»   » 'ಮಾನಸ'ಳ ಕನಸು ನನಸಾಗುವ ಸಮಯ ಬಂತು: 'ಅವಳು'ಗೆ ಸಿಗಲಿದೆ ಹೊಸ ಟ್ವಿಸ್ಟು.!

'ಮಾನಸ'ಳ ಕನಸು ನನಸಾಗುವ ಸಮಯ ಬಂತು: 'ಅವಳು'ಗೆ ಸಿಗಲಿದೆ ಹೊಸ ಟ್ವಿಸ್ಟು.!

Posted By:
Subscribe to Filmibeat Kannada

ಸದಾ ನ್ಯಾಯದ ದಾರಿಯಲ್ಲೇ ಸಾಗುತ್ತಾ, ಇತರರ ಕಷ್ಟಕ್ಕೆ ಸ್ಪಂದಿಸುವವಳು ಮಾನಸ. ತನ್ನ ಈ ನಡವಳಿಕೆಯಿಂದಲೇ ತಂಗಿ ಶ್ವೇತಾಳ ಮದುವೆ ಮಾಡಿಸಲು, ತನಗಿಂತ ವಯಸ್ಸಿನಲ್ಲಿ ಹೆಚ್ಚು ಅಂತರವಿರುವ ಶ್ರೀಮಂತ ವ್ಯಕ್ತಿ ಮಧುಸೂದನ್ ರನ್ನು ಮದ್ವೆಯಾಗುತ್ತಾಳೆ.

ತನ್ನ ಬಾಳಿನಲ್ಲಿ ನಡೆಯುವ ಅನೇಕ ತಿರುವುಗಳ ನಡುವೆ, ತಂಗಿಯನ್ನು ಮದುವೆ ಆಗಿರುವ ಹುಡುಗ ಸಿದ್ಧಾರ್ಥನೇ ತನ್ನ ಗಂಡನ ಮಗ ಎನ್ನುವ ಸತ್ಯ ಬಯಲಾಗುತ್ತದೆ. ಇದರಿಂದಾಗಿ ಅಕ್ಕ-ತಂಗಿ ಗೊತ್ತಿಲ್ಲದೇ ಅತ್ತೆ-ಸೊಸೆಯಾಗಿ ಒಂದೇ ಮನೆಗೆ ಬರುತ್ತಾರೆ.

ಸೋನಿಯಾಳ ಕುತಂತ್ರದಿಂದ ಮಾನಸಳ ಕೈಯಿಂದಲೇ ಸಿದ್ದು ಜೈಲಿಗೆ ಸೇರುವಂತಾಗುತ್ತದೆ. ಅಕ್ಕ ಅಂದ್ರೆ ಜೀವ ಅಂತಿದ್ದ ತಂಗಿ ಈ ಕಾರಣಕ್ಕಾಗಿ ಮಾನಸಳ ಮೇಲೆ ದ್ವೇಷ ಕಾರುತ್ತಾಳೆ. ಒಂದೆಡೆ ಅತ್ತಿಗೆ ಮಯೂರಿ ಮತ್ತೊಂದೆಡೆ ತಂಗಿ ಶ್ವೇತಾಳ ದ್ವೇಷದಿಂದಾಗಿ, ತನ್ನ ಹೊಟ್ಟೆಯಲ್ಲಿರುವ ಮಗುವಿಗೆ ಆಪತ್ತು ಕಾದಿಗೆ ಎಂಬುವುದು ಮಾನಸಗೆ ಗೊತ್ತಾಗುತ್ತದೆ.

Avalu serial: Will Manasa gets to know the truth?

ನಿಮ್ಮ ಉದಯ ಟಿವಿಯಲ್ಲಿ 'ಅವಳು' ಮಹಾ ಸಂಚಿಕೆ

ಈ ನಡುವೆ ಅಪೂರ್ವ ಎಂಬ ಹುಡುಗಿಯನ್ನ ಮದುವೆ ಮುಂಚೆಯೇ ಬಸುರಿ ಮಾಡಿರುವ ಮಯೂರಿಯ ಮಗ ರಾಹುಲ್ ಗೆ ಬುದ್ಧಿ ಕಲಿಸಲು ಹೋಗಿ ರಾಜೇಶ್ವರಿಯ ದ್ವೇಷ ಕಟ್ಟಿಕೊಳ್ಳುತ್ತಾಳೆ ಮಾನಸ. ತನ್ನ ಸತ್ಯದ ದಾರಿಯಲ್ಲಿ ಹಲವು ಜನರ ದ್ವೇಷ ಕಟ್ಟಿಕೊಂಡಿರುವ ಮಾನಸಗೆ ಒಂದು ದಿನ ತನ್ನ ಹೊಟ್ಟೆಯಲ್ಲಿರುವ ಮಗು ಸತ್ತು ಹೋಯ್ತೆಂಬ ಸುದ್ದಿ ಕೇಳಿದಾಗ ಆಘಾತಕ್ಕೆ ಒಳಗಾಗುತ್ತಾಳೆ.

ಮಾನಸಗೆ ಮಗು ಹುಟ್ಟಿದರೆ ಅದನ್ನ ಸಾಯಿಸಿ ಬಿಡುವುದಾಗಿ ಸಿದ್ದಾರ್ಥ ಹೇಳುವ ಮಾತನ್ನ ಕೇಳಿಸಿಕೊಂಡ ಮಧುಸೂದನ್, ತನ್ನ ಮಗುವನ್ನು ಕೆಲಸದವರ ಮನೆಯಲ್ಲಿ ಬಚ್ಚಿಟ್ಟುಕೊಂಡೇ 'ಮಗು ಸತ್ತಿದೆ' ಎಂಬ ನಾಟಕವಾಡುತ್ತಿದ್ದಾನೆ. ಮಾನಸಳ ಬದುಕನ್ನೇ ಸರ್ವನಾಶ ಮಾಡಿದ್ದೀವಿ ಎಂದು ಬೀಗುತ್ತಿರುವ ವೈರಿಗಳಿಗೆ ಅವಳ ಮಗು ಬದುಕಿರುವ ಸತ್ಯ ಗೊತ್ತಾದರೆ ಏನಾಗಬಹುದು? ಇದರ ನಡುವೆ ಮಾನಸಗೆ ತನ್ನ ಮಗು ಬದುಕಿದೆ ಎಂಬ ಸತ್ಯ ಗೊತ್ತಾಗುವುದಾದರೂ ಯಾವಾಗ? ಹಲವಾರು ರೋಚಕ ತಿರುವುಗಳೊಂದಿಗೆ ಪ್ರತಿ ರಾತ್ರಿ 7:30ಕ್ಕೆ ತಪ್ಪದೇ ನೋಡಿ 'ಅವಳು'. ನಿಮ್ಮ ಉದಯ ಟಿವಿಯಲ್ಲಿ....

English summary
Udaya TV's popular serial 'Avalu' written update: Will Manasa gets to know the truth?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X