ಸೃಜನ್-ಅಕುಲ್ ಗೆ ಆದಂತೆ, ವಾಸುಕಿ-ಚಂದನ್ ವಿಷ್ಯದಲ್ಲೂ ಆಗಬಹುದು!

By ಮೇ.ರಾ

Recommended Video

ಇವರಿಬ್ಬರೂ ಬಿಗ್ ಬಾಸ್ ಫೈನಲ್ ಗೆ ಹೋಗ್ತಾರಾ? | FILMIBEAT Kannada

ಚಂದನ್ ಆಚಾರ್.. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಯಾರಿಗೂ ಒಲ್ಲದ ಒಗ್ಗದ ಊಟ ಅನ್ನೋ ಹಾಗಿದ್ದಾರೆ. ಆದ್ರೆ ಚಂದನ್ ಇರೋದೆ ಹೀಗಾ..? ಅಥವಾ ಬಿಗ್‌ಬಾಸ್ ಮನೆಯಲ್ಲಿ ಹೀಗಿದ್ದಾರಾ ಅನ್ನೋದಕ್ಕೆ ಈಗಾಗಲೇ ಶೈನ್ ಶೆಟ್ಟಿಯಿಂದ ಉತ್ತರ ಸಿಕ್ಕಾಗಿದೆ.

ಶೈನ್ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಚಂದನ್ ಆಚಾರ್ ಆಗಿ ಇಲ್ಲ.. ಬೇರೆಯದ್ದೇ ವ್ಯಕ್ತಿತ್ವ ಇಟ್ಟುಕೊಂಡಿದ್ದಾರೆ. ಯಾಕೀಗೆ ಅನ್ನೋದಕ್ಕೆ ಚಂದನ್ ಕೂಡ ಏನೂ ಹೇಳೋಲ್ಲ.. ಆದ್ರೆ ಸುದೀಪ್ ಕೇಳಿದಾಗೆಲ್ಲಾ ನಾನಿರೋದೆ ಹೀಗೆ ಅಂತಾರೆ. (ಇದು ಬಿಗ್ ಬಾಸ್ ವೀಕ್ಷಕರೊಬ್ಬರ ಅಭಿಪ್ರಾಯ ಮತ್ತು ಲೆಕ್ಕಾಚಾರ) ಮುಂದೆ ಓದಿ...

ಚಂದನ್ ಇರೋದೇ ಹೀಗಾ?

ಚಂದನ್ ಇರೋದೇ ಹೀಗಾ?

ಬಿಗ್‌ಬಾಸ್ ಮನೆಯಲ್ಲಿ ಆದ ಸೇಬಿನ ಗಲಾಟೆಯಿಂದ ಚಂದನ್ ಬದಲಾದರೋ ಅಥವಾ ಆರಂಭದಿಂದಲೂ ಬಿಗ್‌ಬಾಸ್ ಮನೆಯವರೆಲ್ಲಾ ಚಂದನ್ ಟಾರ್ಗೆಟ್ ಮಾಡಿದ್ದರಿಂದ ಬದಲಾಯಿಸಿಕೊಂಡರೋ ಅನ್ನೋದು ಅವರೇ ಹೇಳಬೇಕು. ಆದ್ರೆ ಅವರ ಪ್ರಕಾರ ಮಾತ್ರ ಯಾರೂ ಕೂಡ ವರ್ಜಿನಲ್ ಕ್ಯಾರೆಕ್ಟರ್‌ನಲ್ಲಿ ಅವರನ್ನ ಮಾತಾಡಿಸೋಲ್ಲ ಅನ್ನೋ ದೂರಿದೆ. ಅದೇನೇ ಇರಲಿ ಚಂದನ್ ಆಚಾರ್ ಮಾತ್ರ ಯಾರನ್ನೂ ನಂಬದೇ.. ಯಾರನ್ನೂ ಓಲೈಸದೇ ತಮಗಿಷ್ಟದಂತೆ ತಾವಿದ್ದಾರೆ.

ಅಕುಲ್ ಅವರಂತೆ ಚಂದನ್!

ಅಕುಲ್ ಅವರಂತೆ ಚಂದನ್!

ಚಂದನ್ ಆಚಾರ್‌ನ ನೋಡಿದ್ರೆ ಒಮ್ಮೊಮ್ಮೆ ಬಿಗ್‌ಬಾಸ್ ಸೀಸನ್-2 ವಿನ್ನರ್ ಅಕುಲ್ ನೆನಪಾಗ್ತಾರೆ.. ಅಕುಲ್ ಸಹ ಟಾಸ್ಕ್ ಅಂದಾಗ ಟಾಸ್ಕ್ ಮಾಡ್ತಿದ್ರು.. ಆಮೇಲೆ ಅವರಾಯ್ತು ಅವರ ಪಾಡಾಯ್ತು.. ಯಾವುದಕ್ಕೂ ಯಾರ ಬಗ್ಗೆಯು ತಲೆ ಕೆಡಿಸಿಕೊಂಡವರಲ್ಲ.. ಯಾರಿಗೂ ಅಯ್ಯೋ ಅಂದೋರು ಅಲ್ಲ. ಇಲ್ಲಿ ಚಂದನ್ ಆಚಾರ್ ಕೂಡ ಅಷ್ಟೇ. ಟಾಸ್ಕ್ ಅಂತ ಬಂದಾಗ ಮೈ ಕೊಡವಿ ನಿಲ್ತಾರೆ. ಅವರು ಗೆದ್ದದ್ದು ಕಡಿಮೆಯೇ. ಆದ್ರೆ ಆಟ ಮುಗೀತಿದ್ದಾಗೆ ತನ್ನದೇ ಲೋಕದಲ್ಲಿ ವಿರಾಜಮಾನರು. ಈ ಕಾರಣಕ್ಕೋ ಏನೋ ಯಾರಿಗೂ ಚಂದನ್ ಆಚಾರ್ ಬೇಕಿಲ್ಲ.. ನಾಮಿನೇಷನ್ ದಿನ ಬಂದಾಗೆಲ್ಲಾ ಎಲ್ಲಾ ಸದಸ್ಯರು ನೇರವಾಗಿ ಸಿಕ್ಕಿದೊಬ್ಬ ಅಂತ ಚಂದನ್ ಆಚಾರ್‌ನ ನಾಮಿನೇಟ್ ಮಾಡ್ತಾರೆ. ಹಾಗಾಗೇ ಪ್ರತೀವಾರ ಕೂಡ ಚಂದನ್ ಆಚಾರ್ ಎಲಿಮಿನೇಟ್ ಆದ್ರೂ ಸೇಫ್ ಆಗ್ತಾನೆ ಬಂದಿದ್ದಾರೆ. ಆದ್ರೆ ಇದು ಮನೆ ಸದಸ್ಯರಲ್ಲಿ ಬೇಸರವೂ ತಂದಿದೆ.

ಒಬ್ಬರಿಂದ ಕಳಪೆ ಆದ ಚಂದನ್!

ಒಬ್ಬರಿಂದ ಕಳಪೆ ಆದ ಚಂದನ್!

ಇತ್ತೀಚೆಗೆ ಕಳಪೆ ಅಂತ ಹೇಳಿ ಚಂದನ್ ಆಚಾರ್‌ನ್ನೇ ಟಾರ್ಗೆಟ್ ಮಾಡಿದ್ರು. ಆದ್ರೆ ಚಂದನ ಟಾಸ್ಕ್ ವಿಚಾರ ಬಂದಾಗ ಎಲ್ಲೂ ಮೈ ಚಳಿ ಬಿಟ್ಟು ಆಡಿದ್ದೇ ಕಂಡಿಲ್ಲ. ದೀಪಿಕಾರ ಡಬ್ಬ ಸ್ಟಾಟಜಿಯಿಂದಾಗಿ ಅವರಿಗೂ ಕಳಪೆ ಬೋರ್ಡ್ ಕೊಡೋ ಅವಕಾಶ ಇತ್ತು. ಆದ್ರೆ ಯಾರೋ ಒಬ್ಬರು ಚಂದನ್ ಹೆಸರು ತೆಗೆದುಕೊಂಡ ಕಾರಣಕ್ಕೆ ಎಲ್ಲರಿಗೂ ಚಂದನ್ ಕಳಪೆ ಅಂತನಿಸಿಬಿಟ್ಟಿತ್ತು. ಜೈಲುವಾಸದ ಸರದಿ ಅವರದ್ದಾಗಿತ್ತು. ಇಷ್ಟೆಲ್ಲಾ ನೋಡಿದ್ ಮೇಲೆ ಅನಿಸೋದು ಅಕುಲ್ ಬಾಲಾಜಿ ಆಗ್ತಾರಾ ಚಂದನ್ ಆಚಾರ್ ಅಂತ. ಇದಕ್ಕೆ ಜೈ ಜಗದೀಶ್ ಕೂಡ ಹೂ ಅಂತಾರೆ.

ಜೈಗದೀಶ್ ಯಾಕೆ ಹೀಗೆ ಹೇಳಿದ್ರು?

ಜೈಗದೀಶ್ ಯಾಕೆ ಹೀಗೆ ಹೇಳಿದ್ರು?

ಜೈಜಗದೀಶ್ ಅವರ ಬಿಗ್‌ಬಾಸ್ ಮನೆಯ ಜರ್ನಿ ಮುಗೀತಿದ್ದಾಗೆ ಅವರೊಂದು ಮಾತು ಹೇಳಿದ್ರು. ಯಾಕೋ ಏನೋ ಚಂದನ್ ಆಚಾರ್ ಈ ಬಿಗ್‌ಬಾಸ್ ಸೀಸನ್ನ ವಿನ್ನರ್ ಆಗ್ತಾನೆ ಅಂತನಿಸುತ್ತೆ ಅಂತ ಹೇಳಿದ್ರು. ಮನೆಯಿಂದ ಹೊರಗೆ ಹೋಗುವಾಗಲೂ 50 ಲಕ್ಷ ಬಂದ್ರೆ ನನ್ನ ಮರೀಬೇಡ್ರಪ್ಪ ಅಂತ ಹೇಳುತ್ತಲೇ ನನಗ್ಯಾಕೋ ಇವನೇ 50 ಲಕ್ಷ ಹೊಡೀತಾನೆ ಅನಿಸುತ್ತೆ ಅಂತ ಚಂದನ್ ಆಚಾರ್‌ನ ನೋಡುತ್ತಾ ಹೇಳಿದ್ರು.. ಈವರೆಗೂ ಯಾರನ್ನ ಬಿಗ್‌ಬಾಸ್ ಸದಸ್ಯರು ಮತ್ತು ಪ್ರೇಕ್ಷಕರು ನಾಟ್ ಓಕೆ ಅಂತಿರತಾರೋ ಅವರೇ ಬಿಗ್ಬಾಸ್ ವಿನ್ನರ್ ಆಗಿರೋದು ಇತಿಹಾಸ. ಇದಕ್ಕೆ ಅಕುಲ್ ಬಾಲಾಜಿ ಹಾಗೂ ಪ್ರಥಮ್ ಸಾಕ್ಷಿ.

ವಾಸುಕಿ ಸೃಜನ್ನಾ..!?

ವಾಸುಕಿ ಸೃಜನ್ನಾ..!?

ಬಿಗ್‌ಬಾಸ್ ಸೀಸನ್-2ನಲ್ಲಿ ಸೃಜನ್ ಲೋಕೇಶ್ ಸಕ್ಕತ್ ಎಂಟ್ರಟೇನ್ ಮಾಡಿದ್ರು. ಆ ಕಾರಣಕ್ಕೇ ಬಹಳಷ್ಟು ಮಂದಿ ಸೃಜನ್ ಗೆಲ್ತಾರೆ.. ಗೆಲ್ಲಬೇಕು ಅಂತ ಬಯಸಿದ್ರು. ಇನ್ನು ಅಕುಲ್ ಬಾಲಾಜಿ ಅವರ ಗೇಮ್ ನೋಡಿ ಅದೆಷ್ಟೋ ಜನ ಅಕುಲ್ ಬಾಲಾಜಿಗಿಂತ ಸೃಜನೇ ಬೆಸ್ಟ್ ಅಂದಿದ್ರು. ಅದಕ್ಕೆ ಸಿಕ್ಕ ಕಾರಣ ಏನು ಅಂದ್ರೆ ಅಕುಲ್ ತಮ್ಮ ಪಾಡಿಗೆ ತಾವಾಡಿದ್ರು.. ಎಲ್ಲೂ ಯಾರ ಪರವೂ ನಿಂತು ಸ್ಟಾಟಜಿ ಮಾಡಿರಲಿಲ್ಲ. ತಮಗನಿಸಿದಂತೆ ತಾವಿದ್ರು. ತಮಗೆ ಎಷ್ಟು ಸಾಧ್ಯವೋ ಅಷ್ಟು ಆಡಿದ್ರು. ಆದ್ರೆ ಸೃಜನ್ ಟೀಂ ಮಾಡಿಕೊಂಡಿದ್ರು. ಶ್ವೇತ ಚೆಂಗಪ್ಪ, ಅನುಪಮ ಭಟ್, ಆದಿ ಲೋಕೇಶ್ ಇವರೆಲ್ಲಾ ಒಂದು ಟೀಂನಂತಿದ್ರು. ಸೃಜನ್ ಒಮ್ಮೊಮ್ಮೆ ಅವರಿಗಾಗಿ ಆಟ ಬಿಟ್ಟಿದ್ದೂ ಉಂಟು. ಆದ್ರೆ ಅಕುಲ್ ಹಾಗಿರಲಿಲ್ಲ.

ವಾಸುಕಿ ಅದೇ ಹಾದಿಯಲ್ಲಿದ್ದಾರಾ?

ವಾಸುಕಿ ಅದೇ ಹಾದಿಯಲ್ಲಿದ್ದಾರಾ?

ವಾಸುಕಿ ವೈಭವ್ ಕೂಡ ಒಳ್ಳೆ ಹಡುಗಾರ ಎಂಟ್ರಟೈನ್ ಮಾಡ್ತಾರೆ. ಅವರು ಬಿಗ್‌ಬಾಸ್ ಮನೆಯಲ್ಲಿ ಹಾಡೋ ಒಂದು ಹಾಡಿಗೆ ಅವರನ್ನ ಮಳ್ಳ ಅಂತಿದ್ದೋರ ಮನಸ್ಸನ್ನೂ ಬದಲಿಸೋ ಶಕ್ತಿ ಇದೆ. ಹಾಗಾಗೇ ಮಳ್ಳ - ಕಳ್ಳ ಅನ್ನೋರೆಲ್ಲಾ ಈಗ ವಾಸುಕಿ ವೈಭವ್‌ನ ಇಷ್ಟ ಪಡೋಕೆ ಶುರುವಾಗಿದ್ದಾರೆ. ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ.. ನೀನೂ ಕೂಡ ಕೆಟ್ಟವನಲ್ಲ ಅಂತಿದ್ದಾರೆ. ಆದ್ರೆ ವಾಸುಕಿಯ ಗ್ರೂಪಿಸಂ ಬಿಗ್‌ಬಾಸ್ ಟ್ರೋಫಿನ ಮಿಸ್ ಮಾಡ್ಬೋದು.

ಭೂಮಿ ಆಗ್ತಾರಾ ಶ್ರುತಿ..!?

ಭೂಮಿ ಆಗ್ತಾರಾ ಶ್ರುತಿ..!?

ಭೂಮಿ ಶೆಟ್ರು ಆಡ್ತಿರೋ ಪರಿ ನೋಡಿದ್ರೆ ಬಿಗ್‌ಬಾಸ್ ಸೀಸನ್-3ರಲ್ಲಿ ಶೃತಿ ಗೆದ್ದಾಗೆ ಭೂಮಿ ಶೆಟ್ಟಿ ಗೆದ್ದರೂ ಆಶ್ಚರ್ಯ ಇಲ್ಲ. ಆಕೆಯ ಮಾತು ಮತ್ತು ಆಟಿಟ್ಯೂಡ್ ಹಾಗೂ ಟಾಸ್ಕ್ನಲ್ಲಿ ಟೀಂನ ಇನ್‌ವಾಲ್ವ್ ಮಾಡಿಕೊಂಡು ಆಕೆ ಗೆಲ್ಲೋ ಪರಿ ಇದ್ಯಲ್ಲ ಅದು ಬಿಗ್‌ಬಾಸ್ ವಿನ್ನರ್ ಪಟ್ಟವನ್ನ ಮುಡಿಗಿಟ್ಟರೂ ಅಚ್ಚರಿ ಇಲ್ಲ. ಆಕೆಯ ಯಾವ ನಡುವಳಿಕಯಲ್ಲೂ ಸಿನಿಕತನ ಇದ್ದಂತೆ ಕಾಣೋದಿಲ್ಲ.. ಟಾಸ್ಕ್ ಅಂತ ಬಂದಾಗ ಆಕೆ ಸ್ನೇಹಿತ ಅಥವಾ ಸ್ನೇಹಿತೆ ಅಂತಾನೂ ನೋಡದೇ ನ್ಯಾಯವಾಗಿ ಆಡ್ತಿದ್ದಾರೆ. ಅದನ್ನೇ ಹೇಳಿದ್ದಾರೆ ಕೂಡ.

ಮಹಿಳೆ ಗೆಲ್ಲಬಹುದು ಅಂತಾ ಆದ್ರೆ?

ಮಹಿಳೆ ಗೆಲ್ಲಬಹುದು ಅಂತಾ ಆದ್ರೆ?

ಕೆಲವೊಮ್ಮೆ ಮೀನಿಗಾಗಿ- ಸಕ್ಕರೆಗಾಗಿ ಅಲೆಯೋ ರೀತಿ ಪ್ರೇಕ್ಷಕರಿಗೆ ಓವರ್ ಅನ್ನಿಸಬೋದು. ಆದ್ರೆ ಕೆಲವರಿಗೆ ಪಂಚಪ್ರಾಣ ಅನ್ನಿಸೋ ತಿನಿಸುಗಳು ಒಂದಷ್ಟು ದಿನಗಳ ಕಾಲ್ ಮಿಸ್ ಆಗಿ ಸಿಕ್ಕಾಗ ಆಗೋ ಹಂಬಲ.. ತುಡಿತ ಒಂದಷ್ಟು ಮಂದಿಗೆ ಅತಿರೇಖ ಅನ್ನಿಸಬೋದು. ಆದ್ರೆ ಆಕೆ ಮನೆಗೆ ಬಂದ ಮೊದಲ ದಿನದಂದಲೇ ಶುಭ ಶಕುನ ಸಿಕ್ಕಿದೆ.. ಮೊದಲ ಬಾರಿಯೇ ಕ್ಯಾಪ್ಟನ್ ಆಗಿದ್ದಾರೆ. ಇಲ್ಲಿವರೆಗೂ ಎಲ್ಲೂ ಆಕೆ ತನ್ನ ಆಟ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಈ ಬಾರಿ ಏನಾದ್ರೂ ಮಹಿಳೆಗೆ ಕೊಡೋಣ ಅಂತೇನಾದ್ರೂ ಬಿಗ್‌ಬಾಸ್ ನಿರ್ಣಯ ಮಾಡಿದ್ರೆ ಮಿಸ್ ಇಲ್ಲದೇ ಬಿಗ್‌ಬಾಸ್ ಪಟ್ಟ ಭೂಮಿಯದ್ದಾಗಬಹುದು.

More from Filmibeat

English summary
According to Bigg boss Audience, vasuki vaibhav and chandan achar will be stand in finale stage. but, finale chandan may be win this show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X