»   » ಡಾ.ರಾಜ್ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೆ ಸ್ಪೂರ್ತಿ ಎಂದ ಯೋಗಗುರು

ಡಾ.ರಾಜ್ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೆ ಸ್ಪೂರ್ತಿ ಎಂದ ಯೋಗಗುರು

Posted By:
Subscribe to Filmibeat Kannada

ವರನಟ, ಗಾನ ಗಂಧರ್ವ, ನಟ ಸಾರ್ವಭೌಮ ''ಡಾ.ರಾಜ್ ಕುಮಾರ್ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಅವರು ಇಡೀ ಭಾರತಕ್ಕೆ ಸ್ಪೂರ್ತಿ''......ಹೀಗೆಂದು ಹೇಳಿದವರು ಬೇರೆ ಯಾರು ಅಲ್ಲಾ, ಯೋಗಗುರು ಬಾಬಾ ರಾಮ್ ದೇವ್.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ಕಾರ್ಯಕ್ರಮಕ್ಕೆ ಈ ವಾರ ಯೋಗಗುರು ಬಾಬಾ ರಾಮ್ ದೇವ್ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ಮಕ್ಕಳಿಗೆ ಹಾಗೂ ವೀಕ್ಷಕರಿಗೆ ಯೋಗದ ಬಗ್ಗೆ ಮತ್ತು ಅದರ ಮಹತ್ವ ಬಗ್ಗೆ ಅನೇಕ ಮಾಹಿತಿಯನ್ನ ತಿಳಿಸಿಕೊಟ್ಟರು.

Baba Ramdev Speaks About Dr Rajkumar

ಯೋಗದ ಬಗ್ಗೆ ಮಾತನಾಡುವಾಗ ''ಡಾ.ರಾಜ್ ಕುಮಾರ್ ಅವರು ನಮಗೆ ಸ್ಪೂರ್ತಿ. ಅವರು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ ಸ್ಪೂರ್ತಿ ಎಂದರು. ರಾಜ್ ಕುಮಾರ್ ಅವರು ನಮ್ಮನ್ನ ಬಿಟ್ಟು ಹೋಗಿಲ್ಲ. ಈ ಮಕ್ಕಳ ಮುಖಾಂತರ ರಾಜ್ ಕುಮಾರ್ ಅವರು ಇನ್ನು ಇದ್ದಾರೆ. ಕರ್ನಾಟಕಕ್ಕೆ ಮಾತ್ರವಲ್ಲ, ಭಾರತ ದೇಶಕ್ಕೆ ದೇವರು ಕೊಟ್ಟ ವರದಾನ ಡಾ.ರಾಜ್ ಕುಮಾರ್'' ಎಂದು ಕನ್ನಡದ ಚಿತ್ರರಂಗದ ಅಣ್ಣಾವ್ರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

ಇದು ಕೇವಲ ಪ್ರೋಮೋ ಮಾತ್ರ, ಈ ಎಪಿಸೋಡ್ ಇಂದು ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತೆ. ಮಿಸ್ ಮಾಡ್ದೆ ನೋಡಿ......ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Yoga Guru Baba Ramdev Speaks About Dr Rajkumar in Popular Dance Reality Show Dance Dance Juniors on Star Suvarna Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada