BBK 12: ರಕ್ಷಿತಾಗೆ "S..." ಎಂದ ಅಶ್ವಿನಿ ಗೌಡ; ವೀಕ್ಷಕರ ಆಕ್ರೋಶ, ಸುದೀಪ್ ಈ ಬಗ್ಗೆ ಮಾತನಾಡ್ತಾರಾ?
ಬಿಗ್‌ಬಾಸ್ ಕನ್ನಡ ಸೀಸನ್ 12 ವೀಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸ್ತಿದೆ. ಇದೀಗ ಶೋ 20ನೇ ದಿನಕ್ಕೆ ಕಾಲಿಟ್ಟಿದೆ. ಮನೆಯೊಳಗೆ 16 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮೊದಲ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಕೆಲವರು ಸೇಫ್ ಆಗಿದ್ದರೆ ಮತ್ತೆ ಕೆಲವರ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.
ದೊಡ್ಮನೆ ಒಳಗೆ 'ರಕ್ಷಿತಾ ಶೆಟ್ಟಿ vs ಅಶ್ವಿನಿ ಗೌಡ & ಜಾಹ್ನವಿ' ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೇಕಂತಲೇ ರಕ್ಷಿತಾರನ್ನು ಇವರಿಬ್ಬರು ಟಾರ್ಗೆಟ್ ಮಾಡುತ್ತಿದ್ದಾರೆ. ಬಹಳ ಕ್ಷುಲ್ಲಕವಾಗಿ ಕಾಣುತ್ತಿದ್ದಾರೆ. ಆಕೆಯ ನಡೆ ನುಡಿಯನ್ನು ಇಮಿಟೇಟ್ ಮಾಡಿ ವ್ಯಂಗ್ಯವಾಡುತ್ತಿದ್ದಾರೆ. ಸುಳ್ಳ ಆರೋಪ ಮಾಡಿ ಕಾಲೆಳೆಯುತ್ತಲೇ ಇರ್ತಾರೆ. ರಕ್ಷಿತಾ ಕೂಡ ಖಡಕ್ ತಿರುಗೇಟು ಕೊಡುತ್ತಿದ್ದಾರೆ. ಆದರೆ ರಕ್ಷಿತಾ ಬಗ್ಗೆ ಅಶ್ವಿನಿ ಬಳಸಿದ ಪದವೊಂದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ.

ತಮ್ಮ ಮೇಲೆ ಪದೇ ಪದೇ ಅಶ್ವಿನಿ ಹಾಗೂ ಜಾಹ್ನವಿ ಮುಗಿಬಿದ್ದರೂ ಜಗ್ಗದೇ ವಾದ, ಜಗಳ ಮಾಡುತ್ತಿದ್ದಾರೆ. ಗೆಜ್ಜೆ ಸದ್ದಿನ ವಿಚಾರವನ್ನಿಟ್ಟುಕೊಂಡು ರಕ್ಷಿತಾ ಜೊತೆ ಕಿರಿಕ್ ತೆಗೆದಿದ್ದಾರೆ. ಆದರೆ ಗೆಜ್ಜೆ ಸದ್ದು ಮಾಡಿದ್ದು ಯಾರು ಎನ್ನುವುದು ಕೆಲವರಿಗೆ ಗೊತ್ತಾಗಿದೆ. ಗಿಲ್ಲಿ ನಟ ಕೂಡ ಜಾಹ್ನವಿ ಹಾಗೂ ಅಶ್ವಿನಿ ಗೌಡಗೆ ಟಾಂಗ್ ಕೊಡುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡ ಅಶ್ವಿನಿ ಪ್ರಶ್ನೆಗಳಿಗೆ ಗಿಲ್ಲಿ ನಟ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದಾರೆ.
ಅಶ್ವಿನಿ ಗೌಡ ಹಾಗೂ ಜಾಹ್ನವಿ ಮನೆಯಲ್ಲಿ ಒಂದು ಗುಂಪಾಗಿ ಬಿಟ್ಟಿದ್ದಾರೆ. ಜೊತೆಜೊತೆಯಾಗಿ ಓಡಾಟ, ಮಾತು ಹರಟೆ ನಡೆಸುತ್ತಿದ್ದಾರೆ. ಸದಾ ರಕ್ಷಿತಾ ಶೆಟ್ಟಿ ವಿರುದ್ಧ ಹಲ್ಲು ಮಸೆಯುವ ಕೆಲಸ ಮಾಡುತ್ತಿದ್ದಾರೆ. ನಿನ್ನೆ(ಅಕ್ಟೋಬರ್ 17)ಯ ಎಪಿಸೋಡ್‌ನಲ್ಲಿ ರಕ್ಷಿತಾಳನ್ನು 'ಸ್ಲಮ್' ಎಂದು ಅಶ್ವಿನಿ ಗೌಡ ಕರೆದಿದ್ದಾರೆ.

ಅಶ್ವಿನಿ 'ಸ್ಲಮ್' ಎಂಬ ಪದ ಬಳಸಿದ್ದನ್ನು ಮ್ಯೂಟ್ ಮಾಡಲಾಗಿದೆ. ಆದರೂ ವೀಕ್ಷಕರಿಗೆ ಅದು ಸ್ಪಷ್ಟವಾಗಿ ಗೊತ್ತಾಗಿದೆ. ಮತ್ತೊಮ್ಮೆ ಈ ಬಗ್ಗೆ ಅಶ್ವಿನಿ, ಜಾಹ್ನವಿ ಮಾತನಾಡುವ ವೇಳೆ ಅದೇ "S..." ಎಂದಿರುವುದನ್ನು ವೀಕ್ಷಕರು ಗಮನಿಸಿದ್ದಾರೆ. ಏನೇ ಕಿರಿಕ್ ಆಗಿದ್ದರೂ ಅಶ್ವಿನಿ ಗೌಡ ಆ ಪದ ಬಳಸಿದ್ದು ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಧ್ಯಾಹ್ನ ಗಾರ್ಡನ್ ಏರಿಯಾದಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಕೂತು ಮಾತನಾಡುತ್ತಿದ್ದರು. ಈ ವೇಳೆ "ಅವಳು ಮಾಡಿದ್ದು ನಿನ್ನೆ ಇನ್ನು ನನ್ನ ತಲೆಯಲ್ಲೇ ಕೂತಿದೆ. ಹೆಂಗೆ ಆಡ್ತಿದ್ಲು ಅವ್ಳು. ತೀರ 'ಸ್ಲಮ್' ತರ ಆಡ್ತಿದ್ಲಪ್ಪ ಅವ್ಳು. ಅವಳ ಲೆವೆಲ್‌ಗೆ ನಾವೆಲ್ಲಾ ಇಳಿಯೋಕೆ ಆಗಲ್ಲ" ಎಂದಿದ್ದಾರೆ. ಬಳಿಕ ರಕ್ಷಿತಾ ಮಾತನಾಡುವ ಶೈಲಿಯನ್ನು ಇಮಿಟೇಟ್ ಮಾಡಿ ಅಶ್ವಿನಿ ಅಣಕವಾಡಿದ್ದಾರೆ.
ರಾತ್ರಿ 11 ಗಂಟೆಗೆ ಮತ್ತೆ ಇಬ್ಬರೂ ಮಾತನಾಡು ವೇಳೆ "ಅವಳಿಗೆ ಫುಲ್ ಶೇಪ್ ಔಟ್ ಆಗೋಯ್ತು. ಏನು ಮಾತನಾಡಲಿಲ್ಲ ಇವತ್ತು. ನಾನು ಹೇಳಲಿಲ್ವಾ ಆ "S.." ಎಂದು ಅಶ್ವಿನಿ ಹೇಳಿರುವುದು ವೈರಲ್ ಆಗ್ತಿದೆ. ಈ ಬಗ್ಗೆ ವೀಕೆಂಡ್ ಪಂಚಾಯ್ತಿ ವೇಳೆ ಸುದೀಪ್ ಮಾತನಾಡಬೇಕು, ಅಶ್ವಿನಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











