BBK 12: 'ಎಸ್' ಕ್ಯಾಟಗರಿ ಅಂದ್ರೆ ಏನು ಬಿಗ್‌ಬಾಸ್? ಅಶ್ವಿನಿ ಗೌಡ ಪದ ಬಳಕೆ ಬಗ್ಗೆ ಭುಗಿಲೆದ್ದ ಆಕ್ರೋಶ
ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 20 ದಿನ ಪೂರೈಸಿದೆ. ಶೋ ವೀಕ್ಷಕರಿಗೆ ಒಳ್ಳೆ ಮನರಂಜನೆ ಒದಗಿಸುತ್ತಿದೆ. ಜೊತೆಗೆ ನಾನಾ ಕಾರಣಕ್ಕೆ ಚರ್ಚೆ ಹುಟ್ಟಾಕ್ಕಿದೆ. ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡುತ್ತಿರುವುದು ಭಾರೀ ಸುದ್ದಿ ಆಗಿತ್ತು. ಇಬ್ಬರಿಗೂ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದರು.
ಇನ್ನು ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ ಅಶ್ವಿನಿ ಬಳಸಿದ ಪದವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. 'ಎಸ್' ಕ್ಯಾಟಗರಿ ಎಂದು ಅಶ್ವಿನಿ ಗೌಡ ಪದ ಬಳಸಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಗ್‌ಬಾಸ್ ಪ್ರತಿಕ್ರಿಯಿಸ ಬೇಕು, ಸ್ಪಷ್ಟನೆ ಕೊಡಬೇಕು. ಅಶ್ವಿನಿ ಗೌಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಶುಕ್ರವಾರ(ಅಕ್ಟೋಬರ್ 17) ರಾತ್ರಿ ಪ್ರಸಾರವಾದ ಎಪಿಸೋಡ್‌ನಲ್ಲಿ ರಕ್ಷಿತಾ ಬಗ್ಗೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಪದೇ ಪದೇ ಮಾತನಾಡಿದ್ದರು. ಇಬ್ಬರೇ ಕೂತು ಆಕೆಯ ಬಗ್ಗೆ ಚರ್ಚಿಸಿದ್ದರು. ಈ ವೇಳೆ "ಅವಳು ಮಾಡಿದ್ದು ನಿನ್ನೆ ಇನ್ನು ನನ್ನ ತಲೆಯಲ್ಲೇ ಕೂತಿದೆ. ಹೆಂಗೆ ಆಡ್ತಿದ್ಲು ಅವ್ಳು. ತೀರ 'ಸ್ಲಮ್' ತರ ಆಡ್ತಿದ್ಲಪ್ಪ ಅವ್ಳು. ಅವಳ ಲೆವೆಲ್‌ಗೆ ನಾವೆಲ್ಲಾ ಇಳಿಯೋಕೆ ಆಗಲ್ಲ" ಎಂದಿದ್ದರು. ಆದರೆ 'ಸ್ಲಮ್' ಎನ್ನುವ ಪದವನ್ನು ಮ್ಯೂಟ್ ಮಾಡಲಾಗಿತ್ತು. ಆದರೂ ಕೆಲವರಿಗೆ ಅದು ಅರ್ಥವಾಗಿತ್ತು.
ಮತ್ತೆ ಸಂಜೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಕೂತು ಮಾತನಾಡುವಾಗ "ಅವಳಿಗೆ ಫುಲ್ ಶೇಪ್ ಔಟ್ ಆಗೋಯ್ತು. ಏನು ಮಾತನಾಡಲಿಲ್ಲ ಇವತ್ತು. ನಾನು ಹೇಳಲಿಲ್ವಾ ಆ "ಎಸ್.." ಎಂದು ಹೇಳಿದ್ದರು. ತಾವು ಬಳಿಸಿದ ಸ್ಲಮ್ ಪದ ತಪ್ಪು ಎಂದು ಅರಿವಾಗಿದ್ದಕ್ಕೋ ಏನೋ ಮತ್ತೊಮ್ಮೆ ಮಾತನಾಡುವಾಗ "ಎಸ್" ಎಂದು ಅಶ್ವಿನಿ ಹೇಳಿದ್ರು ಅನಿಸುತ್ತದೆ.

ಅಶ್ವಿನಿ ಗೌಡ 'ಎಸ್ ಕ್ಯಾಟಗರಿ' ಎಂದು ಹೇಳಿರುವುದಾಗಿ ಕೆಲವರು ಭಾವಿಸುತ್ತಿದ್ದಾರೆ. ಬಳಿಕ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದ ವೀಡಿಯೋದಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಹಾಗಾಗಿ ಅಶ್ವಿನಿ ಗೌಡ ಏನು ಎಂದು ಹೇಳಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಯಾವುದೇ ತಪ್ಪು ಇಲ್ಲ ಎಂದ ಮೇಲೆ ಅದನ್ನು ಎಡಿಟ್ ಮಾಡಿದ್ದು ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಬಿಗ್‌ಬಾಸ್ ಸ್ಪಷ್ಟನೆ ಕೊಡಬೇಕು ಎಂದು ಕೇಳುತ್ತಿದ್ದಾರೆ.
ಈ ಹಿಂದೆ ಕೂಡ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಳಸಿದ ಪದಗಳು ವಿವಾದ ಹುಟ್ಟು ಹಾಕಿತ್ತು. ಬಿಗ್‌ಬಾಸ್ ಸೀಸನ್ 10ರಲ್ಲಿ ತನಿಶಾ ಕುಪ್ಪಂಡ ಅವರು ಭೋವಿ ಸಮುದಾಯಕ್ಕೆ ಅವಹೇಳನ ಪದ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಆಕೆಯ ವಿರುದ್ಧ ಅಟ್ರಾಸಿಟಿ(ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ) ಕೇಸ್ ದಾಖಲಿಸಲಾಗಿತ್ತು. ಡ್ರೋನ್ ಪ್ರತಾಪ್ ಬಗ್ಗೆ ಮಾತನಾಡುತ್ತಾ ತನಿಷಾ ಬಳಸಿದ್ದ ಪರ ವಿವಾದಕ್ಕೆ ಕಾರಣವಾಗಿತ್ತು.
ಬಿಗ್‌ಬಾಸ್-12ರ ಮಿನಿ ಫಿನಾಲೆ ನಡೀತಿದೆ. ಈಗಾಗಲೇ ಇಬ್ಬರನ್ನು ಮನೆಯಿಂದ ಎಲಿಮಿನೇಟ್ ಮಾಡಲಾಗಿದ್ದು ಮೂವರು ವೈಲ್ಡ್‌ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಹೋಗುತ್ತಿದ್ದಾರೆ. ವೀಕೆಂಡ್‌ನಲ್ಲಿ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರಿಗೂ ಸುದೀಪ್ ಚಾಟಿ ಬೀಸಿದ್ದಾರೆ. ಇನ್ನಾದರೂ ಇಬ್ಬರೂ ರಕ್ಷಿತಾ ಮೇಲೆ ಮುಗಿಬೀಳುವುದನ್ನು ನಿಲ್ಲಿಸುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











