ಬಿಗ್‌ ಬಾಸ್‌ ಕನ್ನಡದಲ್ಲಿ ಕಾಮನ್‌ಮ್ಯಾನ್ ಬೇಕೇ ಬೇಕು ಎನ್ನುತ್ತಿದ್ದಾರೆ ವೀಕ್ಷಕರು

ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಗೆ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ. ಕೊರೊನಾ ಕಾರಣದಿಂದ ನಿಗದಿತ ತಿಂಗಳಲ್ಲಿ ಬಿಗ್ ಬಾಸ್ ಆಯೋಜಿಸಲು ಸಾಧ್ಯವಾಗಿಲ್ಲ. ಇದೀಗ, 2021ರ ಆರಂಭದಲ್ಲಿ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಪ್ರಾರಂಭಿಸಲು ವಾಹಿನಿ ಮುಂದಾಗಿದೆ.

ಈ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕೊಡಲಾಗುವುದು, ಕಾಮನ್ ಮ್ಯಾನ್‌ಗಳು ಇರಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದ ಬಿಗ್ ಬಾಸ್ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರು ನಿರಾಸೆಯಾಗಿದ್ದಾರೆ. ಹಾಗಾಗಿ, ಫಿಲ್ಮಿಬೀಟ್ ಈ ಕುರಿತು ಪೋಲ್ ಆಯೋಜಿಸಿತ್ತು. ಈ ಪೋಲ್‌ನಲ್ಲಿ ಬಿಗ್‌ಬಾಸ್‌ಗೆ ಕಾಮನ್‌ಮ್ಯಾನ್‌ಗೆ ಅವಕಾಶ ಕೊಡಲೇಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಮುಂದೆ ಓದಿ...

ಜನಸಾಮಾನ್ಯರಿಗೆ ಅವಕಾಶ ಕೊಡಿ

ಜನಸಾಮಾನ್ಯರಿಗೆ ಅವಕಾಶ ಕೊಡಿ

ಬಿಗ್ ಬಾಸ್ ಹೊಸ ಆವೃತ್ತಿಯಲ್ಲಿ ಜನಸಾಮಾನ್ಯರು ಇರಲ್ಲ ಎಂಬ ವಿಷಯ ಹೊರಬೀಳುತ್ತಿದ್ದಂತೆ ಕಾಮನ್‌ಮ್ಯಾನ್‌ಗೆ ಅವಕಾಶ ಕೊಡಿ ಎಂದು ಮನವಿ ಹೆಚ್ಚಾಗಿದೆ. ಈ ಕುರಿತು ಫಿಲ್ಮಿಬೀಟ್‌ನಲ್ಲಿ ಕೇಳಲಾದ ಪೋಲ್‌ನಲ್ಲಿ ಜನಸಾಮಾನ್ಯರ ಪರವಾಗಿ ಹೆಚ್ಚು ಮತ ಬಂದಿದೆ.

ಬೇಡ ಎನ್ನೋರು ಇದ್ದಾರೆ

ಬೇಡ ಎನ್ನೋರು ಇದ್ದಾರೆ

ಜನಸಾಮಾನ್ಯರು ಇದ್ದರೆ ಶೋ ಅಷ್ಟಾಗಿ ಚೆನ್ನಾಗಿರಲಿಲ್ಲ, ಬರಿ ಸೆಲೆಬ್ರಿಟಿಗಳು ಇದ್ದರೆ ಕಾರ್ಯಕ್ರಮ ಮಜಾ ಇರುತ್ತದೆ ಎಂದು ಕೆಲವರು ಕಾಮನ್‌ಮ್ಯಾನ್‌ಗಳು ಬೇಡ ಬಿಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Recommended Video

ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham
ಸಂಕ್ರಾಂತಿ ನಂತರ ಬಿಗ್ ಬಾಸ್ ಆರಂಭ

ಸಂಕ್ರಾಂತಿ ನಂತರ ಬಿಗ್ ಬಾಸ್ ಆರಂಭ

ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ ಆರಂಭವಾಗಿ ಪ್ರಸಾರವಾಗ್ತಿದೆ. ಆದ್ರೆ, ಕನ್ನಡದಲ್ಲಿ ಪ್ರಾರಂಭವಾಗಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ ಜನವರಿ ಮೂರನೇ ವಾರ ಅಂದ್ರೆ ಸಂಕ್ರಾಂತಿ ಹಬ್ಬದ ಮುಗಿದ ನಂತರ ಬಿಗ್ ಬಾಸ್ ಕನ್ನಡ 8ಕ್ಕೆ ಚಾಲನೆ ಸಿಗಲಿದೆ.

ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರು

ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರು

ಬಿಗ್ ಬಾಸ್ ಹೊಸ ಆವೃತ್ತಿಗಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಸೆಲೆಬ್ರಿಟಿಗಳ ಪಟ್ಟಿ ಸಿದ್ಧವಾಗಿದ್ದು, ಅವರನ್ನು ಸಂಪರ್ಕಿಸುತ್ತಿದ್ದಾರಂತೆ. ಅಂದ್ಹಾಗೆ, ಕೊರೊನಾ ಭೀತಿ ಇರುವುದರಿಂದ ಈ ಆವೃತ್ತಿಯಲ್ಲಿ ಪ್ರಕ್ರಿಯೆಗಳು ಸಹ ಸ್ವಲ್ಪ ವಿಶೇಷವಾಗಿರಲಿದೆ. ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಮುನ್ನ ಕೆಲವು ದಿನ ಕ್ವಾರಂಟೈನ್ ಮಾಡಲಾಗುವುದು. ಕೊನೆಯ ದಿನ ಪರೀಕ್ಷೆ ಸಹ ಮಾಡಲಾಗುವುದು. ನೆಗಿಟಿವ್ ಬಂದವರನ್ನು ಮಾತ್ರ ಮನೆಯೊಳಗೆ ಕಳುಹಿಸಲಾಗುವುದು.

More from Filmibeat

English summary
Audience Demanding to give chance to Common men's in Bigg Boss Kannada season 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X