Ayyana Mane: ಜಾಜಿಯ ರೋಚಕ ಕಥೆ; ಮುದ್ದಿನ ಹೆಂಡತಿಯ ಎಮೋಷನಲ್ ಪಯಣದಲ್ಲಿದೆ ರಹಸ್ಯಗಳು

By ಪ್ರಿಯಾ ದೊರೆ

ಜೀ ಕುಟುಂಬ ಪದೇ ಪದೇ ಹೊಸತನದ ಬಗ್ಗೆಯೇ ಯೋಚಿಸುತ್ತಿರುತ್ತದೆ. ಕನ್ನಡಿಗರಿಗೆ ಮಿನಿ ವೆಬ್ ಸಿರೀಸ್ ಅನ್ನು ತೋರಿಸಲು ಮುಂದಾಗಿದೆ. ಇಷ್ಟು ದಿನಗಳ ಕಾಲ ಕನ್ನಡ ವೆಬ್ ಸಿರೀಸ್‌ಗಳು ಅಷ್ಟೇನು ಸದ್ದು ಮಾಡಲಿಲ್ಲ. ಅಲ್ಲೊಂದು ಇಲ್ಲೊಂದು ವೆಬ್ ಸಿರೀಸ್‌ಗಳು ಸದ್ದು ಮಾಡಿ ಮರೆಯಾದವು ಆದರೆ, ಇದೀಗ ಜೀ5 ಮೂಲಕ ಹೊಸ ವೆಬ್ ಸಿರೀಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ತಯಾರಾಗಿದೆ.

ಜೀ5 ಓಟಿಟಿಯಲ್ಇ ನಿರ್ಮಾಪಕಿ ಶ್ರುತಿ ನಾಯ್ಡು ಅವರು ನಿರ್ಮಾಣ ಮಾಡಿರುವ ವೆಬ್ ಸಿರೀಸ್ ಒಂದು ಪ್ರಸಾರವಾಗಲಿದೆ. ಈ ವೆಬ್ ಸೀರೀಸ್‌ನ ಹೆಸರು 'ಅಯ್ಯನ ಮನೆ'.

Ayyana Mane Kannada webseries will release on Zee5 on April 25th

ಏಳು ಎಪಿಸೋಡಿನ 'ಅಯ್ಯನ ಮನೆ' ಎಂಬ ವೆಬ್ ಸೀರೀಸ್ ಅನ್ನು ನಿರ್ದೇಶಕ ರಮೇಶ್ ಇಂದಿರಾ ಅವರು ನಿರ್ದೇಶಿಸಿದ್ದಾರೆ. ಇದೇ ತಿಂಗಳು ಏ. 25ರಂದು ಜೀ5ನಲ್ಲಿ ಈ ವೆಬ್ ಸೀರೀಸ್ ಪ್ರಸಾರವಾಗಲಿದೆ.

ರೋಚಕ ಕಥೆ 'ಅಯ್ಯನ ಮನೆ'

ಈಗಾಗಲೇ 'ಅಯ್ಯನ ಮನೆ' ಪೋಸ್ಟರ್ ಮತ್ತು ಪ್ರೊಮೋ ಎಲ್ಲೆಡೆ ವೈರಲ್ ಆಗಿದೆ. ಈ ವೆಬ್ ಸಿರೀಸ್ ಎಲ್ಲರನ್ನೂ ರೋಮಾಂಚನಗೊಳಿಸುವಂತಿದ್ದು, ಮಿಸ್ಟರಿ ಕಥೆಯಾಗಿದೆ. 90 ರ ದಶಕದಲ್ಲಿ ಚಿಕ್ಕಮಂಗಳೂರಿನ ಮನೆಯೊಂದರಲ್ಲಿ ನಡೆಯುವ ರೋಚಕ ಕಥೆ ಇದಾಗಿದೆ. ಆ ಮನೆಯಲ್ಲಿ ಆಗಾಗ ಕೊಲೆಗಳು ನಡೆಯುತ್ತಿರುತ್ತವೆ. ಇದು ರಹಸ್ಯವಾಗಿರುತ್ತದೆ. ಆ ಮನೆಗೆ ಜಾಜಿ ಎಂಬಾಕೆ ಸೊಸೆಯಾಗಿ ಆಗಮಿಸುತ್ತಾಳೆ. ಸೊಸೆಯ ಎಂಟ್ರಿ ಇಂದಾಗಿ ಮನೆಯಲ್ಲಿನ ರಹಸ್ಯೆಗಳು ತೆರೆದುಕೊಳ್ಳಲಿದ್ದು, ಕಥೆ ಹೇಗೆ ನಡೆಯಲಿದೆ ಎಂಬ ಕುತೂಹಲ ಮೂಡಿದೆ.

ಯಾರು ಯಾರು ನಟಿಸಿದ್ದಾರೆ?

ಈ ವೆಬ್ ಸೀರೀಸ್ ಕೇವಲ 7 ಸಂಚಿಕೆಗಳನ್ನು ಒಳಗೊಂಡಿದೆ. ಇದರಲ್ಲಿ ಮೂವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ದಿಯಾ' ಸಿನಿಮಾ ನಟಿ ಖುಷಿ ರವಿ ಜಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ನ ನಾಯಕ ನಟ ಅಕ್ಷಯ್ ನಾಯಕ್, ಹಾಗೂ ಕಾಂತಾರ ನಟಿ ಮಾನಸಿ ಸುಧೀರ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಾಜಿಯನ್ನು ಅವರ ಪತಿ ಜಾಜಿಯನ್ನು ಅತೀಯಾಗಿ ಪ್ರೀತಿಸುತ್ತಾನೆ. ಜಾಜಿ ಕೂಡ ಸಂಪ್ರದಾಯಿಕ ಹುಡುಗಿಯಾಗಿದ್ದು, ಇವಳ ಭಾವನಾತ್ಮಕ ಪಯಣ ಮನೆಯಲ್ಲಿನ ರಹಸ್ಯಗಳನ್ನು ಬಯಲು ಮಾಡುತ್ತಾ..? ಇಲ್ಲವೇ ಇವಳೇ ರಹಸ್ಯವಾಗಿರುತ್ತಾಳಾ ಎಂಬ ಕುತೂಹಲಗಳಿವೆ.

ಕುತೂಹಲ ಹೆಚ್ಚಿಸಿದ ಪ್ರೊಮೋ

ವೆಬ್ ಸಿರೀಸ್‌ನಲ್ಲಿ ಏನೆಲ್ಲಾ ಟ್ವಿಸ್ಟ್ ಇರುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಈ ವೆಬ್ ಸಿರೀಸ್ ನಲ್ಲಿ ರಮೇಶ್ ಇಂದಿರಾ, ಶೋಭರಾಜ್ ಪಾವೂರ್, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ವಿಜಯ್ ಶೋಭರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಹಾರರ್ ಕಮ್ ಥ್ರಿಲ್ಲರ್ ಕಥೆ ಎನ್ನುವುದಂತೂ ಕನ್ಫರ್ಮ್ ಆಗಿದೆ. ಲವ್ ಸ್ಟೋರಿ ಬಿಟ್ಟು ಫ್ಯಾಮಿಲಿ ಹಾಗೂ ನಿಗೂಢ ಕಥೆಯ ಈ ವೆಬ್ ಸಿರೀಸ್ ಏಲು ದಿನಗಳ ಕಾಲ ವೀಕ್ಷಕರಲ್ಲಿ ಹೆಚ್ಚಿನ ಕುತೂಹಲವನ್ನು ಮೂಡಿಸುವುದಂತೂ ಪಕ್ಕಾ ಆಗಿದೆ. ಭಾರತೀಯ ಒಟಿಟಿ ಫ್ಲಾರ್ಮ್ ನಲ್ಲಿ ಒಂದಾಗಿರು ಜೀ5 ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಲ್ಲದೇ, ಈ ಮಿನಿ ವೆಬ್ ಸಿರೀಸ್ ಮೂಲಕ ಕನ್ನಡಿಗರಲ್ಲಿ ಇನ್ನಷ್ಟು ನಿರೀಕ್ಷಕೆಗಳನ್ನು ಹೆಚ್ಚಿಸಲಿದೆ. ಈಗಾಗಲೇ ಮಿನಿ ವೆಬ್ ಸೀರಿಸ್ ಪ್ರೊಮೋ ಕುತೂಹಲ ಹೆಚ್ಚಿಸಿದ್ದು, ನೋಡಲು ಇನ್ನೂ 12 ದಿನಗಳು ಕಾಯಲೇಬೇಕಾಗಿದೆ.

More from Filmibeat

English summary
First Ever Kannada Original Series Ayyana Mane Will Premiere On April 25th On zee 5;
Read more about: ott web series kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X