ಅಭಿಗೆ ಶ್ರಾವಣಿ ಮೇಲಿರೋದು ಪ್ರೀತಿನಾ.. ದ್ವೇಷನಾ..? ರಿವೀಲ್ ಆಗೋದು ಯಾವಾಗ..?

By ಎಸ್ ಸುಮಂತ್

ಅಭಿ ಮತ್ತು ಶ್ರಾವಣಿ ದೂರ ಆಗುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ವಿಧಿ ಅವರಿಬ್ಬರನ್ನು ಮತ್ತೆ ಮತ್ತೆ ಒಂದು ಮಾಡುತ್ತಿದೆ. ಮನೆಯವರಿಗೂ ತಿಳಿಯದಂತೆ ಪ್ರೀತಿಸಿ ಮದುವೆಯಾದವರು ಶ್ರಾವಣಿ ಮತ್ತು ಅಭಿ. ಆದರೆ ಅಷ್ಟೇ ಬೇಗ ಯಾರಿಗೂ ಗೊತ್ತಾಗದ ಹಾಗೇ ದೂರವು ಆಗಿ ಬಿಟ್ಟರು. ಬಹಳ ವರ್ಷಗಳ ಕಾಲ ಇಬ್ಬರು ದೂರವೇ ಇದ್ದರು. ಅಭಿಯ ಮದುವೆ ಶ್ರಾವಣಿಯ ತಂಗಿಯ ಜೊತೆಗೆನೆ ನಿಶ್ಚಯವಾಗಿತ್ತು. ಆದರೆ ವಿಧಿ ಅದನ್ನು ತಪ್ಪಿಸಿ, ಮತ್ತೆ ಶ್ರಾವಣಿ -ಅಭಿ ಒಂದಾಗುವಂತೆ ಮಾಡಿದೆ.

ಅಭಿ ಮನೆಯಲ್ಲಿ ಚೀಕು ಇದ್ದಾನೆ. ಇದೇ ಚೀಕುವಿನಿಂದಾನೇ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಆ ಪ್ರೀತಿಯೇ ಮದುವೆ ತನಕ ಬಂದಿತ್ತು. ಯಾವುದೊ ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರವಾದರೂ. ಚೀಕುಗೆ ಇಬ್ಬರೂ ಬೇಕಿತ್ತು. ಆದರೆ ಏನು ಮಾಡಲಾಗದ ಸ್ಥಿತಿಯಲ್ಲಿ ಚೀಕೂ ಇದ್ದ. ಈಗ ಮತ್ತೆ ವಿಧಿ ಒಳ್ಳೆಯದ್ದನ್ನೇ ಮಾಡಿದೆ. ಆದರೆ, ಅಭಿ ಮತ್ತು ಶ್ರಾವಣಿಯ ನಡುವೆ ಇರುವುದು ಪ್ರೀತಿನಾ..? ದ್ವೇಷನಾ ಅನ್ನುವುದೇ ತಿಳಿಯುತ್ತಿಲ್ಲ.

Avanu Matte Shravani Serial written update about Abhi stole passport

ವಿದೇಶಕ್ಕೆ ಹೊರಟು ನಿಂತ ಶ್ರಾವಣಿ

ಶ್ರಾವಣಿ ಈ ಮೊದಲು ಕೂಡ ವಿದೇಶದಲ್ಲಿಯೇ ಇದ್ದಳು. ತಂಗಿಯ ಮದುವೆಗಾಗಿ ಊರಿಗೆ ಬಂದಿದ್ದಳು. ಆದರೆ ವಿಧಿ ಮರು ಮದುವೆ ಮಾಡಿಸಿತ್ತು. ಮನಸ್ಸಿನಲ್ಲಿ ಗಟ್ಟಿ‌ ನಿರ್ಧಾರಕ್ಕೆ ಬಂದಿರುವ ಶ್ರಾವಣಿ, ಅಭಿಯ ಜೊತೆಗೆ ಜೀವನ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದಾಳೆ. ಹೀಗಾಗಿ ಮತ್ತೆ ವಿದೇಶಕ್ಕೆ ಹೊರಟು ನಿಂತಿದ್ದಾಳೆ.

ಅಭಿ ಕೈಯಲ್ಲಿ ಶ್ರಾವಣಿಯ ಪಾಸ್‌ಪೋರ್ಟ್

ಶ್ರಾವಣಿಗೆ ಅಭಿಯ ಜೊತೆಗೆ ಇರುವುದಕ್ಕೆ ಸ್ವಲ್ಪವೂ ಇಷ್ಟವಿಲ್ಲ. ಅಭಿ ಮದುವೆ ಆದಾಗಿನಿಂದಲೂ ಅವಳನ್ನು ಕಾಡುತ್ತಲೇ ಇದ್ದಾನೆ. ಈಗ ವಿದೇಶಕ್ಕೆ ಹೊರಟು ನಿಂತ ಶ್ರಾವಣಿ, ತನ್ನನ್ನು ತಡೆಯಬಾರದು ಎಂದು ಪ್ರಮಾಣ ಮಾಡಿಸಿಕೊಂಡಿದ್ದಾಳೆ. ಆದರೂ ಶ್ರಾವಣಿ ಹೊರಡುವಾಗ ಮತ್ತೆ ಕಿತಾಪತಿ ಮಾಡಿದ್ದಾನೆ. ಅವಳಿಗೆ ಗೊತ್ತಿಲ್ಲದಂತೆ ಅವಳ ಪಾಸ್ ಪೋರ್ಟ್ ಕದ್ದು ಇಟ್ಟುಕೊಂಡಿದ್ದಾನೆ. ಎಷ್ಟು‌ ಕೇಳಿದರು ಅದನ್ನು ಕೊಡುವುದಕ್ಕೆ ಸಿದ್ದವಿಲ್ಲ.

Avanu Matte Shravani Serial written update about Abhi stole passport

ಶ್ರಾವಣಿಯದ್ದೇ ತಪ್ಪು ಎಂದ ಅತ್ತೆ

ಶ್ರಾವಣಿ ಹಾಗೂ ಅಭಿ ಎದುರು ಬದುರಾದರೆ ಜಗಳ ಆಡದೆ ಇರುವುದೇ ಇಲ್ಲ. ಅದರಂತೆ ಈಗ ವಿದೇಶಕ್ಕೆ ಹೊರಟು ನಿಂತ ಶ್ರಾವಣಿಯ ಬಳಿ ಕಿತ್ತಾಡುತ್ತಿದ್ದಾನೆ. ಪಾಸ್ ಪೋರ್ಟ್ ಎತ್ತಿಟ್ಟುಕೊಂಡಿದ್ದ ಅಭಿ, ಟಿಕೆಟ್ ಕಿತ್ತುಕೊಳ್ಳುವುದಕ್ಕೆ ಹೋಗಿದ್ದಾನೆ. ಕೋಪಗೊಂಡ ಶ್ರಾವಣಿ, ಅಭಿಯನ್ನು ತಳ್ಳಿದ್ದಾಳೆ. ಇದೇ ಸಮಯಕ್ಕೆ ಹೊರಗೆ ಬಂದ ಅಭಿ ಅತ್ತೆ, ಶ್ರಾವಣಿಯದೇ ತಪ್ಪು ಎಂಬಂತೆ ತಿಳಿದುಕೊಂಡಿದ್ದಾಳೆ. ಅವಳನ್ನೇ ನಿಂದಿಸಿದ್ದಾಳೆ.

ಅಭಿ ಶ್ರಾವಣಿಯ ಬಳಿ ಹಿಂಗ್ಯಾಕೆ ಆಡ್ತಿದ್ದಾನೆ?

ಅಭಿಗೆ ಶ್ರಾವಣಿಯ ಮೇಲೆ ಪ್ರೀತಿ ಇಲ್ಲ ಎನ್ನುವಂತೆ ಇಲ್ಲ. ಯಾಕಂದ್ರೆ ಸಾಕಷ್ಟು ಸಲ ಮನೆಯವರ ಮುಂದೆ ಅವಳನ್ನು ಬಚಾವ್ ಮಾಡುವ ಪ್ರಯತ್ನ ಮಾಡಿದ್ದಾನೆ. ಕೆಟ್ಟವಳ ರೀತಿ ಅವಳನ್ನು ತೋರಿಸಿಲ್ಲ. ಬದಲಾಗಿ ಒಳ್ಳೆಯವಳನ್ನೇ ಮಾಡಲು ಹೊರಟಿದ್ದಾನೆ. ಆದರೆ ಕಾಲೇಜು ದಿನಗಳಲ್ಲಿ ನಡೆದ ಘಟನೆಗಳಿಂದ ಇಬ್ಬರ ಮನಸ್ಸಲ್ಲೂ ಪ್ರೀತಿ ಇದ್ದರೂ, ಅದನ್ನು ತೋರಿಸುವುದಕ್ಕೆ ಅಹಂ ಅಡ್ಡಿಯಾಗುತ್ತಿದೆ. ವಿಧಿಯೇ ಎರಡನೇ ಬಾರಿಗೆ ಅವಕಾಶ ಕೊಟ್ಟಿದೆ. ಶ್ರಾವಣಿ ಅಭಿಪ್ರಾಯಕ್ಕೆ ತಕ್ಕ ಹಾಗೇ ಅಭಿ ನಡೆದುಕೊಳ್ಳುತ್ತಿರುವುದರಿಂದ, ನೋಡುಗರಿಗೂ ಅಭಿ ಮನಸ್ಸಲ್ಲಿ ಇರುವುದು ಪ್ರೀತಿನಾ..? ಬರೀ ದ್ವೇಷನಾ ಎಂಬ ಪ್ರಶ್ನೆ ಕಾಡುತ್ತಿದೆ‌. ಚೀಕುವಿನಿಂದ ಮುಂದೆ ಇಬ್ಬರು ಒಂದಾಗುವ ಕಾಲವೂ ದೂರ ಇಲ್ಲ.

More from Filmibeat

English summary
Avanu Matte Shravani serial written update about Abhi stole passport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X