ಸ್ಟಾರ್ಟ್ ಅಪ್ ಕಂಪೆನಿಯಲ್ಲಿ ಕೆಲಸ, ಮಾಡಲಿಂಗ್ ತೊರೆದಿದ್ದ ಆಸಿಯಾ; 'ಶ್ರಾವಣಿ ಸುಬ್ರಹ್ಮಣ್ಯ'ಗೆ ಎಂಟ್ರಿ ಕೊಟ್ಟಿದ್ದೇಗೆ?

By ಎಸ್ ಸುಮಂತ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಕನ್ಯಾಕುಮಾರಿ'ಯೂ ಒಂದು. 'ಕನ್ಯಾಕುಮಾರಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಈಕೆಯ ಹೆಸರು ಆಸಿಯಾ ಫಿರ್ದೋಸ್. ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಈಕೆ ಸದ್ಯ ಪ್ರೇಕ್ಷಕರ ಪಾಲಿಗೆ ಪ್ರೀತಿಯ ಶ್ರಾವಣಿಯೂ ಹೌದು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯಾಗಿ ಅಭಿನಯಿಸುತ್ತಿದ್ದಾರೆ ಆಸಿಯಾ ಫಿರ್ದೋಸ್.
ಅಂದ ಹಾಗೇ ಆಸಿಯಾ ಅವರಿಗೆ ಮೊದಲಿನಿಂದಲೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತು. ಈಕೆ ಚಿಕ್ಕಂದಿನಿಂದಲೂ ಫ್ಯಾಷನ್ ಶೋ, ಮಾಡೆಲಿಂಗ್,ನಟನೆ ಈ ವಿಚಾರಗಳ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದರು.

Asiya Firdose is charming as Shravani in Shravani Subramanya Kannada serial

ಮಾಡೆಲಿಂಗ್ ಜಗತ್ತಿನಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಕೊಂಡದ್ದರಿಂದಲೋ ಏನೋ, ಆಕೆಗೆ ಬಹಳಷ್ಟು ಆತ್ಮವಿಶ್ವಾಸ ಬಂತು. ಆರಂಭದ ದಿನಗಳಲ್ಲಿ ಮನೆಯವರು ಓದಿನ ಮೇಲೆ ಹೆಚ್ಚಿನ ಗಮನಹರಿಸಲು ಹೇಳಿದರು. ಆದರೆ ಕ್ರಮೇಣ ಆಸಿಯಾ ಆಸಕ್ತಿಯನ್ನು ಗಮನಿಸಿ ಅವರು ಪ್ರೋತ್ಸಾಹಿಸಲು ಆರಂಭಿಸಿದರು.

ಮಾಡೆಲಿಂಗ್‌ನಿಂದ ಬಂದ ಆತ್ಮವಿಶ್ವಾಸದಿಂದ ನಟನೆಗೂ ಕಾಲಿಟ್ಟರು ಆಸಿಯಾ ಫಿರ್ದೋಸ್. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲೂ ನಟನಾ ಛಾಪನ್ನು ಪಸರಿಸಿರುವ ಆಸಿಯಾ ನಟನಾ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಹೌದು, ಮೊದಮೊದಲಿಗೆ ಎಷ್ಟೇ ಆಡಿಶನ್ ಕೊಟ್ಟಿದ್ದರೂ, ಆಕೆಯ ಪ್ರಯತ್ನವೆಲ್ಲ ವ್ಯರ್ಥವಾಗುತ್ತಿತ್ತು. ಎಲ್ಲೂ ಧಾರಾವಾಹಿ ಅಥವಾ ಯಾವುದೇ ರೀತಿಯ ಪ್ರಾಜೆಕ್ಟ್ ಗಳು ಸಿಗಲಿಲ್ಲ. ಆಮೇಲೆ ಈಕೆಯ ವಿಡಿಯೋ ಒಂದನ್ನು ನೋಡಿ ಕನ್ಯಾಕುಮಾರಿ ಧಾರಾವಾಹಿಯ ಪ್ರೊಡ್ಯೂಸರ್ ಆಡಿಶನ್‌ಗೆ ಕರೆದರು. ಈ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಈ ನಟಿಗೆ ಖುಷಿ ನೀಡಿತು.

ಪದವಿ ಮುಗಿಸಿದ ಬಳಿಕ ಸ್ಟಾರ್ಟ್ ಅಪ್ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು ಆಸಿಯಾ. ಆದರೆ ನಟನೆಯತ್ತ ಸೆಳೆತ ಹೆಚ್ಚಾಗಿತ್ತು. ಕನ್ಯಾಕುಮಾರಿ ಧಾರಾವಾಹಿ ಆಡಿಶನ್ ಸೆಲೆಕ್ಟ್ ಆಗಿ ಪ್ರಮುಖ ಪಾತ್ರ ಸಿಕ್ಕಾಗಂತೂ ಆಕೆಯ ಖುಷಿಗೆ ಪಾರವೇ ಇರಲಿಲ್ಲ. ನಟನೆಯಲ್ಲಿ ಮುಂದುವರೆಯಬೇಕೆಂಬ ಆಸೆ ಈಕೆಯದಾಗಿತ್ತು.

Asiya Firdose is charming as Shravani in Shravani Subramanya Kannada serial

'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕಿ ಕನ್ನಿಕಾ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಆಸಿಯಾ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದರು. ನಾಯಕಿ ಕನ್ನಿಕಾ ಶ್ರೀಮಂತ ಮನೆತನದಿಂದ ಬಂದರೂ ಬಹಳ ಸರಳವಾಗಿ ಹಾಗೂ ಸುಸಂಸ್ಕೃತವಾಗಿ ಬದುಕುತ್ತಿರುವುದನ್ನು ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ವಿಭಿನ್ನ ರೀತಿಯ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದ ಈಕೆ ಮುಂದೆ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದರು.

ಕೆಲವೊಂದು ವೆಬ್ ಸಿರೀಸ್ ನಲ್ಲಿಯೂ ಬಣ್ಣ ಹಚ್ಚಿರುವ ಈಕೆ ಇದೀಗ ಶ್ರಾವಣಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಶೂಟಿಂಗ್‌ಗೆ ತೆರಳಿದಾಗ ಈ ಪಾತ್ರಕ್ಕೆ ನ್ಯಾಯ ಒದಗಿಸುವುದೇ ನನ್ನ ಆದ್ಯತೆ. ನನ್ನ ವೈಯಕ್ತಿಕ ಜೀವನ ಹೇಗೆ ಇದ್ದರೂ ಶೂಟಿಂಗ್ ನಲ್ಲಿ ನಾನು ಯಾವ ಪಾತ್ರ ಮಾಡುತ್ತೇನೋ ಆ ಪಾತ್ರಕ್ಕೆ ಸರಿಯಾಗಿ ತಯಾರಾಗುತ್ತೇನೆ ಎಂದು ಹೇಳುವ ಆಸಿಯಾ ನಟಿಯಾಗಬೇಕು ಎಂಬ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲರುವುದಂತೂ ನಿಜ.

More from Filmibeat

English summary
Asiya Firdose is charming as Shravani in Shravani Subramanya Kannada serial
Read more about: actress serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X