»   » 'ಫ್ಯಾಮಿಲಿ ಪವರ್' ಬಗ್ಗೆ ಖುಷಿ ಜೊತೆ ಬೇಸರ ವ್ಯಕ್ತಪಡಿಸಿದ ವೀಕ್ಷಕರು

'ಫ್ಯಾಮಿಲಿ ಪವರ್' ಬಗ್ಗೆ ಖುಷಿ ಜೊತೆ ಬೇಸರ ವ್ಯಕ್ತಪಡಿಸಿದ ವೀಕ್ಷಕರು

Posted By:
Subscribe to Filmibeat Kannada
'ಫ್ಯಾಮಿಲಿ ಪವರ್' ಬಗ್ಗೆ ಖುಷಿ ಜೊತೆ ಬೇಸರ ವ್ಯಕ್ತಪಡಿಸಿದ ವೀಕ್ಷಕರು | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸುಮಾರು ನಾಲ್ಕೈದು ವರ್ಷದ ನಂತರ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದು, ತಮ್ಮ 'ಫ್ಯಾಮಿಲಿ ಪವರ್' ಕಾರ್ಯಕ್ರಮದ ಮೊದಲ ಎಪಿಸೋಡ್ ಯಶಸ್ವಿಯಾಗಿ ಮೂಡಿಬಂದಿದೆ.

ಇದೊಂದು ಪಕ್ಕಾ ಫ್ಯಾಮಿಲಿ ಗೇಮ್ ಶೋ ಆಗಿದ್ದು, ಕುಟುಂಬ ಸಮೇತ ವೀಕ್ಷಕರು ನೋಡಿ ಎಂಜಾಯ್ ಮಾಡಿದ್ದಾರೆ. ಈ ಕಾರ್ಯಕಮದಲ್ಲಿ ಜನರಿಗೆ ಏನು ಇಷ್ಟವಾಯಿತು, ಏನೂ ಇಷ್ಟವಾಗಿಲ್ಲ ಎಂಬುದು ಈಗ ಚರ್ಚೆಯಾಗುತ್ತಿದೆ.

ಅಂದ್ಹಾಗೆ, ಪುನೀತ್ ಶೋನಲ್ಲಿ ಹೊಸತನವನ್ನ ಬಯಸಿ ಜನರು ಕಾಯುತ್ತಿದ್ದರು. ಆದ್ರೆ, ಪುನೀತ್ ಅವರನ್ನ ನೋಡಿ ಖುಷಿಪಟ್ಟ ವೀಕ್ಷಕರು ಆಟದ ಬಗ್ಗೆ ಕೊಂಚ ನಿರಾಸೆಗೊಂಡಿದ್ದಾರೆ. ಮುಂದೆ ಓದಿ....

ಚೆನ್ನಾಗಿದೆ, ಪವರ್ ಸೂಪರ್

'ಫ್ಯಾಮಿಲಿ ಪವರ್' ಶೋ, ಸೂಪರ್ ಆಗಿದೆ, ಅದ್ಭುತವಾಗಿದೆ, ಚೆನ್ನಾಗಿದೆ ಎಂಬ ಮಾತು ವೀಕ್ಷಕರ ವಲಯದಲ್ಲಿದೆ. ಮೊದಲ ಎಪಿಸೋಡ್ ನಲ್ಲಿ ಟಿವಿ ಪ್ರೇಕ್ಷಕರನ್ನ ಪುನೀತ್ ಶೋ ರಂಜಿಸುವಲ್ಲಿ ಯಶಸ್ವಿಯಾಗಿದೆ.

ಪುನೀತ್ ಫ್ಯಾಮಿಲಿಯಲ್ಲಿ ಯಾರ ಸ್ವಭಾವ ಹೇಗೆ? ಅಪ್ಪು ಬಿಚ್ಚಿಟ್ಟ ಸಂಗತಿ.!

ಪುನೀತ್ ನಿರೂಪಣೆ ಅದ್ಭುತ

'ಫ್ಯಾಮಿಲಿ ಪವರ್' ಕಾರ್ಯಕ್ರಮ ತುಂಬ ಚೆನ್ನಾಗಿ ಮೂಡಿ ಬರುತ್ತಿದೆ. ಅಪ್ಪು ಸರ್ ಅವರ ಸರಳತೆ ಮತ್ತು ಜನರ ಜೊತೆ ಅವರು ಬೆರೆಯುವ ಗುಣ ಇಷ್ಟ ಆಗ್ತಿದೆ ಎಂದು ಅಪ್ಪು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪು 'ಫ್ಯಾಮಿಲಿ ಪವರ್' ಕಾರ್ಯಕ್ರಮದ 5 ಸ್ವಾರಸ್ಯಕರ ಸಂಗತಿ!

ಬೇರೆ ರೀತಿಯ ಗೇಮ್ಸ್ ಬೇಕು

'ಫ್ಯಾಮಿಲಿ ಪವರ್' ಶೋನಲ್ಲಿ ನೋಡುತ್ತಿರುವ ಗೇಮ್ ಗಳು ಹೊಸ ರೀತಿಯಲ್ಲಿಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಹೊಸ ರೀತಿಯ ಆಟಗಳನ್ನ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಬೇಡಿಕೆ ಇಡುತ್ತಿದ್ದಾರೆ.

'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

ಚೆನ್ನಾಗಿಲ್ಲ, ಬೋರ್ ಆಗಿದೆ

ಪುನೀತ್ ಕಾರ್ಯಕ್ರವನ್ನ ಎಷ್ಟು ಜನ ಇಷ್ಟಪಡುತ್ತಿದ್ದಾರೋ, ಅಷ್ಟೇ ಜನ ಚೆನ್ನಾಗಿಲ್ಲ ಎಂದು ಕೂಡ ಹೇಳುತ್ತಿದ್ದಾರೆ. ಕಾರ್ಯಕ್ರಮ ಬೋರ್ ಹೊಡೆಯುತ್ತಿದೆ ಎನ್ನುತ್ತಿದ್ದಾರೆ.

ಸಂಥಿಂಗ್ ಮಿಸ್ಸಿಂಗ್

ಸಂಥಿಂಗ್ ಏನೋ ಮಿಸ್ ಆಗ್ತಿದೆ. ಈ ಕಾರ್ಯಕ್ರಮಕ್ಕೆ ಇನ್ನು ಏನೋ ಬೇಕು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮೇಲೆ ಪರಿಣಾಮ

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಅವರ ಫ್ಯಾಮಿಲಿ ಪವರ್ ಶೋ ಮತ್ತು ಸುದೀಪ್ ಸಾರಥ್ಯದ ಬಿಗ್ ಬಾಸ್ ವಾರಾಂತ್ಯದಲ್ಲಿ ಬಹುತೇಕ ಒಂದೇ ಸಮಯದ ಅಂತರದಲ್ಲಿ ಪ್ರಸಾರವಾಗುತ್ತೆ. ಹೀಗಾಗಿ, ವೀಕ್ಷಕರು ಯಾವ ಕಾರ್ಯಕ್ರಮ ಮನರಂಜನೆ ನೀಡುತ್ತೆ. ಆ ಶೋ ಬಗ್ಗೆ ಒಲವು ತೋರಿಸುತ್ತಿದ್ದಾರೆ.

English summary
Audience comments on puneeth rajkumar's new reality show Family Power. ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮದ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada