»   » ಜೀ-ಕನ್ನಡದಲ್ಲಿಂದು 'ಬಾಹುಬಲಿ' ಶೋ, ಮಿಸ್ ಮಾಡ್ಕೋಬೇಡಿ.!

ಜೀ-ಕನ್ನಡದಲ್ಲಿಂದು 'ಬಾಹುಬಲಿ' ಶೋ, ಮಿಸ್ ಮಾಡ್ಕೋಬೇಡಿ.!

Posted By:
Subscribe to Filmibeat Kannada

ಜೀ-ಕನ್ನಡದಲ್ಲಿಂದು 'ಬಾಹುಬಲಿ' ಶೋ ಪ್ರಸಾರವಾಗಲಿದೆ. ಕನ್ನಡ ವಾಹಿನಿಯಲ್ಲಿ 'ಬಾಹುಬಲಿ' ಶೋನಾ ಅಂತ ಶಾಕ್ ಆಗ್ಬೇಡಿ. ಇದು 'ಬಾಹುಬಲಿ' ಶೋ ಎನ್ನುವುದು ಎಷ್ಟು ನಿಜಾನೋ ಕನ್ನಡದಲ್ಲಿ ಅನ್ನೋದು ಅಷ್ಟೇ ನಿಜಾ.

ಜೀ-ಕನ್ನಡದಲ್ಲಿ ಪ್ರಸಾರವಾಗುವ 'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿಂದು 'ಬಾಹುಬಲಿ' ಕಥೆಯನ್ನ ಅಭಿನಯಿಸಲಿದ್ದಾರೆ. ಈ ಕಾಮಿಡಿ ಶೋನ ಎಪಿಸೋಡ್ ಪ್ರೋಮೋ ಬಿಡುಗಡೆಯಾಗಿದ್ದು, ಸಖತ್ ಕಾಮಿಡಿ ಆಗಿದೆ.

ಹಾಗಿದ್ರೆ, 'ಬಾಹುಬಲಿ' ಕಥೆಯಲ್ಲಿ ಯಾರು ಯಾವ ಪಾತ್ರಗಳನ್ನ ಮಾಡುತ್ತಿದ್ದಾರೆ ಎಂದು ಮುಂದೆ ನೋಡಿ.....

ಬಿಜ್ಜಳದೇವ

ಪ್ಯಾಕು ಪ್ಯಾಕು ಹಿತೇಶ್ 'ಬಾಹುಬಲಿ' ಸ್ಕ್ರಿಪ್ಟ್ ನಲ್ಲಿ ಬಿಜ್ಜಳದೇವನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಬಿಜ್ಜಳದೇವ, ಬಲ್ಲಾಳದೇವನ ತಂದೆ. 'ಬಾಹುಬಲಿ' ಚಿತ್ರದಲ್ಲಿ ನಾಸೀರ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕಾಲಕೇಯ

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ 'ಬಾಹುಬಲಿ' ಕಥೆಯಲ್ಲಿ ಕಾಲಕೇಯನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಹಿಶ್ಮತಿ ಸಾಮ್ರಾಜ್ಯ ಮೇಲೆ ದಂಡೆತ್ತಿ ಬರುವ ರಾಜ ಕಾಲಕೇಯ. ಚಿತ್ರದಲ್ಲಿ ಪ್ರಭಾಕರ್ ಈ ಪಾತ್ರವನ್ನ ಮಾಡಿದ್ದರು.

ಬಲ್ಲಾಳದೇವ

'ಬಾಹುಬಲಿ' ಕಥೆಯಲ್ಲಿ ಬರುವ 'ಬಲ್ಲಾಳದೇವ'ನ ಪಾತ್ರದಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ರಾಣಾ ದಗ್ಗುಬಾಟಿ ಈ ಪಾತ್ರವನ್ನ ನಿರ್ವಹಿಸಿದ್ದರು.

ಕಟ್ಟಪ್ಪ

'ಕಾಮಿಡಿ ಕಿಲಾಡಿ'ಗಳು ವಿಜೇತ ಶಿವರಾಜ್ ಕೆ ಆರ್ ಪೇಟೆ 'ಕಟ್ಟಪ್ಪ'ನ ಪಾತ್ರವನ್ನ ಮಾಡುತ್ತಿದ್ದಾರೆ. ತಮಿಳು ನಟ ಸತ್ಯರಾಜ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡಿಗರಿಗೆ ಅವಮಾನ ಮಾಡಿದ್ದಕ್ಕಾಗಿ ಕಟ್ಟಪ್ಪನ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು.

ದೇವಸೇನಾ

ಅನುಷ್ಕಾ ಕಾಣಿಸಿಕೊಂಡಿದ್ದ 'ದೇವಸೇನಾ' ಪಾತ್ರವನ್ನ, 'ಕಿಲಾಡಿ ಕುಟುಂಬ'ದಲ್ಲಿ ದಿವ್ಯ ನಿರ್ವಹಿಸುತ್ತಿದ್ದಾರೆ.

ಶಿವಗಾಮಿ

ಇನ್ನು 'ಬಾಹುಬಲಿ' ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದಾಗಿದ್ದ ಶಿವಗಾಮಿ ಪಾತ್ರಕ್ಕೆ, 'ಕಾಮಿಡಿ ಕಿಲಾಡಿ' ರನ್ನರ್ ಅಪ್ ಆಗಿದ್ದ ನಯನ ಬಣ್ಣ ಹಚ್ಚಿದ್ದಾರೆ.

ಬಾಹುಬಲಿ

ಕೊನೆಯದಾಗಿ, 'ಬಾಹುಬಲಿ' ಪಾತ್ರದಲ್ಲಿ ಒನ್ ಅಂಡ್ ಒನ್ಲಿ ಚೋಟಾ ಬಾಸ್ ಸಂಜು ಬಸಯ್ಯ ಕಾಣಿಸಿಕೊಂಡಿದ್ದಾರೆ.

ಇಂದು ರಾತ್ರಿ 7ಕ್ಕೆ

ಒಟ್ನಲ್ಲಿ, ಕಿಲಾಡಿ ಕುಟುಂಬದಲ್ಲಿ ಇಂದು 'ಬಾಹುಬಲಿ ಶೋ' ನೋಡುವುದಕ್ಕೆ ಸಖತ್ ಮಜಾ ಗ್ಯಾರೆಂಟಿ. ಇಂದು ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಕಿಲಾಡಿ ಕುಟುಂಬ ಪ್ರಸಾರವಾಗಲಿದೆ.

English summary
Baahubali Show in Todays Kiladi Kutumba on Zee Kannada at 7pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada