BBK 12: ಆ ಸ್ಪರ್ಧಿಗಳ ಟೂತ್‌ಬ್ರೆಷ್ ಟಾಯ್ಲೆಟ್‌ಗೆ ತಗೊಂಡು ಹೋಗಿದ್ದೇಕೆ ಅಶ್ವಿನಿ ಗೌಡ?
ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ 27ನೇ ದಿನಕ್ಕೆ ಕಾಲಿಟ್ಟಿದೆ. ಮನೆ ಮಂದಿಯೆಲ್ಲಾ ಒಂದು ತಂಡವಾದರೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಒಂದು ತಂಡ ಎನ್ನುವಂತಾಗಿದೆ. ಅವರಿಬ್ಬರಿಗೂ ಕೆಲವರ ಬೆಂಬಲ ಸಿಕ್ಕಿದೆ. ಇನ್ನು ಅಶ್ವಿನಿ ಗೌಡ ನಡೆ ಪದೇ ಪದೆ ಚರ್ಚೆ ಹುಟ್ಟಾಕುತ್ತಿದೆ. ರಕ್ಷಿತಾ ಶೆಟ್ಟಿ ಅವರನ್ನು 'ಎಸ್' ಎಂದು ಕರೆದಿದ್ದು ಇನ್ನು ತಣ್ಣಗಾಗಿಲ್ಲ.
ರಕ್ಷಿತಾ ಬಗ್ಗೆ ಅಶ್ವಿನಿ ಗೌಡ ಪದ ಬಳಕೆ ವಿಚಾರ ವಿವಾದದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಇನ್ನು ರಕ್ಷಿತಾಳನ್ನು ಟಾರ್ಗೆಟ್ ಮಾಡುತ್ತಿದ್ದ ಅಶ್ವಿನಿ ಹಾಗೂ ಜಾಹ್ನವಿಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಆದರೂ ಅಶ್ವಿನಿ ಹುಚ್ಚಾಟ ಕಮ್ಮಿ ಆಗ್ತಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

ಇದೀಗ ಸ್ಪರ್ಧಿಗಳ ಟೂತ್‌ಬ್ರೆಷ್ ತಗೊಂಡು ಅಶ್ವಿನಿ ಗೌಡ ಟಾಯ್ಲೆಟ್ ಒಳಗೆ ಹೋಗಿರುವ ವೀಡಿಯೋ ವೈರಲ್ ಆಗ್ತಿದೆ. ಈ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಶ್ವಿನಿ ಯಾಕೆ ಬುದ್ಧಿ ಕಲಿಯುತ್ತಿಲ್ಲ. ಕನ್ನಡಪರ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವ ಅವರು ಹೀಗೆಲ್ಲಾ ಯಾಕೆ ನಡೆದುಕೊಳ್ಳುತ್ತಾರೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಸ್ಪರ್ಧಿಗಳ ಟೂರ್‌ಬ್ರೆಷ್‌ನಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ರಾ? ಇದೆಂಥಹ ಮನಸ್ಥಿತಿ ಅಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಶ್ವಿನಿ ಬೇರೆ ಸ್ಪರ್ಧಿಗಳ ಟೂತ್‌ಬ್ರೆಷ್ ತೆಗೆದುಕೊಂಡು ಟಾಯ್ಲೆಟ್ ಒಳಗೆ ಹೋಗಿದ್ದಾರೆ, ನಾನು ಸುಮ್ಮನೆ ತಗೊಂಡು ಹೋಗಿದ್ದೆ ಅಂತ ಬಳಿಕ ಆಕೆ ಹೇಳಿದ್ರು ಅದನ್ನು ಯಾರು ನಂಬುವುದಿಲ್ಲ. ಸುತ್ತಾ ಕ್ಯಾಮರಾಗಳು ಇರುವುದು ಗೊತ್ತಿದ್ದು ಅಶ್ವಿನಿ ಹೀಗೆ ಯಾಕೆ ನಡೆದುಕೊಳ್ಳುತ್ತಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲ ಎರಡು ವಾರ ಬಿಗ್‌ಬಾಸ್ ಮನೆಯಲ್ಲಿ ರಾಜಮಾತೆ ರೀತಿ ಅಶ್ವಿನಿ ಗೌಡ ಮೆರೆದಿದ್ದರು. ಇದೀಗ ಆಕೆಗೆ ಕಳಪೆ ಪಟ್ಟ ಸಿಕ್ಕಿದೆ. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಘು ಈಗ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗುತ್ತಿದ್ದಂತೆ ಅಶ್ವಿನಿಗೆ ಕಳಪೆ ಪಟ್ಟು ಕೊಟ್ಟಿದ್ದು ಆಕೆ ಬಿಗ್‌ಬಾಸ್ ಮನೆ ಜೈಲಿನಲ್ಲಿ ಉಳಿಯುವಂತಾಗಿದೆ.
ಕಳಪೆ ಪಟ್ಟ ಸ್ವೀಕರಿಸಿ ಜೈಲಿಗೆ ಹೋಗುವವರು ನಿಯಮಗಳನ್ನು ಮೀರುವಂತಿಲ್ಲ. ಆದರೆ ಅಶ್ವಿನಿ ಗೌಡ ಮಾತ್ರ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸ್ಪರ್ಧಿಗಳು ಎಷ್ಟೇ ಕೇಳಿಕೊಂಡರೂ ಅಶ್ವಿನಿ ಮಾತ್ರ ನಿಮಯಗಳನ್ನು ಪಾಲಿಸುತ್ತಿಲ್ಲ. ಇದೆಲ್ಲದರ ನಡುವೆ ಈ ಟಾಯ್ಲೆಟ್ ಕ್ಲೀನಿಂಗ್ ವಿಚಾರ ಚರ್ಚೆ ಹುಟ್ಟಾಕ್ಕಿದೆ. ಬಿಗ್‌ಬಾಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು, ಸುದೀಪ್ ಸರ್ ವೀಕೆಂಡ್ ಪಂಚಾಯ್ತಿಯಲ್ಲಿ ಈ ಬಗ್ಗೆ ಕೇಳಬೇಕು ಎನ್ನುತ್ತಿದ್ದಾರೆ.
ಪದೇ ಪದೆ ಟಾಯ್ಲೆಟ್‌ಗೆ ಹೋಗುವುದು, ಕೇಳಿದರೆ ಹೊಟ್ಟೆ ಕೆಟ್ಟಿದೆ ಎನ್ನುವುದು. ಕಳಪೆ ಪಟ್ಟ ಪಡೆದು ಜೈಲಿನಲ್ಲಿ ಇರುವವರು ಟಾಯ್ಲೆಟ್‌ಗೆ ಹೋಗಬಾರದು ಎನ್ನುವ ನಿಯಮ ಇದ್ಯಾ? ಎಂದು ಮನೆ ಮಂದಿಗೆ ಮರುಪ್ರಶ್ನೆ ಹಾಕುತ್ತಿದ್ದಾರೆ. ಕ್ಯಾಪ್ಟನ್ ಹೇಳಿದ ಮಾತನ್ನು ಕೇಳುತ್ತಿಲ್ಲ. ತರಕಾರಿ ಕತ್ತರಿಸಿ ಕೊಡಲು ಹೇಳಿದ್ರು ಅಶ್ವಿನಿ ಗೌಡ ಮಾಡ್ತಿಲ್ಲ. ಅಶ್ವಿನಿ ತರಕಾರಿ ಕಟ್ ಮಾಡಿ ಕೊಡದೇ ಅಡುಗೆ ಮಾಡಲು ಮನೆಮಂದಿ ಕಷ್ಟಪಡುವಂತಾಗಿತ್ತು. ತರಕಾರಿ ಇಲ್ಲದೇ ಕೊನೆಗೆ ಪುಳಿಯೋಗರೆ ಮಾಡಿ ತಿನ್ನುವಂತಾಗಿದೆ.
ಸುದೀಪ್ ಕ್ಲಾಸ್ ತಗೊಂಡ ಬಳಿಕ ಅಶ್ವಿನಿ ಗೌಡ ಹಾಗೂ ಜಾಹ್ನವಿ ತಣ್ಣಗಾಗುತ್ತಾರೆ ಎಂದೇ ಮನೆ ಮಂದಿ ಸಹ ಭಾವಿಸಿದ್ದರು. ಆದರೆ ಯಾಕೋ ಇಬ್ಬರ ಉಪಟಳ ಕಮ್ಮಿ ಆಗ್ತಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ. ಅಶ್ವಿನಿ ಗೌಡ ಬೇರೆ ಸ್ಪರ್ಧಿಗಳ ಟೂತ್‌ಬ್ರೆಷ್‌ನಿಂದ ಟಾಯ್ಲೆಟ್ ಉಜ್ಜಿಲ್ಲ, ಬದಲಿಗೆ ಬ್ರೆಷ್‌ಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಅಷ್ಟೇ, ಎಂದು ಕೆಲವರು ಭಾವಿಸಿದ್ದಾರೆ.


Click it and Unblock the Notifications











