ಬಿಗ್ ಬಾಸ್ ಮನೆಯಲ್ಲಿಯೂ ಇಲ್ಲ..ಸೀಕ್ರೆಟ್ ರೂಮ್‌ನಲ್ಲಿಯೂ ಇಲ್ಲ ; ಸೂಟ್‌ಕೇಸ್ ಸಮೇತ ಹೋಗಿದ್ದೆಲ್ಲಿ ಅಶ್ವಿನಿ ಗೌಡ ?

''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.

ಈ ನಿಯಮದಡಿಯಲ್ಲಿಯೇ ಅಶ್ವಿನಿ ಗೌಡ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿದೆಯಾ..? ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಹೌದು, ''ಬಿಗ್ ಬಾಸ್'' ಮನೆಯಿಂದ ಕಳೆದ ವಾರ ಮಲ್ಲಮ್ಮ ಹೊರ ಬಂದರು. ಆದರೆ ಈ ವಾರ ಯಾರು ಬರುತ್ತಾರೆ ಎನ್ನುವ ಪ್ರಶ್ನೆ ಇದೆ.

ASHWINI GOWDA IS SAFE The BBK 12 Elimination Was a MASSIVE Twist

ಯಾಕೆಂದರೆ ಎಲ್ಲರ ನೆತ್ತಿಯ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಇನ್ನು ರಿಷಾ ಮತ್ತು ಗಿಲ್ಲಿ ನಡುವೆ ಕೈ ಕೈ ಮಿಲಾಯಿಸುವ ಮಟ್ಟಿಗೆ ಗಲಾಟೆಯಾಗಿದೆ. ಹೀಗಾಗಿಯೇ ''ಬಿಗ್ ಬಾಸ್'' ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ ರಿಷಾ ಅವರನ್ನು ಈ ವಾರ ಮನೆಯ ಹೊರಗಡೆ ಕಳುಹಿಸಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಮತ್ತೊಂದು ಕಡೆ ಮನೆಯ ಪ್ರಬಲ ಸ್ಫರ್ಧಿ ಅಶ್ವಿನಿ ಗೌಡ ಅವರನ್ನೇ ಮನೆಯಾಚೆ ಕಳುಹಿಸಲಾಗಿದೆಯಾ..? ಎನ್ನುವ ಚಿಂತೆ ಈಗ ಹಲವರನ್ನು ಕಾಡುತ್ತಿದೆ.

ಯಾಕೆಂದರೆ ಮುಂದಿನ ಭಾಗದಲ್ಲಿ ಎಂದು ತೋರಿಸಿದ ಪ್ರೋಮೋದಲ್ಲಿ ಅಶ್ವಿನಿ ಗೌಡ ಸೂಟ್‌ಕೇಸ್‌ ತಗೊಂಡು ಹೊರಗಡೆ ಬಂದಿರೋದನ್ನು ತೋರಿಸಲಾಗಿದೆ. ಈ ಹಿನ್ನೆಲೆ ವಾರದ ಮಧ್ಯದಲ್ಲಿ ಅಶ್ವಿನಿಗೌಡ ಅವರನ್ನು ಮನೆಯ ಹೊರಗಡೆ ಕಳುಹಿಸಲಾಗಿದೆ ಎಂದು ಹಲವರು ಅಂದುಕೊಂಡಿದ್ದಾರೆ. ಇನ್ನು ಕೆಲವರು ಅಶ್ವಿನಿ ಗೌಡ ಅವರನ್ನು ಸೀಕ್ರೇಟ್ ರೂಮ್‌ಗೆ ಕಳುಹಿಸಿರಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅಶ್ವಿನಿ ಗೌಡ ಮನೆಯಿಂದ ಹೊರ ಬಂದಿಲ್ಲ. ಸೀಕ್ರೇಟ್ ರೂಮ್‌ಗೆ ಕೂಡ ಹೋಗಿಲ್ಲ.

ಹೌದು, ಅಸಲಿಗೆ ಕನ್ನಡದ ''ಬಿಗ್ ಬಾಸ್‌'' ಕಾರ್ಯಕ್ರಮದಲ್ಲಿ ಕಳೆದ ಕೆಲ ವರ್ಷಗಳಿಂದ ಸೀಕ್ರೆಟ್ ರೂಮ್‌ ಎಂಬ ರೂಮ್ ಇಲ್ಲವೇ ಇಲ್ಲ. ಹಾಗೊಂದು ವೇಳೆ ಇದ್ದಿದ್ದರೆ ಆ ರೂಮ್‌ನಲ್ಲಿರುವ ಸ್ಫರ್ಧಿಗಳ ಚಲನ ವಲನ ನೋಡುಗರಿಗೆ ಕಾಣಬೇಕಿತ್ತು. ಗೊತ್ತಾಗಬೇಕಿತ್ತು. ಉದಾಹರಣೆಗೆ 2016ರಲ್ಲಿ ಇದೇ ರೀತಿ ಮನೆಯ ಹೊರಗಡೆ ಬಂದಿದ್ದಾರೆ ಎಂದು ಹೇಳಿ ಶಾಲಿನಿ ಅವರನ್ನು ಸುದೀಪ್ ಸೀಕ್ರೇಟ್ ರೂಮ್‌ಗೆ ಕಳುಹಿಸಿದ್ದರು. ಆಗ ಶಾಲಿನಿ ತನ್ನ ವಿರುದ್ದ ಯಾರು ಇದ್ದಾರೆ..? ತನ್ನ ಪರ ಯಾರು ಇದ್ದಾರೆ..? ಯಾರು ಯಾವ ಮಸಲತ್ತು ಮಾಡುತ್ತಿದ್ದಾರೆ..? ಎಂದು ಸೀಕ್ರೇಟ್ ರೂಮ್‌ನಲ್ಲಿ ಕುಳಿತು ಶಾಲಿನಿ ನೋಡಿದ್ದರು. ಈ ದೃಶ್ಯಾವಳಿಗಳನ್ನು ಪ್ರಸಾರ ಕೂಡ ಮಾಡಲಾಗಿತ್ತು.

ಆದರೆ, ಈ ಬಾರಿ ಆರಂಭದಲ್ಲಿ ಹೊರ ಬಂದಿದ್ದಾರೆ ಎಂದು ಹೇಳಲಾಗಿದ್ದ ರಕ್ಷಿತಾ ಸೀಕ್ರೇಟ್ ರೂಮ್‌ನಲ್ಲಿ ಇಡಲಾಗಿತ್ತು ಎಂದು ಹೇಳಲಾಗಿತ್ತು. ಆದರೆ ರಕ್ಷಿತಾ ನಿಜಕ್ಕೂ ಸೀಕ್ರೇಟ್ ರೂಮ್‌ನಲ್ಲಿದ್ದರು ಎನ್ನುವುದಕ್ಕೆ ಯಾವ ಸಾಕ್ಷಿಯನ್ನು ಕೂಡ ''ಬಿಗ್ ಬಾಸ್'' ತೋರಿಸಲಿಲ್ಲ. ಪ್ರೇಕ್ಷಕರಿಗೆ ಕೂಡ ಕಾಣಲಿಲ್ಲ. ಈ ಹಿನ್ನೆಲೆ ಅಶ್ವಿನಿ ಗೌಡ ಸಿಕ್ರೇಟ್ ರೂಮ್‌ಗೆ ಹೋಗಿರಲು ಸಾಧ್ಯ ಇಲ್ಲ.

ashwini-gowda-is-safe-the-bbk-12-elimination-was-a-massive-twist

ಇನ್ನೂ ಸೀಕ್ರೇಟ್ ರೂಮ್‌ಗೆ ಹೋಗದ ಅಶ್ವಿನಿ ಗೌಡ, ಮನೆಯ ಹೊರಗಡೆಯಾದರೂ ಬಂದಿದ್ದಾರಾ..? ಎಂದರೆ ಅದೂ ಇಲ್ಲ. ಯಾಕೆಂದರೆ.. ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಅಶ್ವಿನಿ ಗೌಡ ಇದ್ದಾರೆ. ಇನ್ನು

ಎಲಿಮಿನೇಟ್‌ ಆದ ನಂತರ ಸಾಮಾನ್ಯವಾಗಿ ಎಲ್ಲ ಸ್ಪರ್ಧಿಗಳು ''ಬಿಗ್ ಬಾಸ್'' ಕ್ಯಾಮರಾಗಳಿಗೆ ಫೋಸ್ ಕೊಡ್ತಾರೆ. ಇದಲ್ಲದೇ ಸೂಟ್ ಕೇಸ್‌ನ ಯಾರು ತೆಗೆದುಕೊಂಡು ಹೊರ ಬರುವುದಿಲ್ಲ. ಬದಲಿಗೆ ಆ ಸೂಟ್‌ ಕೇಸ್‌ ಸ್ಟೋರ್ ರೂಮ್‌ನಲ್ಲಿರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಇಂದು ಅಶ್ವಿನಿ ಗೌಡ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ವೋಟ್ ಮಾಡಿ ನನ್ನ ಉಳಿಸಿ ಎಂದು ಮನೆಯ ಒಳಗಡೆ ಹೋಗುವ ಮೊದಲು ಅಶ್ವಿನಿ ಮಾಡಿ ಇಟ್ಟಿದ್ದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇವೆಲ್ಲವೂ ಅಶ್ವಿನಿ ಗೌಡ ಇನ್ನೂ ''ಬಿಗ್ ಬಾಸ್‌'' ಆವರಣದಲ್ಲಿಯೇ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ.

ಪ್ರೇಕ್ಷಕರಿಗೆ ಮತ್ತು ಮನೆಯ ಸ್ಫರ್ಧಿಳಿಗೆ ಚಮಕ್ ಕೊಡಲು ''ಬಿಗ್ ಬಾಸ್‌'' ಈ ಗಿಮಿಕ್ ಮಾಡಿರಬಹುದು. ಆ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದೇ ತರಹದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಶ್ವಿನಿ ಗೌಡ ಅವರು ಹೊರಬಂದಿದ್ದು ಕೇವಲ ಒಂದು ಪ್ರ್ಯಾಂಕ್ ಆಗಿತ್ತು ಎಂದು ''ಬಿಗ್ ಬಾಸ್'' ಮುಂದೆ ಹೇಳಬಹುದು, ಈ ''ಫೇಕ್ ಎಲಿಮಿನೇಷನ್'' ಮನೆಯ ಉಳಿದ ಸ್ಪರ್ಧಿಗಳ ಮೇಲೆ ಮಾನಸಿಕ ಒತ್ತಡ ಹೇರಲು ''ಬಿಗ್ ಬಾಸ್‌'' ಮಾಡಿದ ತಂತ್ರ ಕೂಡ ಇದಾಗಿದ್ದರು ಆಗಿರಬಹುದು. ಮನೆಯ ಹೊರಗಡೆ ಕಳುಹಿಸಿದಂತೆ ಮಾಡಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿ ಮತ್ತೆ ಮನೆಯೊಳಗೆ ''ಬಿಗ್ ಬಾಸ್'' ಮತ್ತೆ ಕಳುಹಿಸಿರಬಹುದು.

More from Filmibeat

English summary
The biggest BBK 12 twist has been revealed! Ashwini Gowda is not out of the game; her emotional elimination was a shocker setup for the Secret Room. Don't miss the full story on her sudden return.
Read more about: ಟಿವಿ bigg boss biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X