'ಬಿಗ್ ಬಾಸ್'ನಿಂದ ಆಶಿತಾ ಔಟ್ ಆದ್ರೇ, ಜನರಿಗೆ ಎಷ್ಟು ಖುಷಿ ನೋಡಿ
'ಬಿಗ್ ಬಾಸ್' ಕಾರ್ಯಕ್ರಮದಿಂದ ಈ ವಾರ ನಟಿ ಆಶಿತಾ ಚಂದ್ರಪ್ಪ ಹೊರ ನಡೆದಿದ್ದಾರೆ. ಜಗನ್ ಹೊರತು ಪಡಿಸಿ 'ಬಿಗ್ ಬಾಸ್'ನಲ್ಲಿನ ಎಲ್ಲ ಆಟಗಾರರು ನೇರವಾಗಿ ನಾಮಿನೇಟ್ ಆಗಿದ್ದರು. ಆದರೆ ಇವರ ಪೈಕಿ ಈಗ ಆಶಿತಾ ಔಟ್ ಆಗಿದ್ದಾರೆ. ಈ ಮೂಲಕ ಸೆಲೆಬ್ರಿಟಿಗಳ ಗುಂಪಿನ ಮತ್ತೊಂದು ವಿಕೆಟ್ ಪತನ ಆಗಿದೆ.
ಇನ್ನು ಮನೆಯಿಂದ ಹೊರ ಬಂದಿರುವ ಆಶಿತಾ ಕಂಡು 'ಬಿಗ್ ಬಾಸ್' ಕಾರ್ಯಕ್ರಮದ ವೀಕ್ಷಕರು ಖುಷಿ ಆಗಿದ್ದಾರೆ. 'ಕಲರ್ಸ್ ಸೂಪರ್' ವಾಹಿನಿ ಫೇಸ್ ಬುಕ್ ಫೇಜ್ ನಲ್ಲಿ ಆಶಿತಾ ಔಟ್ ಆದ ಪೋಸ್ಟ್ ಹಾಕಿದ್ದು, ಅದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಆಶಿತಾ ಅವರನ್ನು ಮನೆಯಿಂದ ಔಟ್ ಮಾಡಿದ 'ಬಿಗ್ ಬಾಸ್' ನಿರ್ಧಾರದ ಬಗ್ಗೆ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಎಲಿಮಿನೇಟ್ ಆದ ಆಶಿತಾ
'ಬಿಗ್ ಬಾಸ್' ಕಾರ್ಯಕ್ರಮದಿಂದ ಈ ವಾರ ನಟಿ ಆಶಿತಾ ಔಟ್ ಆಗಿದ್ದಾರೆ. ನಾಯಕ ಜಗನ್ ಬಿಟ್ಟು ಮನೆಯ ಎಲ್ಲ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದರು.

ಹೊಡಿರಿ ಚಪ್ಪಾಳೆ.. ಹಾಕ್ರೊ ಸ್ಟೆಪ್ಪು..
''ಹೊಡಿರಿ ಚಪ್ಪಾಳೆ.. ಹಾಕ್ರೊ ಸ್ಟೆಪ್ಪು..'' ಎಂದು ಆಶಿಕಾ ನಿರ್ಗಮನವನ್ನು ವೀಕ್ಷಕರು ಆಚರಿಸುತ್ತಿದ್ದಾರೆ.

ಮತ್ತೆ ಕಳುಹಿಸಬೇಡಿ
''ಆಶಿಕಾ ಹೊರ ಬಂದಿದಕ್ಕೆ ನಮಗೆ ಖುಷಿ ಆಗಿದೆ. ಅವರನ್ನು ಮತ್ತೆ ಒಳಗೆ ಕಳುಹಿಸಬೇಡಿ ಎಂದು 'ಬಿಗ್ ಬಾಸ್'ಗೆ ಮನವಿ ಮಾಡಿದ್ದಾರೆ.

ಅನುಪಮಗೆ ಖುಷಿ ಆಗಿದೆ
''ಅನುಪಮಗೆ ಒಳಗೆ ಖುಷಿ ಆಗಿದೆ. ಆದರೆ ಹೊರಗೆ ನೋವಾದಂತೆ ನಟಿಸುತ್ತಿದ್ದಾರೆ'' ಎನ್ನುತ್ತಾರೆ ಕೆಲವು ವೀಕ್ಷಕರು.

ಕಳಪೆ ಆಟಗಾರ್ತಿ
''ಬಿಗ್ ಬಾಸ್' ನಲ್ಲಿ ಆಶಿತಾ ಕಳಪೆ ಆಟಗಾರ್ತಿ. ಅವರು ಔಟ್ ಆಗಿದು ಖುಷಿ ಆಗಿದೆ'' ಎನ್ನುವುದು ಜನರ ಅಭಿಪ್ರಾಯ

ಚಿಕ್ಕ ಮಕ್ಕಳು ನೋಡಬಹುದು
''ಅಬ್ಬಾ ಸದ್ಯ ಇನ್ನು ಮೇಲಾದ್ರೂ ನಮ್ಮ ಮನೆಯಲ್ಲಿರೋ ಚಿಕ್ಕ ಮಕ್ಕಳನ್ನ ಬಿಗ್ ಬಾಸ್ ನೋಡೋಕೆ ಬಿಡ್ತೀವಿ'' ಎಂದು ವೀಕ್ಷಕಕರೊಬ್ಬರು ಕಮೆಂಟ್ ಮಾಡಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್
ಆಶಿಕಾ ಬಗ್ಗೆ ಈಗಾಗಲೇ ಅನೇಕ ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸದ್ಯ 11 ಜನ ಉಳಿದಿದ್ದಾರೆ
''ಆಶಿತಾ ಔಟ್ ಆದ ಬಳಿಕ ಸದ್ಯ ಮುಂದಿನ ವಾರದಿಂದ 11 ಜನ ಸ್ಪರ್ಧಿಗಳು 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಂಡಿದ್ದಾರೆ.''


Click it and Unblock the Notifications











