'ಬಿಗ್ ಬಾಸ್' ಮುಂದೆ ಭಿನ್ನ ವಿಭಿನ್ನ ಬೇಡಿಕೆಯಿಟ್ಟ ಪ್ರೇಕ್ಷಕರು.!

Recommended Video

Big Boss Kannada Season 6 : ಬಿಗ್ ಬಾಸ್ ಮುಂದೆ ಜನ ಇಟ್ಟ ಬೇಡಿಕೆಗಳಿವು..! | Filmibeat Kannada

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿಯ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಈಗ ಎಲ್ಲರನ್ನೂ ಕಾಡುತ್ತಿರುವುದು ಒಂದೇ. ಈ ಸಲ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಬಹುದು.?

ಮತ್ತೊಂದೆಡೆ ಬಿಗ್ ಬಾಸ್ ಗೆ ಕೆಲವು ಬೇಡಿಕೆ, ಮನವಿ, ಪ್ರಶ್ನೆಗಳನ್ನ ಪ್ರೇಕ್ಷಕರು ಮುಂದಿಟ್ಟಿದ್ದಾರೆ. ಕಲರ್ಸ್ ಸೂಪರ್ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ಕುರಿತು ಜನರು ಕಾಮೆಂಟ್ ಮಾಡ್ತಿದ್ದಾರೆ.

ಈ ಕಾಮೆಂಟ್ ಗಳಲ್ಲಿ ಕೆಲವು ವಿಷ್ಯಗಳು ಪದೇ ಪದೇ ಚರ್ಚೆಯಾಗುತ್ತಿದೆ. ಆದ್ರೆ, ಇದಕ್ಕೆ ಉತ್ತರ ಮಾತ್ರ ಎಲ್ಲಿಯೂ ಇಲ್ಲ. ಈ ಬಾರಿ ಶೋ ಹೇಗಿರಲಿದೆ.? ಯಾರು ಬರಬಹುದು.? ಯಾರಿಗೆ ಅವಕಾಶ ಕೊಡಬೇಕು.? ಎಂಬ ಕೆಲವು ಅಂಶಗಳನ್ನ ಜನಸಾಮಾನ್ಯರು ಚರ್ಚೆ ಮಾಡ್ತಿದ್ದಾರೆ. ಅದರಲ್ಲಿ ಕೆಲವು ಕಾಮೆಂಟ್ ಗಳನ್ನ ನಾವು ಆಯ್ಕೆ ಮಾಡಿ ಪಟ್ಟಿ ಮಾಡಿದ್ದೇವೆ.? ಅಷ್ಟಕ್ಕೂ, ಬಿಗ್ ಬಾಸ್ ಕುರಿತು ಗಮನ ಸೆಳೆದ ಕಾಮೆಂಟ್ ಗಳು ಯಾವುದು.? ಮುಂದೆ ಓದಿ.....

ಐಟಿ ಉದ್ಯೋಗಿಗಳಿಗೆ ಅವಕಾಶ

ಐಟಿ ಉದ್ಯೋಗಿಗಳಿಗೆ ಅವಕಾಶ

ಬಿಗ್ ಬಾಸ್ ಮೊದಲಿನಿಂದಲೂ ಗಮನಿಸದಾಗೆ ಐಟಿ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿಲ್ಲ. ಆ ವೃತ್ತಿಯಲ್ಲಾದರೂ ಯಾರಾದಾರೂ ಐಟಿ ಉದ್ಯೋಗಿಗೆ ಅವಕಾಶ ಕೊಡಿ ಎಂದು ಬಿಗ್ ಬಾಸ್ ಬಳಿ ಐಟಿ ಕಾರ್ಮಿಕರು ಮನವಿ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಕನ್ನಡಿಗರಿಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಬಹುಶಃ ಈ ಬಾರಿ ಇದ್ದರೂ ಇರಬಹುದು.

ಈ ಸಲ ಫ್ಯಾಮಿಲಿ ಶೋ ಆಗಿರಲಿ

ಈ ಸಲ ಫ್ಯಾಮಿಲಿ ಶೋ ಆಗಿರಲಿ

ಕಳೆದ ಬಾರಿ ಬಿಗ್ ಬಾಸ್ ಒಂದು ರೀತಿ ವಯಸ್ಕರು ಮಾತ್ರ ನೋಡುವಂತಿತ್ತು. ಈ ಸಲನಾದರೂ ಫ್ಯಾಮಿಲಿ ಎಲ್ಲರೂ ಕೂತು ನೋಡಬಹುದಾ ಎಂದು ಕೆಲ ಪ್ರೇಕ್ಷಕರು ಕೇಳುತ್ತಿದ್ದಾರೆ. ಬಿಗ್ ಬಾಸ್ ಶೋ ಮೇಲೆ ಈ ಆರೋಪ ಮೊದಲನೇ ಆವೃತ್ತಿಯಿಂದಲೂ ಕೇಳಿ ಬರತ್ತಿದೆ.

ತುಳಸಿ ಪ್ರಸಾದ್ ಬೇಡವೇ ಬೇಡ

ತುಳಸಿ ಪ್ರಸಾದ್ ಬೇಡವೇ ಬೇಡ

ಇನ್ನು ಸೋಶಿಯಿಲ್ ಮೀಡಿಯಾದಲ್ಲಿ ಕರ್ಕಶ ಧ್ವನಿಯಿಂದಲೇ ಗುರುತಿಸಿಕೊಂಡಿರುವ ತುಳಸಿ ಪ್ರಸಾದ್ ಎಂಬ ವ್ಯಕ್ತಿ, ಈ ಸಲ ಬಿಗ್ ಮನೆಗೆ ಹೋಗ್ತಾನೆ ಎಂದು ಹೇಳಲಾಗ್ತಿದೆ. ಆದ್ರೆ, ಯಾವುದೇ ಕಾರಣಕ್ಕೂ ಈ ವ್ಯಕ್ತಿಯನ್ನ ಬಿಗ್ ಬಾಸ್ ಮನೆಗೆ ಕಳುಹಿಸಬಾರದು ಎಂದು ಬೇಡಿಕೆ ಇಟ್ಟಿದ್ದಾರೆ.

ನಕಲಿ ಲವ್ ಸ್ಟೋರಿ ಬೇಡ

ನಕಲಿ ಲವ್ ಸ್ಟೋರಿ ಬೇಡ

ಪ್ರತಿಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ಲವ್ ಸ್ಟೋರಿ ಹುಟ್ಟಿಕೊಳ್ಳುತ್ತೆ. ಈ ಬಾರಿ ನಮಗೆ ಫೇಕ್ ಲವ್ ಸ್ಟೋರಿ ಬೇಡ. ನಮಗೆ ಅದು ನೋಡೋಕೆ ಇಷ್ಟ ಪಡಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಯಾಕೆ ನಮ್ಮನ್ನ ಆಯ್ಕೆ ಮಾಡುತ್ತಿಲ್ಲ

ಯಾಕೆ ನಮ್ಮನ್ನ ಆಯ್ಕೆ ಮಾಡುತ್ತಿಲ್ಲ

ಇನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲು ಅನೇಕ ಜನರು ಇಷ್ಟಪಡುತ್ತಿದ್ದಾರೆ. ಆದ್ರೆ, ಆಯ್ಕೆಯಾಗಿಲ್ಲ ಎಂಬ ಬೇಸರ ಅವರನ್ನ ಕಾಡುತ್ತಿದೆ. ಕಾಮೆಂಟ್ ಗಳಲ್ಲಿ ಹೆಚ್ಚು ಜನರು ನಮ್ಮನ್ನ ಆಯ್ಕೆ ಮಾಡಿ ಎಂದೇ ಕೇಳಿಕೊಳ್ಳುತ್ತಿದ್ದಾರೆ. ನಿಮಗೆ ಬೇಕಾದವರನ್ನ ಮಾತ್ರ ಸೆಲೆಕ್ಟ್ ಮಾಡ್ತೀರಾ, ನಮ್ಮಂಥವ್ರನ್ನಾ ಯಾಕೆ ನಿರಾಕರಿಸ್ತೀರಾ ಎಂದು ಕಿಡಿ ಕಾಡುತ್ತಿದ್ದಾರೆ.

ಬಿಗ್ ಬಾಸ್ ಗೆ ಧನ್ಯವಾದಗಳು

ಬಿಗ್ ಬಾಸ್ ಗೆ ಧನ್ಯವಾದಗಳು

ಬಿಗ್ ಬಾಸ್ ಎಂಬ ಶೀರ್ಷಿಕೆಯನ್ನ ಕನ್ನಡದಲ್ಲಿ ಬಳಸಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ. ಅದೇ ಸಮಯದಲ್ಲಿ ಕಲರ್ಸ್ ಕನ್ನಡ ಎಂಬ ಶೀರ್ಷಿಕೆಯನ್ನ ಕೂಡ ಕನ್ನಡದಲ್ಲೇ ಬಳಸಿ ಎಂದು ಮನವಿ ಮಾಡುತ್ತಿದ್ದಾರೆ.

ಅಕ್ಟೋಬರ್ 21 ಕ್ಕೆ ಬಿಗ್ ಬಾಸ್

ಅಕ್ಟೋಬರ್ 21 ಕ್ಕೆ ಬಿಗ್ ಬಾಸ್

ಅಕ್ಟೋಬರ್ 21 ರಂದು ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಆರಂಭವಾಗುತ್ತಿದೆ. ಬಿಗ್ ಮನೆಗೆ ಯಾರೆಲ್ಲಾ ಹೋಗ್ತಿದ್ದಾರೆ ಎಂದು ಕುತೂಹಲ ಹೆಚ್ಚಾಗಿದ್ದರೂ, ಆ ವ್ಯಕ್ತಿಗಳು ಯಾರೂ ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಕಿಚ್ಚ ಸುದೀಪ್ ಈ ಶೋವನ್ನ ನಿರೂಪಣೆ ಮಾಡಲಿದ್ದಾರೆ.

More from Filmibeat

English summary
Audience has taken color super channel official facebook page to ask some questions to bigg boss kannada organizer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X