ವೋಟ್ ಲೆಕ್ಕ ಹೊರಗಿಟ್ರೆ ನಾನೇ ವಿನ್ನರ್ ಎಂದಿದ್ದ ಅಶ್ವಿನಿ ತಮ್ಮ ಕಣ್ಣೆದುರೇ ಗಿಲ್ಲಿ ಕ್ರೇಜ್ ನೋಡಿ ಸೈಲೆಂಟ್?

ಬಿಗ್‌ಬಾಸ್ ಸೀಸನ್ 12 ಫಿನಾಲೆ ನಡೆದು ತಿಂಗಳು ಕಳೆದರೂ ಗಿಲ್ಲಿ ಹವಾ ಮಾತ್ರ ಕಿಂಚಿತ್ತೂ ಕಮ್ಮಿ ಆಗ್ಲಿಲ್ಲ. ಮಂಡ್ಯ ಹೈದ ಎಲ್ಲೇ ಹೋದ್ರು ಅಭಿಮಾನಿಗಳು ಮುತ್ತಿಕೊಳ್ತಾರೆ. ಕೈ ಕುಲುಕಲು, ಜೊತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್‌ ಪಡೆಯಲು ಮುಗಿಬೀಳ್ತಾರೆ. ಇತ್ತೀಚೆಗೆ 'ಹಯಗ್ರೀವ' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕೂಡ ಗಿಲ್ಲಿ ನಟನ ಕ್ರೇಜ್ ಜೋರಾಗಿತ್ತು.

ಧನ್ವೀರ್ ಗೌಡ ನಟನೆಯ 'ಹಯಗ್ರೀವ' ಚಿತ್ರದಲ್ಲಿ ಗಿಲ್ಲಿ ಕೂಡ ನಟಿಸಿದ್ದಾರೆ. ಮಂಡ್ಯದಲ್ಲಿ ಟ್ರೈಲರ್ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಿಗ್‌ಬಾಸ್ ಸೀಸನ್ 12ರ ಸೆಕೆಂಡ್ ರನ್ನರ್ ಅಪ್ ಅಶ್ವಿನಿ ಗೌಡ ಕೂಡ ಹಾಜರಾಗಿದ್ದರು. ನಾನೇ ಬಿಗ್‌ಬಾಸ್ ವಿನ್ನರ್ ಆಗಬೇಕಿತ್ತು, ಗಿಲ್ಲಿ ಗೆದ್ದಿದ್ದು ಇಷ್ಟವಾಗಲಿಲ್ಲ ಎಂದು ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಅಶ್ವಿನಿ ಹೇಳಿದ್ದರು. ಈ ಬಗ್ಗೆ ಗಿಲ್ಲಿ ಮಾತ್ರ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ.

Ashwini Gowda Falls Silent as Gilli Craze Steals Spotlight at Hayagriva mandya event

ಬಿಗ್‌ಬಾಸ್-12 ಫಿನಾಲೆ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಮುಖಾಮುಖಿ ಆಗಿದ್ದರು. 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಒಬ್ಬರನ್ನೊಬ್ಬರು ಕಾಲೆಳೆದು ವೀಕ್ಷಕರನ್ನು ರಂಜಿಸಿದ್ದರು. ಅದೆಲ್ಲ ಏನೇ ಇದ್ದರೂ ಗಿಲ್ಲಿ ಬಗ್ಗೆ ಅಶ್ವಿನಿ ಅವರಿಗೆ ಸಣ್ಣದಾಗಿ ಕೋಪ ಇರುವುದು ಗೊತ್ತೇಯಿದೆ. ಬಿಗ್‌ಬಾಸ್ ಮನೆ ಒಳಗೆ ಕೂಡ ಇಬ್ಬರ ನಡುವೆ ಪದೇ ಪದೆ ಕಿರಿಕ್ ನಡೆಯುತ್ತಿತ್ತು.

ನನ್ನ ಕೋಪ ಬಳಸಿಕೊಂಡು ಗಿಲ್ಲಿ ಬಿಗ್ ಬಾಸ್ ಗೆದ್ದಿದ್ದಾನೆ. ಸ್ಟ್ರ್ಯಾಟರ್ಜಿ ಮಾಡಿ ಗೇಮ್ ಪ್ಲ್ಯಾನ್ ಮಾಡಿ ಆಟ ಆಡಿದ್ದ. "ನನ್ನ ಮಾಹಿತಿ ಪ್ರಕಾರ ಅವರಿಗೆ ಬಂದಿರುವ ವೋಟ್‌ಗಳಿಗೂ ನನಗೆ ಬಂದಿರುವ ವೋಟ್‌ಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ. ವೋಟ್ ಲೆಕ್ಕ ಬಹಿರಂಗಪಡಿಸಿದ್ದರೆ ನಾನೇ ವಿನ್ನರ್.. ಇದು ಕಾಮಿಡಿ ಶೋ ಅಲ್ಲ. ಇದು ವ್ಯಕ್ತಿತ್ವದ ಆಟ. ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಗೊತ್ತಿಲ್ಲ" ಎಂದು ಅಶ್ವಿನಿ ಹೇಳಿದ್ದನ್ನು ವೀಕ್ಷಕರು ಇನ್ನು ಮರೆತ್ತಿಲ್ಲ.

ಗಿಲ್ಲಿ ಬಡವ ಅಲ್ಲ, ಬಡವನ ರೀತಿ ಪೋಸ್ ಕೊಟ್ಟು ಗೆದ್ದಿದ್ದಾನೆ ಎಂದು ಕೂಡ ಅಶ್ವಿನಿ ಗೌಡ ಹೇಳಿದ್ದರು. ಆದರೆ ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ದೊಡ್ಮನೆ ಒಳಗೆ ಇದ್ದಾಗಲೇ ಹೊರಗಡೆ ಜನ ಆತನ ಆಟವನ್ನು ಮೆಚ್ಚಿಕೊಂಡಿದ್ದರು. ದೊಡ್ಡಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಗಿಲ್ಲಿ ಕಾಮಿಡಿ ಟೈಮಿಂಗ್, ಇತರೆ ಸ್ಪರ್ಧಿಗಳಿಗೆ ಕೊಡುತ್ತಿದ್ದ ಕೌಂಟರ್ ಎಲ್ಲವನ್ನು ಮೆಚ್ಚಿದ್ದರು. ಗಿಲ್ಲಿಗೆ ದಾಖಲೆ ಮಟ್ಟದಲ್ಲಿ ವೋಟ್ ಬಂದಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ ಗಿಲ್ಲಿ ಕ್ರೇಜ್ ಹೇಗಿದೆ ಎನ್ನುವುದು ಬಿಗ್‌ಬಾಸ್ ಮನೆಯಿಂದ ಹೊರಬಂದಾಗ ಅಶ್ವಿನಿ ಗೌಡ ಅವರ ಅರಿವಿಗೆ ಬಂದಿರಲಿಲ್ಲ ಅನಿಸುತ್ತದೆ. ಹಾಗಾಗಿ ಆ ರೀತಿ ಮಾತನಾಡಿರಬಹುದು ಎನ್ನುವುದು ಕೆಲವರ ವಾದ.

ಸದ್ಯ ಮಂಡ್ಯದಲ್ಲಿ ನಡೆದ 'ಹಯಗ್ರೀವ' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇಳೆ ಗಿಲ್ಲಿ ಕ್ರೇಜ್ ನೋಡಿ ಪಕ್ಕದಲ್ಲೇ ಇದ್ದ ಅಶ್ವಿನಿ ಅವಕ್ಕಾಗಿದ್ದಾರೆ. ವೇದಿಕೆಯಲ್ಲಿ ಇಬ್ಬರೂ ಅಕ್ಕಪಕ್ಕ ನಿಂತಿದ್ದಾಗ ಒಮ್ಮೆಲೆ ಕೆಲ ಅಭಿಮಾನಿಗಳು ವೇದಿಕೆ ಏರಿ ಗಿಲ್ಲಿ ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದಾರೆ. ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಒಂದು ಹಂತಕ್ಕೆ ಅಶ್ವಿನಿ ಅವರು ಪಕ್ಕ ಸರಿದು ನಿಲ್ಲುವಂತಾಗಿದೆ.

ಬಿಗ್‌ಬಾಸ್ ಶೋನಲ್ಲಿ ಬೇರೆಯವರಿಗೆ ಬಂದಿರುವ ವೋಟ್‌ಗಳಿಗೂ ನನಗೆ ಬಂದಿರುವ ವೋಟ್‌ಗಳಿಗೂ ಅಜಗಜಾಂತರ ವ್ಯತ್ಯಾಸ ಇದೆ ಎನ್ನುತ್ತಿದ್ದ ಅಶ್ವಿನಿ ಈಗ ಗಿಲ್ಲಿ ಕ್ರೇಜ್ ನೋಡಿ ಸೈಲೆಂಟ್ ಆಗಿಬಿಟ್ಟಿದ್ದಾರೆ ಎಂದು ಅಭಿಮಾನಿಗಳು ವೀಡಿಯೋ ವೈರಲ್ ಮಾಡಿದ್ದಾರೆ. ಫೆಬ್ರವರಿ 27ಕ್ಕೆ 'ಹಯಗ್ರೀವ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

More from Filmibeat

Read more about: gilli bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X