ಮಾಡೆಲಿಂಗ್ ಮಾಡುತ್ತಲೇ ನಟನೆಗಿಳಿದ ಈಕೆ ಕಿರುತೆರೆಯ ಬೇಡಿಕೆ ನಟಿ: ಯಾರೀ ಪೂಜಾ ರಮೇಶ್?

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅವನು ಮತ್ತು ಶ್ರಾವಣಿ'. ಈ ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ದೊಡ್ಡಪ್ಪನ ಮಗಳು ನಿಶಿತಾ ಆಗಿ ನಟಿಸುತ್ತಿರುವ ಬೆಡಗಿ ಹೆಸರು ಪೂಜಾ ರಮೇಶ್.

ನಾಯಕಿಯ ಪಾತ್ರದಷ್ಟೇ ಪ್ರಾಮುಖ್ಯತೆ ಪಡೆದಿರುವ ನಿಶಿತಾ ಪಾತ್ರಕ್ಕೆ ಜೀವ ತುಂಬುತ್ತಿರುವ ಪೂಜಾ ಅವರಿಗೆ ಇದು ಎರಡನೇ ಧಾರಾವಾಹಿ. ಸಣ್ಣ ವಯಸ್ಸಿನಿಂದಲೂ ನಟನೆ ಎಂದರೆ ಪೂಜಾ ಅವರಿಗೆ ವಿಶೇಷ ಒಲವು. ಹಾಗಾಗಿ ಬಣ್ಣದ ಲೋಕದ ನಂಟನ್ನೇ ಆಕೆ ಬಯಸಿದ್ದರು.

Avanu matthe Shravani serial Nishita character Pooja Ramesh colorful journey began with modeling

"ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಣಿರಾಮ ಧಾರಾವಾಹಿಯ ಮೂಲಕ ನನ್ನ ಕಿರುತೆರೆ ಪಯಣ ಶುರುವಾಯಿತು. ನಾನು ಆ ಧಾರಾವಾಹಿಯಲ್ಲಿ ಅನಘಾ ಅಣ್ಣಾಜಿ ಪಾತ್ರಕ್ಕೆ ಜೀವ ತುಂಬಿದ್ದೆ. ಆ ಧಾರಾವಾಹಿಯಲ್ಲಿ ನಾನು ಉತ್ತರ ಕನ್ನಡದ ಗ್ರಾಂಥಿಕ ಭಾಷೆ ಮಾತನಾಡಬೇಕಿತ್ತು. ನಾನು ಆ ಪಾತ್ರಕ್ಕಾಗಿ ಆ ಭಾಷೆ ಕಲಿತುಕೊಂಡೆ. ಆ ಪಾತ್ರಕ್ಕೂ ಉತ್ತಮ ರೆಸ್ಪಾನ್ಸ್ ಬಂದಿತ್ತು. ಇನ್ನು ಗಿಣಿರಾಮ ಧಾರಾವಾಹಿಯ ತಂಡ ತುಂಬಾ ಸಪೋರ್ಟ್ ಕೂಡಾ ಮಾಡಿದರು. ಒಂದು ಒಳ್ಳೆಯ ಅನುಭವ ಎಂದು ಹೇಳಬಹುದು" ಎಂದು ತಮ್ಮ ಕಿರುತೆರೆ ಜರ್ನಿಯ ಸುಂದರ ಕ್ಷಣಗಳನ್ನು ಫಿಲ್ಮಿಬೀಟ್ ಜೊತೆಗೆ ಪೂಜಾ ರಮೇಶ್ ಮೆಲುಕು ಹಾಕಿದ್ದಾರೆ .

"ಅವನು ಮತ್ತು ಶ್ರಾವಣಿಯಲ್ಲಿ ನಾನು ನಿಶಿತಾ ಆಗಿ ನಟಿಸುತ್ತಿದ್ದೇನೆ. ಆ ಪಾತ್ರಕ್ಕೂ ನನಗೂ ಸಾಕಷ್ಟು ಸಾಮ್ಯತೆಯಿದೆ ಎನ್ನಬಹುದು. ನಿಶಿತಾ ತುಂಬಾ ಸ್ಟ್ರೈಟ್ ಫಾರ್ವರ್ಡ್.. ಆಕೆ ಯಾರಿಗೂ ಹೆದರುವುದಿಲ್ಲ. ಅವಳಿಗೆ ಏನೂ ಅನ್ನಿಸುತ್ತದೆ ಆಕೆ ಅದನ್ನೇ ಮಾಡುತ್ತಾಳೆ. ಸಣ್ಣದಾಗಿ ಹೇಳಬೇಕೆಂದರೆ ಒಂದು ತರ ಬಬ್ಲಿ ಕ್ಯಾರೆಕ್ಟರ್ ಅದು" ಎಂದು ನಿಶಿತಾ ಪಾತ್ರದ ಬಗ್ಗೆ ನಟಿ ಪೂಜಾ ರಮೇಶ್ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ .

"ಅಂದ ಹಾಗೇ ಈ ಪ್ರಾಜೆಕ್ಟ್ ನನಗೆ ತುಂಬಾ ಸ್ಪೆಷಲ್ ಹೌದು. ಯಾಕೆಂದರೆ ರಿಯಲ್ ಲೈಫ್ ಅಕ್ಕ ಅನುಷಾ ಈ ಧಾರಾವಾಹಿಯಲ್ಲಿ ಅಂದರೆ ರೀಲ್ ಲೈಫ್‌ನಲ್ಲಿ ಅಕ್ಕನಾಗಿ ಅಭಿನಯಿಸಿದ್ದಾರೆ. ಶ್ರಾವಣಿ ಪಾತ್ರ ಮಾಡುತ್ತಿದ್ದಾಳೆ. ಬಹುಶಃ ಕಿರುತೆರೆಯಲ್ಲಿ ಈ ತರಹದ ಘಟನೆ ನಡೆದಿರುವುದು ಇದೇ ಮೊದಲ ಬಾರಿ ಎಂದೆನಿಸುತ್ತದೆ. ರಿಯಲ್ ಅಕ್ಕನ ಜೊತೆಗೆ ರೀಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್‌ನೊಂದಿಗೆ ಪೂಜಾ ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

Avanu matthe Shravani serial Nishita character Pooja Ramesh colorful journey began with modeling

"ನಾನು ನಿಶಿತಾ ಆಗಿ ಬದಲಾಗಲು ಗಿಣಿರಾಮ ಧಾರಾವಾಹಿಯ ಅನಘಾ ಅಣ್ಣಾಜಿ ಪಾತ್ರ ಕಾರಣ. ಗಿಣಿರಾಮ ಧಾರಾವಾಹಿಯ ನನ್ನ ಪಾತ್ರ ಕಂಡು ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ಅವಕಾಶ ದೊರಕಿತು. ತದ ನಂತರ ಶ್ರಾವಣಿಯಾಗುವ ಅವಕಾಶ ಅಕ್ಕ ಅನುಷಾಗೆ ದೊರಕಿತು. ನಾವಿಬ್ಬರೂ ಈ ಪಾತ್ರಕ್ಕೆ ಸರಿಯಾಗಿ ಹೊಂದಾಣಿಕೆಯಾಗುವ ಕಾರಣ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಕಿರುತೆರೆ ವೀಕ್ಷಕರು ಕೂಡಾ ನಮ್ಮ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಪ್ರೀತಿ, ಪ್ರೋತ್ಸಾಹ ನೀಡುತ್ತಿದ್ದಾರೆ" ಎಂದು ಫಿಲ್ಮಿಬೀಟ್ ನೊಂದಿಗೆ ಮಾತನಾಡುತ್ತಾ ಪೂಜಾ ರಮೇಶ್‌ ಹೇಳಿದ್ದಾರೆ .

"ಇನ್ನು ನಟನೆಯ ಹೊರತಾಗಿ ನಾನು ಮಾಡೆಲಿಂಗ್ ಜಗತ್ತಿನಲ್ಲಿಯೂ ಗುರುತಿಸಿಕೊಂಡಿದ್ದೇನೆ. ತುಂಬಾ ಸಣ್ಣ ವಯಸ್ಸಿನಲ್ಲಿಯೇ ನಾನು ಮಾಡೆಲಿಂಗ್ ಲೋಕದ ನಂಟು ಬೆಳೆಸಿಕೊಂಡೆ. ತದ ನಂತರ ಕೆಲವು ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿದೆ. ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡೆ. ತಮಿಳುನಾಡು ಟೂರಿಸಂ ಬೋರ್ಡ್‌ನ ಜಾಹೀರಾತಿನಲ್ಲಿ ನಟಿಸಿದೆ. ಅದುವೇ ನನ್ನ ನಟನಾ ಪಯಣಕ್ಕೆ ಮುನ್ನುಡಿಯಾಯಿತು" ಎಂದು ನಟಿ ಪೂಜಾ ರಮೇಶ್ ತಮ್ಮ ಬಣ್ಣದ ಲೋಕದ ಜರ್ನಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

More from Filmibeat

English summary
Actress Pooja Ramesh's colorful journey was preceded by modeling:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X