ನಿರಂಜನ್ ಕೋಟಿನ ಬಟನ್ ಕಿತ್ತಿರುವ ಸನ್ನಿವೇಶ ಅಸಹಜವಾಗಿದೆ : ಪ್ರೇಕ್ಷಕರ ಅಸಮಾಧಾನ

ಮಗಳು ಜಾನಕಿ ಧಾರಾವಾಹಿ ರೋಚಕ ತಿರುವುಗಳನ್ನು ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ ಭಾರ್ಗಿ ಅವರ ಎರಡನೆ ಮಗಳು ಚಂಚಲ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ ಎಲ್ಲರು ಇದ್ದಾರೆ. ನಿಶ್ಚಿತಾರ್ಥಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿದೆ.

ಭಾರ್ಗಿ ಅವರ ದೊಡ್ಡ ತೋಟದ ಮನೆಯಲ್ಲಿ ಮಗಳ ನಿಶ್ಚಿತಾರ್ಥಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದ್ರೆ ಭಾರ್ಗಿ ಮಾತ್ರ ಮೊದಲ ಮಗಳು ಜಾನಕಿ ಮತ್ತು ಆಕೆಯ ಗಂಡನನ್ನು ಅವಮಾನ ಮಾಡುತ್ತಲೆ ಇದ್ದಾರೆ. ಮನೆಗೆ ಬಂದ ಮಗಳು-ಅಳಿಯನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ.

ಇದೆಲ್ಲದರ ಜೊತೆಗೆ ನಿರಂಜನ್ ಕೋಟಿನ ಬಟನ್ ಕಿತ್ತೋಗಿರುವ ವಿಚಾರವೀಗ ಭಾರಿ ಚರ್ಚೆಯಾಗುತ್ತಿದೆ. ಈ ಸನ್ನಿವೇಶವನ್ನು ನಿರಂಜನ್ ಗೆ ಅವಮಾನ ಮಾಡಲೆಂದೆ ಸೃಷ್ಟಿಸಿದ್ದಾರೆ. ಇದು ನಿರಂಜನ್ ಗೆ ಮಾತ್ರ ಅವಮಾನ ಆಗಿದ್ದಲ್ಲ ಭಾರ್ಗಿ ಅವರಿಗು ಅವಮಾನ ಮಾಡಿದ ಹಾಗೆ ಅಲ್ಲವೆ? ಇದೊಂದು ಬಾಲಿಶವಾದ ದೃಶ್ಯವೆಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಬಟನ್ ಕಿತ್ತೋಗಿರುವುದು ಗೊತ್ತಾಗುವುದಿಲ್ಲವೆ

ಬಟನ್ ಕಿತ್ತೋಗಿರುವುದು ಗೊತ್ತಾಗುವುದಿಲ್ಲವೆ

ನಿರಂಜನ್ ಅವರಿಗೆ ಕೋಟಿನ ಬಟನ್ ಸರಿಮಾಡಿಸಕೊಳ್ಳುವಷ್ಟು ಆಗುವುದಿಲ್ಲವೆ, ಅವರೇನು ಅಷ್ಟು ಬಡವರ ಎನ್ನುವುದು ಮಗಳು ಜಾನಕಿ ನೋಡುವ ಪ್ರೇಕ್ಷಕರ ಪ್ರಶ್ನೆಯಾಗಿದೆ. ಕೋಟಿ ಗಟ್ಟಲೆ ವ್ಯವಹಾರ ಮಾಡುತ್ತಿರುವ ನಿರಂಜನ್, ಒಬ್ಬ ಹೋಮ್ ಮಿನಿಸ್ಟರ್ ಮನೆಯ ಸಮಾರಂಭಕ್ಕೆ ಬರುವಾಗ ಬಟನ್ ಕಿತ್ತೋಗಿರುವ ಕೋಟನ್ನು ಹಾಕಿಕೊಂಡು ಬರುವಷ್ಟು ಬಡವನಾ, ಈ ದೃಶ್ಯವನ್ನು ಬೇಕು ಅಂತಾನೆ ಸೃಷ್ಟಿಸಲಾಗಿದೆ. ಈ ಸನ್ನಿವೇಶ ಅಸಹಜವಾಗಿದೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಕೋಟು ಮತ್ತು ಬಟನ್ ನೀಲಿ, ಬಿಳಿ ದಾರ

ಕೋಟು ಮತ್ತು ಬಟನ್ ನೀಲಿ, ಬಿಳಿ ದಾರ

ನಿರಂಜನ್ ಧರಿಸಿರುವ ಕೋಟು ಮತ್ತು ಬಟನ್ ನೀಲಿ ಬಣ್ಣದಾಗಿದೆ. ಆದ್ರೆ ದಾರ ಮಾತ್ರ ಬಿಳಿ ಬಣ್ಣದಾಗಿದೆ. ಅದು ಹೇಗೆ ಸಾಧ್ಯ. ಅಷ್ಟು ಗೊತ್ತಾಗುವುದಿಲ್ಲವಾ ಎಂದು ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ. ಇದೊಂದು ಕಾಮಿಡಿ ದೃಶ್ಯದ ಹಾಗೆ ಕಾಣಿಸುತ್ತೆ, ನಿರಂಜನ್ ಅಷ್ಟು ದಡ್ಡರ ಹಾಗಾದರೆ ಎನ್ನುವ ಚರ್ಚೆ ನಡೆಯುತ್ತಿದೆ. ಅವರನ್ನು ಈ ದೃಶ್ಯದಲ್ಲಿ ತೀರಾ ಅವಮಾನ ಮಾಡಲಾಗಿದೆ ಎನ್ನುವುದು ನೋಡುಗರ ಬೇಸರ.

ಮನೆಗೆ ಬಂದ ಅತಿಥಿ ಹೀಗೆ ಹೇಳುತ್ತಾರಾ?

ಮನೆಗೆ ಬಂದ ಅತಿಥಿ ಹೀಗೆ ಹೇಳುತ್ತಾರಾ?

ಮನೆಗೆ ಬಂದ ಅತಿಥಿ ನೇರವಾಗಿ ಹೀಗೆ ಹೇಳುತ್ತಾರಾ. ಅದರಲ್ಲು ಓರ್ವ ಹೋಮ್ ಮಿನಿಸ್ಟರ್ ಮನೆಗೆ ಬಂದವರು ನಿರಂಜನ್ ಕಿತ್ತೋದ ಬಟನ್ ಬಗ್ಗೆ ಹೇಳಿ ಅವಮಾನ ಮಾಡುತ್ತಾರಾ. ಇದು ನಿರಂಜನ್ ಗೆ ಮಾತ್ರ ಅವಮಾನ ಮಾಡಿದಲ್ಲ ಹೋಮ್ ಮಿನಿಸ್ಟರ್ ಭಾರ್ಗಿ ಅವರಿಗೂ ಅವಮಾನ ಮಾಡಿದಂತೆ ಆಗಿಲ್ಲವಾ. ಇದೂ ತೀರ ಅಸಹಜವಾಗಿ ಎನ್ನುವುದು ಪ್ರೇಕ್ಷಕರ ಅಸಮಾಧಾನ.

ನಿರಂಜನ್ ಮಾತು ಜಿಗುಪ್ಸೆ ತರಿಸುತ್ತೆ

ನಿರಂಜನ್ ಮಾತು ಜಿಗುಪ್ಸೆ ತರಿಸುತ್ತೆ

ಭಾರ್ಗಿ ಅವರು ಡಿಸೈನರ್ ಕಾಸ್ಟ್ಯೂಮ್ ಕೊಡಿಸುವುದಾಗಿ ಹೇಳಿದಾಗ ನಿರಂಜನ್ ನೀಡಿದ ಪ್ರತಿಕ್ರಿಯೆ ಜಿಗುಪ್ಸೆ ತರಿಸುವತಿಂದೆ. ಯಾಕಂದ್ರೆ ಕೋಟಿ ಗಟ್ಟಲೆ ಬ್ಯುಸಿನೆಸ್ ಮಾಡುವ ನಿರಂಜನ್ 'ನಮ್ಮಂತಹ ಬಡವರೂ..' ಎನ್ನುವ ಸಂಭಾಷಣೆ ಬಾಲಿಶ ಎನಿಸುತ್ತಿದೆ. ಹಾಗಾದರೆ ನಿರಂಜನ್ ಸ್ಥಾನದ ಬಗ್ಗೆಯೆ ಅವರಿಗೆ ಗೊತ್ತಿಲ್ಲವೆ. ಡಿ ವೈ ಎಸ್ ಪಿ ಪತಿಯಾಗಿ ಒಬ್ಬ ಬ್ಯುಸಿನೆಸ್ ಮೆನ್ ಆಗಿ ಬಟನ್ ಕಿತ್ತೋಗಿರುವ ಕೋಟು ಹಾಕಿಕೊಳ್ಳುವಷ್ಟು ಬಡವರಾಗಿರುತ್ತಾರಾ, ಆದರೆ ನಿರ್ದೇಶಕರು ಯಾಕೆ ಹೀಗೆ ಮಾಡುತ್ತಿದ್ದಾರೆ. ನಿರ್ದೇಶಕ ಟಿ ಎನ್ ಸೀತಾರಾಮ್ ಅವರಿಗೆ ಮನವರಿಗೆ ಮಾಡಿಕೊಡುವುದು ಹೇಗೆ ಎನ್ನುವದು ಪ್ರೇಕ್ಷಕರ ತಲೆನೋವಾಗಿದೆ.

More from Filmibeat

English summary
Bargi and transport minister insulted to Niranjan for wearing Torn coat in Magalu Janki serial. The audience are unhappy that this scene is un natural.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X