ಲಿ ಈಗ ಹೊರ ಬಂದ ನಂತರ ಸೆಲೆಬ್ರೆಟಿಯಾಗಿದ್ದಾರೆ. ಗಿಲ್ಲಿ ಹೋದಲ್ಲಿ ಬಂದಲ್ಲಿ ಇರುವೆಯಂತೆ ಜನ ಮುತ್ತಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳಿಂದ ಹಿಡಿದು ಚಿತ್ರರಂಗದವರು ಕೂಡ ಗಿಲ್ಲಿಗೆ ಮಾರು ಹೋಗಿದ್ದಾರೆ. ಗಿಲ್ಲಿಯನ್ನು ಭೇಟಿ ಮಾಡುತ್ತಿದ್ದಾರೆ.

ಇನ್ನು ಗಿಲ್ಲಿ ಮನೆಯಲ್ಲಿದ್ದಾಗ ಹಲವರು ಇವರಿಗೆ ಅಭಿಮಾನಿಗಳಾದರು. ಗಿಲ್ಲಿ ಗೆಲ್ಲಬೇಕೆಂದು ಬಯಸಿದರು. ಗಿಲ್ಲಿಯ ಪರ ತಾವೇ ಪ್ರಚಾರವನ್ನು ಮಾಡಿದರು. ಇನ್ನು ಕೆಲವರು ಮೈಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡರು. ಆ ಪೈಕಿ ಕುಮಾರ್ ಕೂಡ ಒಬ್ಬರು ಮತ್ತು ಮೊದಲಿಗರು.

ಆದರೆ ಈಗ ಗಿಲ್ಲಿ ಟ್ಯಾಟೂವನ್ನು ಮೈಮೇಲೆ ಹಾಕಿಸಿಕೊಂಡು ತಮ್ಮ ಅಭಿಮಾನದ ಪ್ರದರ್ಶನ ಮಾಡಿದ್ದ ಕುಮಾರ್‌ಗೆ ಪಶ್ಚಾತಾಪವಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಗಿಲ್ಲಿಯ ವಿರುದ್ದ ಕುಮಾರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಗಿಲ್ಲಿಯ ವಿರುದ್ಧ ಕೆರಳಿದ್ದಾರೆ. ಗಿಲ್ಲಿ ಮಾತು ತಪ್ಪಿದ ಮಗ ಎಂದು ಹೇಳಿದ್ದಾರೆ. ನಾವೇ ಬೆಳೆಸಿದ ಗಿಲ್ಲಿ ಇವತ್ತು ಉಲ್ಟಾ ಹೊಡೆದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ''ಬಾಸ್‌ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕುಮಾರ್ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಮೊದಲು ಹೋಗಿ ತಮ್ಮ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿಯಾಗುವುದಾಗಿ ಅವರೇ ಹೇಳಿದ್ದರು, ಆದರೆ ಈ ದಿನದವರೆಗೆ ತಮಗೆ ಬೇಕಾದವರನ್ನು ಮಾತ್ರ ಭೇಟಿಯಾಗುತ್ತಿದ್ದಾರೆ ಹೊರತು ಒಬ್ಬೇ ಒಬ್ಬ ಅಭಿಮಾನಿಯನ್ನು ಕೂಡ ಅವರು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.

Ashamed to Face the Public Tattooed Fan Slams Gilli Nata as BBK12 Finale Promise Turns Into Betrayal

ಅವರ ಮೇಲೆ ಅಭಿಮಾನ ಇತ್ತು ಅದಕ್ಕೆ ಟ್ಯಾಟೂ ಹಾಕಿಸಿಕೊಂಡೆ ಎಂದು ಹೇಳಿರುವ ಕುಮಾರ್ ನಾನು ಬಂದು ನನ್ನನ್ನು ಭೇಟಿಯಾಗಿ ಎಂದು ಹೇಳಿರಲಿಲ್ಲ, ಅವರಾಗಿ ಅವರೇ ಅನೌನ್ಸ್ ಮಾಡಿದರು ಎಂದಿದ್ದಾರೆ.
ಮುಂದುವರೆದು ರೋಡ್‌ನಲ್ಲಿ ಇವತ್ತು ಮುಖಾ ಎತ್ಕೊಂಡು ಓಡಾಡೋಕೆ ಆಗ್ತಿಲ್ಲ, ಊರಿಗೆ ಹೋಗೋಕೆ ಆಗ್ತಿಲ್ಲ, ''ಬಿಗ್ ಬಾಸ್'' ಗೆದ್ದು ಎಷ್ಟು ದಿನ ಆಯ್ತು ನಿಮ್ಮನ್ನು ಬಂದು ಗಿಲ್ಲಿ ಭೇಟಿ ಮಾಡಿದ್ರಾ ಅಂತ ಪ್ರತಿಯೊಬ್ಬರು ಬಂದು ಕೇಳ್ತಿದ್ದಾರೆ ಎಂದು ಹೇಳಿರುವ ಕುಮಾರ್ ಉತ್ತರ ಕೊಡೋಕೆ ನನ್ನಿಂದ ಆಗ್ತಿಲ್ಲ ಎಂದಿದ್ದಾರೆ.

ಇನ್ನು ಅಭಿಮಾನದ ಅರ್ಥದ ವಿಶ್ಲೇಷಣೆಯನ್ನು ಕೂಡ ಮಾಡಿರುವ ಕುಮಾರ್ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಅಂತಹ ಮೇರು ಕಲಾವಿದರೇ ತಮ್ಮ ಅಭಿಮಾನಿಗಳಿಗೋಸ್ಕರ ತಮ್ಮ ಪ್ರಾಣ ಕೊಡ್ತಿದ್ದರು, ಆದರೆ ಈ ಗಿಲ್ಲಿ ಒಬ್ಬ ಅಭಿಮಾನಿಯನ್ನಾದರೂ ಭೇಟಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮಂತಹ ಅಭಿಮಾನಿಗಳನ್ನು ಭೇಟಿ ಮಾಡಲು ಅವರ ಹತ್ರ ಟೈಮ್ ಇಲ್ವಾ ಎಂದು ಕೆಂಡ ಕಾರಿದ್ದಾರೆ. ನನ್ನನ್ನೂ ಭೇಟಿಯಾಗುವುದು ಬೇಡ, ಅವರನ್ನು ಅಷ್ಟೊಂದು ಹುರಿದುಂಬಿಸಿ ಪ್ರಚಾರ ಮಾಡಿದರಲ್ಲ, ಅವರಲ್ಲಿ ಯಾರಾದರೂ ಒಬ್ಬರನ್ನಾದರು ಗಿಲ್ಲಿ ಭೇಟಿಯಾಗಿದ್ದಾರಾ ?ಎಂದಿದ್ದಾರೆ.

ನನ್ನ ಮನೆಯವರೇ ನನಗೆ ಬಾಯಿಗೆ ಬಂದಂತೆ ಬೈತಿದಾರೆ, ದೊಡ್ಡದಾಗಿ ಅವತ್ತು ''ಬಿಗ್ ಬಾಸ್‌''ನಲ್ಲಿ ಹೇಳಿದನಲ್ಲ, ಬಂದ್ನಾ ಗಿಲ್ಲಿ ಎಂದು ಕೇಳ್ತಿದ್ದಾರೆ, ಬಂದು ಭೇಟಿ ಮಾಡಿದ್ನಾ ನಿನ್ನನ್ನ ಅಂತಾ ನಮ್ಮ ಮನೆಯವರು ನನಗೆ ಕೇಳ್ತಿದ್ದಾರೆ ನಾನು ಏನು ಉತ್ತರ ಕೊಡ್ಲಿ ಎಂದು ಹೇಳಿರುವ ಕುಮಾರ್ ನನ್ನ ಟ್ಯಾಟೂ ಹಾಕಿಸಿಕೊಂಡಿದೀಯಾ..? ನನ್ನ ಮಗನ ಟ್ಯಾಟೂ ಹಾಕಿಸಿಕೊಂಡಿದೀಯಾ..? ಇಲ್ಲ ನಿಮ್ಮ ಅಪ್ಪ ಅಮ್ಮಂದಾದರೂ ಹಾಕಿಸಿಕೊಂಡಿದೀಯಾ ಅಂತ ಮನೆಯವರು ಕೇಳ್ತಿದ್ದಾರೆ ಏನು ಹೇಳೋದು ಅಂತ ಹೇಳಿದ್ದಾರೆ. ಹೀಗೆ ''ಬಾಸ್ ಟಿವಿ''ಗೆ ನೀಡಿದ ಸಂದರ್ಶನದೂದ್ದಕ್ಕೂ ಗಿಲ್ಲಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ.

More from Filmibeat

English summary
"Ink is permanent, but was Gilli’s promise temporary? A tattooed fan claims betrayal after the Bigg Boss star skips their meeting. See the viral reaction here."
Read more about: gilli nata biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X