41ನೇ ವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾದ ಬಿಗ್ ಬಾಸ್ ಸ್ಫರ್ಧಿ..!
ಬಿಗ್ ಬಾಸ್ ಮೂಲಕ ಅನೇಕರು ಬೆಳಕಿಗೆ ಬಂದಿದ್ದಾರೆ. ಆ ನಂತರ ತಮ್ಮಲ್ಲಿನ ಪ್ರತಿಭೆಯಿಂದ ಬೆಳೆದಿದ್ದಾರೆ. ಕೆಲವರು ಕಿರುತೆರೆಯಲ್ಲಿ..ಇನ್ನು ಕೆಲವರು ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಮಿಂಚಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಬಿಗ್ ಬಾಸ್ ಅನೇಕರ ಬದುಕು ಬದಲಿಸಿದೆ. ಬದುಕಿಗೆ ದಾರಿ ದೀಪ ಆಗಿದೆ.ಈ ಸಾಲಿಗೆ ಸೇರುವ ಈ ಚೆಲುವೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ.
ಹೌದು, ಗೌಹರ್ ಖಾನ್ .. ಬಾಲಿವುಡ್‌ನ ಚೆಲುವೆ. ಎರಡು ದಶಕಗಳಿಂದ ಬಣ್ಣದ ಪ್ರಪಂಚದಲ್ಲಿರುವ ಗೌಹರ್ ಖಾನ್ ತೆಲುಗಿನ ಶಂಕರ್ ದಾದಾ ಎಂಬಿಬಿಎಸ್ ಸೇರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆಲ್ಬಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕೂಡ ಕುಣಿದಿದ್ಧಾರೆ. ಆದರೆ. ಬಿಗ್ ಬಾಸ್ ನಲ್ಲಿ ಇವರಿಗೆ ಸಿಕ್ಕ ಹೆಸರು ಬೇರೆ ಎಲ್ಲಿಯೂ ಸಿಗಲಿಲ್ಲ. ಬಿಗ್ ಬಾಸ್ 7ನೇ ಸೀಸನ್‌ನಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದವರು ಗೌಹರ್ ಖಾನ್.

ಇಂಥಾ ಗೌಹರ್ ಈಗ ತಮ್ಮ 41ನೇ ವಯಸ್ಸಿನಲ್ಲಿ ಎರಡನೇ ಬಾರಿ ಗರ್ಭಿಣಿಯಾಗಿದ್ದಾರೆ. ತಮ್ಮ ಪತಿ ಜೈದ್ ದರ್ಬಾರ್ ಜೊತೆ ಡ್ಯಾನ್ಸ್ ಮಾಡುತ್ತಾ ತಮ್ಮ ಅಭಿಮಾನಿಗಳಿಗಾಗಿ ಈ ವಿಚಾರವನ್ನು ಗೌಹರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಸ್ಮಿಲ್ಲಾ, ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಪ್ರೀತಿ ನಮಗೆ ಬೇಕಿದೆ ಎಂದು ಬರೆದುಕೊಂಡಿದ್ಧಾರೆ.
ಸದ್ಯ ಗೌಹರ್ ಮತ್ತು ಜೈದ್‌ಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಗೌಹರ್‌ಗೆ ಸಲಹೆ ನೀಡುತ್ತಿದ್ದಾರೆ. ಇನ್ನು ಅನಿತಾ ಹಸನಂದಾನಿ, ನಕುಲ್ ಮೆಹ್ತಾ, ಯುವಿಕಾ ಚೌಧರಿ, ಕಾಮ್ಯಾ ಪಂಜಾಬಿ ಹೀಗೆ ಗೌಹರ್ ಅವರ ಚಿತ್ರರಂಗದ ಅನೇಕ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
ಅಂದ್ಹಾಗೇ ಜೈದ್ ದರ್ಬಾರ್ ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್ ಚಿತ್ರಗಳ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರ ಮಗ. ಇನ್ನು, ಜೈದ್ ಅವರಿಗಿಂತ ಗೌಹರ್ ಹನ್ನೆರಡು ವರ್ಷ ದೊಡ್ಡವರು. ಈ ವಿಚಾರಕ್ಕೆ ಇಬ್ಬರು ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಟ್ರೋಲ್ ಹೆಸರಿನಲ್ಲಿ ಇಬ್ಬರನ್ನು ಅನೇಕರು ನಿಂದಿಸಿದ್ಧಾರೆ.
ಹೀಗಾಗಿಯೇ ಸ್ಪಷ್ಟನೆಯನ್ನು ಕೂಡ ನೀಡಿದ್ದ ಗೌಹರ್ ನಮ್ಮ ನಡುವೆ ಹನ್ನೆರಡಲ್ಲ ಬದಲಿಗೆ ಆರು ವರ್ಷಗಳ ಅಂತರ ಇದೆ ಎಂದು ಹಿಂದೆ ಹೇಳಿದ್ದರು. ಪ್ರೀತಿಗೆ ವಯಸ್ಸು ಮುಖ್ಯವಲ್ಲ ಪ್ರೀತಿಸಲು ಸುಂದರವಾದ ಮನಸ್ಸು ಇದ್ದರೆ ಸಾಕು ಎಂದು ಗೌಹರ್ ಹೇಳಿದ್ದರು. 2020ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಗೌಹರ್ ಮತ್ತು ಜೈದ್ ಆ ನಂತರ ಡಿಸೆಂಬರ್ 25ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದರು. 2023ರ ಮೇನಲ್ಲಿ ಗೌಹರ್ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಗಂಡು ಮಗನಿಗೆ ಜೆಹಾನ್ ದರ್ಬಾರ್ ಎಂದು ಹೆಸರಿಟ್ಟರು.
ಇನ್ನುಳಿದಂತೆ ಗೌಹರ್ ಮತ್ತು ಜೈದ್ ಕೊರೊನಾ ಸಮಯದಲ್ಲಿ ಜೈದ್ ಮತ್ತು ಗೌಹರ್ ನಡುವೆ ಪ್ರೇಮ ಅರಳಿತ್ತು. ದಿನಸಿ ಅಂಗಡಿಯಲ್ಲಿ ಮೊದಲ ಬಾರಿ ಇಬ್ಬರು ಭೇಟಿಯಾಗಿದ್ದರು. ಆ ನಂತರ ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಮಾತುಕಥೆ ಆ ನಂತರ ಸ್ನೇಹ ಬೆಸೆದಿತ್ತು. ಕಾಲ ಕ್ರಮೇಣ ಸ್ನೇಹ ಪ್ರೀತಿಯ ಸ್ವರೂಪ ಪಡೆಯಿತು. ಹೀಗೆ ಪ್ರೀತಿಸಿ ಮದುವೆಯಾದ ಗೌಹರ್ ಖಾನ್ ಮತ್ತು ಜೈದ್ ದರ್ಬಾರ್ ತಮ್ಮ ಸಾಂಸಾರಿಕ ಜೀವನದಲ್ಲಿ ಖುಷಿಯಾಗಿದ್ದಾರೆ. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











