ಅನಾಥಪ್ರಜ್ಞೆ, ಒಂಟಿತನ - ಕುಡಿತಕ್ಕೆ ದಾಸಿಯಾಗಿದ್ದಳು ತಾಯಿ ; ಕಲ್ಲು ಮುಳ್ಳಿನ ಹಾದಿ, ಬಿಗ್ ಬಾಸ್‌ ಅಶ್ವಿನಿ ಕಣ್ಣೀರು

ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಂಡವರಿಗೆ ಕೂಡ ಕಷ್ಟ ಇರುತ್ತೆ. ಅವರದ್ದೇ ಆದ ದು:ಖ ಸಂಕಟಗಳಿರುತ್ತವೆ. ವ್ಯೆಯಕ್ತಿಕ ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರು ಕೂಡ ಇವರಿಗೆ ನೆಮ್ಮದಿ ಸಿಗುವುದಿಲ್ಲ. ಹಲವು ರೀತಿಯಲ್ಲಿ ಹಲವರು ಇಲ್ಲಿ ಒಳಗೊಳಗೆ ನೋವು ಅನುಭವಿಸುತ್ತಿರುತ್ತಾರೆ.

ಇನ್ನೂ ಕೆಲವರು ನೋವನ್ನು ಸಹಿಸಲಾಗದೇ ಖಿನ್ನತೆಗೆ ಒಳಗಾಗುತ್ತಾರೆ.ಮತ್ತೂ ಕೆಲವರು ನಂಬಿಕೆ ಕಳೆದುಕೊಳ್ಳದೇ ಇಂದಲ್ಲ ನಾಳೆ ಗೆಲ್ಲಬಹುದು, ಎಲ್ಲಾ ಅಡೆ ತಡೆಗಳನ್ನು ದಾಟಿಕೊಂಡು ಗೆಲುವಿನ ದಡವನ್ನು ಸೇರಬಹುದು ಎನ್ನುವ ಉದ್ದೇಶದಲ್ಲಿ ಇಲ್ಲಿ ಪ್ರಯತ್ನವನ್ನು ಪಡುತ್ತಾರೆ. ಎಲ್ಲಾ ನೋವನ್ನು ನುಂಗಿಕೊಂಡು ನಗು ನಗುತ್ತಲೇ ಬದುಕುತ್ತಾರೆ. ಗುರಿಯತ್ತ ದಾಪುಗಾಲು ಹಾಕಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಪ್ರಯಾಣದಲ್ಲಿ ಹೆಸರು-ಕೀರ್ತಿ-ಹಣವನ್ನು ಕೂಡ ಗಳಿಸುತ್ತಾರೆ. ಉದಾಹರಣೆಗೆ ಅಶ್ವಿನಿ.

ASHVINI S UNTOLD PAIN Ex-Bigg Boss Kannada 12 Contestant Details Mother s Alcoholism Battle

ಹೌದು, ಅಶ್ವಿನಿ.. ಕಿರುತೆರೆಯ ''ಮುದ್ದುಲಕ್ಷ್ಮಿ''. ಜಾಹ್ನವಿ ಪಾತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಅಶ್ವಿನಿ ''ಗಿರಿಜಾ ಕಲ್ಯಾಣ''.. ''ಕುಲವಧು'' ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅನೇಕರ ಹೃದಯವನ್ನು ಗೆದ್ದರು. ಇಷ್ಟೇ ಅಲ್ಲ ''ಬಿಗ್ ಬಾಸ್ ಕನ್ನಡ 12''ನೇ ಸೀಸನ್‌ನ ಸ್ಫರ್ಧಿಯಾಗಿ ಕೂಡ ಆಯ್ಕೆಯಾದ ಅಶ್ವಿನಿ ಮನೆಯಲ್ಲಿ ಕೆಲ ಹೊತ್ತು ಕಾಲವನ್ನು ಕೂಡ ಕಳೆದರು. ಕಾಲೆಳೆಯೋರ ಜೊತೆ ಹೊಡೆದಾಡಲು ಸಾಧ್ಯವಾಗದೇ ಮನೆಯಾಚೆ ಕೂಡ ಬಂದರು.

ಇಂಥಾ ಅಶ್ವಿನಿ ಸದ್ಯ ''ಬಿಗ್ ಬಾಸ್'' ಮನೆಯಿಂದ ಹೊರಗಡೆ ಬಂದ ನಂತರ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮನೆಯಲ್ಲಿ ತಾವು ಎಡವಿದ್ದು ಎಲ್ಲಿ..? ಯಾವ ಸ್ಫರ್ಧಿಯ ಜಾತಕ ಹೇಗಿದೆ..? ಫಿನಾಲೆಗೆ ಯಾರು ಹೋಗಬಹುದು..? ಎಂಬೆಲ್ಲಾ ವಿಚಾರಗಳ ಕುರಿತು ಮಾತನಾಡುತ್ತಿದ್ದಾರೆ. ಇದೇ ಸಮಯದಲ್ಲಿ ''ಫಸ್ಟ್ ಡೇ ಫಸ್ಟ್ ಶೋ''.. ''ವಿಜಯ ಕರ್ನಾಟಕ'' ಸೇರಿ ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವ್ಯೆಯಕ್ತಿಕ ಬದುಕಿನ ಏರಿಳಿತದ ಕುರಿತು ಕೂಡ ಅಶ್ವಿನಿ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅಶ್ವಿನಿ ನನ್ನ ಬದುಕು ನನ್ನ ಜವಾಬ್ಧಾರಿ. ಇವತ್ತು ನನ್ನ ಜೀವನದಲ್ಲಿ ಏನೆಲ್ಲಾ ಆಗಿದೆ ಅದೆಲ್ಲದಕ್ಕೂ ನನ್ನ ನಿರ್ಧಾರಗಳು ಕಾರಣ ಎಂದು ಹೇಳಿದ್ದಾರೆ. ನಾನೇನಾದರೂ ಮಾತನಾಡಿದರೆ ಅದು ಓನ್ ಸೈಡ್ ಕಥೆ ಆಗುತ್ತೆ. ಆದರೆ ಎರಡು ಕಡೆಯಿಂದ ಕೇಳಿದಾಗ ಅದು ವಾಸ್ತವಕ್ಕೆ ಹತ್ತಿರ ಎನ್ನುವ ಭಾವನೆ ಬರುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು 10-11 ವರ್ಷದಿಂದ ನಾನು ಮನೆಯಿಂದ ದೂರ ಇದ್ದೇನೆ ಎಂದು ಹೇಳಿರುವ ಅಶ್ವಿನಿ ನನ್ನ ತಾಯಿಗೆ ಮದ್ಯಪಾನದ ಚಟ ಇತ್ತು. ತಾಯಿ ಸ್ಥಾನದಲ್ಲಿ ತಂದೆ ಇದ್ದಿದ್ದರೆ ಅದು ಬೇರೆ.‌ ಆದರೆ, ತಾಯಿನೇ ಹೀಗೆ ಅಂದಾಗ ಯಾವ ಲೆವೆಲ್‌ಗೆ ಅದು ನನ್ನ ಮೇಲೆ ಪರಿಣಾಮ ಬೀರಿರಬಹುದು ನೀವೆ ಊಹಿಸಿ ಎಂದು ಹೇಳಿದ್ದಾರೆ. ನನಗೆ ಜನರ ಸಹಾನುಭೂತಿ ಬೇಡ. ಆ ತರಹದ ಬದುಕು ಬದುಕಲು ನನಗೆ ಇಷ್ಟ ಇರಲಿಲ್ಲ. ಯಾಕೆಂದರೆ ನನಗೆ ನನ್ನದೇ ಆದ ಜೀವನ ಇದೆ ಎಂದು ಹೇಳಿದ್ದಾರೆ.

ashvinis-untold-pain-ex-bigg-boss-kannada-12-contestant-details-mothers-alcoholism-battle

ಇನ್ನೂ ಇದೇ ಸಮಯದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮದ ಕುರಿತು ಕೂಡ ತಮ್ಮ ಅಸಮಾಧಾನ ಹೊರ ಹಾಕಿರುವ ಅಶ್ವಿನಿ, ಯೋಗ್ಯರಲ್ಲದ ಇನ್ನೂ ಹಲವರು ಮನೆಯಲ್ಲಿದ್ದಾರೆ. ಆದರೆ ಎಲ್ಲಾ ಯೋಗ್ಯತೆ ಹೊಂದಿರುವ ನಾನು ಆ ಮನೆಯಿಂದ ಹೊರಗಡೆ ಬಂದು ನಿಮ್ಮೆಲ್ಲರ ಎದುರು ಕುಂತಿದ್ದೇನೆ ಎಂದು ಹೇಳಿದ್ದಾರೆ. ನನ್ನಲ್ಲಿಯೂ ಕೂಡ ಕೇಳಲು ಹಲವು ಪ್ರಶ್ನೆಗಳಿವೆ. ಸದ್ಯಕ್ಕೆ ಬ್ಯುಸಿಯಾಗಿರುವುದರಿಂದ ಆ ಕಡೆ ಹೆಚ್ಚು ಯೋಚನೆ ಮಾಡಿಲ್ಲ. ಮುಂದೆ ನೋಡೋಣ ಎಂದು ಕೂಡ ಅಶ್ವಿನಿ ಹೇಳಿದ್ದಾರೆ.

More from Filmibeat

English summary
Ex-BBK 12 star Ashvini shares her family's painful secret. Read her emotional confession on growing up with a mother who battled severe alcoholism
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X