BBK12: ಸೋಲು ಒಪ್ಪಿಕೊಳ್ಳದ ಅಶ್ವಿನಿ- ಜಾನ್ವಿ; ಶೋ ಮುಗಿದ್ರು ಗಿಲ್ಲಿ ಮೇಲೆ ಹಗೆ ಸಾಧಿಸ್ತಿದ್ದಾರಾ?
ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ತೆರೆ ಬಿದ್ದಿದೆ. ಗಿಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಅಭಿಮಾನಿಗಳು ಗಿಲ್ಲಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ರಕ್ಷಿತಾ ಫಸ್ಟ್ ರನ್ನರ್ ಅಪ್ ಆಗಿದ್ದು ಅಶ್ವಿನಿ ಸೆಕೆಂಡ್ ರನ್ನರ್ ಅಪ್ ಎನಿಸಿಕೊಂಡಿದ್ದಾರೆ. ಆದರೆ ನನ್ನ ಸೋಲು ಸೋಲಲ್ಲ, ಗಿಲ್ಲಿ ಗೆಲುವು ಗೆಲುವಲ್ಲ ಎನ್ನುವಂತೆ ಅಶ್ವಿನಿ ಮಾತನಾಡುತ್ತಿದ್ದಾರೆ.
ಗಿಲ್ಲಿ ಕ್ರೇಜ್ ಬಗ್ಗೆ ಜಾನ್ವಿ ವ್ಯಂಗ್ಯ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಗೊತ್ತೇಯಿದೆ. ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ- ಜಾನ್ವಿ ಒಂದಾಗಿದ್ದರು. ಆಗ ಗಿಲ್ಲಿ ಜೊತೆ ಸಂಘರ್ಷ ಎದುರಾಗುತ್ತಿತ್ತು. ಮಾತಿಗೆ ಮಾತು ಬೆಳೆಯುತ್ತಿತ್ತು. ಇದು ಕೆಲವೊಮ್ಕೆ ತಾರಕಕ್ಕೆ ಏರಿದ್ದು ಇದೆ. ಅವರಿಬ್ಬರ ಬಗ್ಗೆ ಗಿಲ್ಲಿ ಕಾಮಿಡಿ ಮಾಡಿದನ್ನು ವೀಕ್ಷಕರು ಎಂಜಾಯ್ ಮಾಡಿದ್ದರು. ಅದನ್ನೆಲ್ಲ ಪಕ್ಕಕ್ಕಿಟ್ಟರೆ ಶೋ ಮುಗಿದರೂ ಗಿಲ್ಲಿ ಮೇಲೆ ಇಬ್ಬರೂ ಹಗೆ ಸಾಧಿಸುತ್ತಿದ್ದಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ದಾಖಲೆ ಮಟ್ಟದ ಮತಗಳನ್ನು ಪಡೆದು ಗಿಲ್ಲಿ ಬಿಗ್‌ಬಾಸ್ ಶೋ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಗಿಲ್ಲಿ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಾಗಿ ಆತ ಗೆದ್ದಿದ್ದರಲ್ಲಿ ಯಾವುದೇ ಗೊಂದಲ ಇಲ್ಲ. ಯಾರಿಗೂ ಮೋಸವಾಗಿಲ್ಲ. ಜನರ ಬೆಂಬಲ ಗಳಿಸಿದವರು ಗೆದ್ದಿದ್ದಾರೆ. ಆದರೆ ಅಶ್ವಿನಿ ಗೌಡ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ಮಾಧ್ಯಮಗಳ ಜೊತೆ ಮಾತನಾಡಿರುವ ಅಶ್ವಿನಿ ಗೌಡ "ಒಂದ್ಕಡೆ ಖುಷಿಯಿದೆ. ಮತ್ತೊಂದು ಕಡೆ ಬೇಸರವಿದೆ. ನಾನು ಟಾಪ್-2 ಫೈನಲಿಸ್ಟ್‌ಗಳಲ್ಲಿ ಇರ್ತೀನಿ ಅಂದುಕೊಂಡಿದ್ದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗಿಲ್ಲಿನ ನಿಜವಾದ ಬಡವನಾ? ಎನ್ನುವುದು ಮುಖ್ಯ. ನಿಜವಾದ ಬಡವ ಬೇರೆ, ಬಡವನ ರೀತಿ ಗೆಟಪ್ ಹಾಕಿಕೊಂಡು ಬದುಕುವುದು ಬೇರೆ. ಆತನ ಆಟ ಜನರಿಗೆ ಇಷ್ಟ ಆಗಿರಬಹದು. ಆದರೆ ಬಡವ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಅಶ್ವಿನಿ ಹೇಳಿದ್ದಾರೆ.
ಬಡವ ಎನ್ನುವುದನ್ನು ಸ್ಟ್ರ್ಯಾಟರ್ಜಿ ಕಾರ್ಡ್ ಆಗಿ ಬಳಬಾರದು. ಗಿಲ್ಲಿ ಗೆದ್ದಿದ್ದಾರೆ ನಿಜ. ಅವರು ನನ್ನ ಸಹಸ್ಪರ್ಧಿ, ಅವರನ್ನು ಬಿಟ್ಟುಕೊಡಲ್ಲ, ಯುದ್ಧ ಮಾಡುವಾಗ ಕತ್ತಿ ಹಿಡ್ಕೊಂಡಿರ್ತೀವಿ. ಮುಗಿದ ಮೇಲೆ ಇಟ್ಟುಬಿಡ್ತೀವಿ. ಬಿಗ್‌ಬಾಸ್ ಮುಗಿದ ಮೇಲೆ ಕತ್ತಿ ಎತ್ತಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಅಶ್ವಿನಿ ವಿವರಿಸಿದ್ದಾರೆ. ಅಶ್ವಿನಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಶೋ ಮುಗಿದಿದೆ ಎನ್ನುವುದು ಆಕೆಗೆ ಇನ್ನು ಗೊತ್ತಿಲ್ಲ. ವೀಕೆಂಡ್ ಮುಗಿದು ಭಾನುವಾರ ಸೂಕ್ತ ಕಾರಣಗಳನ್ನು ಕೊಟ್ಟು ನಾಮಿನೇಟ್ ಮಾಡುವಂತೆ ಮಾತನಾಡುತ್ತಿದ್ದಾರೆ. ಆಕೆಗೆ ಶೋ ಮುಗಿದಿದೆ ಎಂದು ಯಾರಾದರೂ ಹೇಳಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಗಿಲ್ಲಿ ಹೇಳಿದ್ದು ನಿಜ ಯಾವುದೇ ಕಾರಣಕ್ಕೂ ಅಶ್ವಿನಿ ಬದಲಾಗಲ್ಲ ಅಂತ.. ಅವರ ಮಾತುಗಳನ್ನು ಕೇಳಿದರೆ ನಿಜ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಗೆ 18ನೇ ಸ್ಪರ್ಧಿಯಾಗಿ ಅಶ್ವಿನಿ ಗೌಡ ಎಂಟ್ರಿ ಕೊಟ್ಟಿದ್ದರು. ಸೆಕೆಂಡ್ ರನ್ನರ್ ಆಪ್ ಆಗಿರುವ ಆಕೆಗೆ 14 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ತಮ್ಮ ನೇರಾನೇರ ಮಾತುಗಳಿಂದ ಅಶ್ವಿನಿ ಗಮನ ಸೆಳೆದಿದ್ದರು. ಈ ಬಾರಿ ಆಕೆ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ಸಾಕಷ್ಟು ಜನ ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ.
ಅಶ್ವಿನಿ ಆರಂಭದಲ್ಲಿ ಮಾತನಾಡಿದ ಕೆಲ ಮಾತುಗಳು ಆಕೆಗೆ ನೆಗೆಟಿವ್ ಆಗಿತ್ತು. ಬಳಿಕ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಅಷ್ಟೆಲ್ಲಾ ಆಗಿದ್ರು ತಮ್ಮ ಗತ್ತಿನ ಆಟದಿಂದ ಗಮನ ಸೆಳೆದರು. ಇತರೆ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ಕೊಟ್ಟರು. ಕಿಚ್ಚನ ಚಪ್ಪಾಳೆಯನ್ನು ಪಡೆದು ಹಿಗ್ಗಿದ್ದರು. ಕೊನೆಗೆ 3ನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು.


Click it and Unblock the Notifications











