'ಕರೋಡ್ ಪತಿ'ಯಲ್ಲಿ 1 ಕೋಟಿ ಗೆದ್ದ ಬಬಿತಾ 7 ಕೋಟಿ ಪ್ರಶ್ನೆಗೆ ಉತ್ತರಿಸುತ್ತಾರಾ?
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗ ಕರೋಡ್ ಪತಿ-11"ನೇ ಆವೃತ್ತಿಯಲ್ಲಿ ಬಬಿತಾ ತಾಡೆ ಒಂದು ಕೋಟಿ ಗೆದ್ದಿದ್ದಾರೆ. ಕೋಟಿ ಗೆಲ್ಲುವ ಜೊತೆಗೆ ಭಾರತೀಯರ ಮನಸ್ಸು ಗೆದ್ದಿದ್ದಾರೆ. ಅತ್ಯುತ್ತಮವಾಗಿ ಆಟವಾಡುತ್ತಿರುವ ಬಬಿತಾ ಅವರ ಜೀವನದ ಕತೆ ಕೇಳಿ ಒಮ್ಮೆ ಅಮಿತಾಭ್ ಅವರೇ ಮೌನಕ್ಕೆ ಶರಣಾಗಿದ್ರು.
ಮೊನ್ನೆ ಮೊನ್ನೆಯಷ್ಟೆ ಐಎಎಸ್ ಆಕಾಂಕ್ಷಿ ಸನೋಜ್ ರಾಜ್ ಒಂದು ಕೋಟಿ ಗಿದ್ದಿದ್ದರು. ಈಗ ಕೋಟಿ ಗೆದ್ದಿರುವ ಎರಡನೆ ಸ್ಪರ್ಧಿಯಾಗಿದ್ದಾರೆ ಬಬಿತಾ. ಅಮರಾವತಿ ಜಿಲ್ಲೆಯ ಬಬಿತಾ ತಾಡೆ ಸರಕಾರಿ ಶಾಲೆಯ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ 1500 ರೂಗಳಿಸುತ್ತೇನೆ ಎಂದು ಬಬಿತಾ ಹೇಳಿದ ಮಾತಿಗೆ ಅಮಿತಾಭ್ ಒಮ್ಮೆ ಸೈಲೆಂಟ್ ಆದ್ರು.
ಬಬಿತಾ ಮಾಡುವ ಕಿಚಡಿ ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟವಂತೆ. ಇನ್ನು ಈ ಶೋನಲ್ಲಿ ಸಿಕ್ಕ ಹಣವನ್ನು ಏನು ಮಾಡುತ್ತೀರಾ ಎಂದು ಅಮಿತಾಭ್ ಕೇಳಿದ ಪ್ರಶ್ನೆಗೆ "ಮೊದಲು ಒಂದು ಫೋನ್ ತೆಗೆದುಕೊಳ್ಳುತ್ತೇನೆ. ಯಾಕಂದ್ರೆ ನಮ್ಮ ಮನೆಯಲ್ಲಿ ಇರೋದು ಒಂದೆ ಫೋನ್. ಎಲ್ಲರು ಅದನ್ನೆ ಬಳಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಬಬಿತಾ ಮಾತು ಕೇಳಿ ಶಾಕ್ ಆದ ಅಮಿತಾಭ್ ಕಾರ್ಯಕ್ರಮದಲ್ಲಿ ಮೊಬೈಲ್ ಫೋನ್ ಅನ್ನು ಗಿಫ್ಟಾಗಿ ನೀಡಿದ್ದಾರೆ. ಸದ್ಯ ಬಬಿತಾ ಕೈಗೆ 1 ಕೋಟಿಯ ಚೆಕ್ ಸಿಕ್ಕಿದೆ. ಇನ್ನು 7 ಕೋಟಿಗೆ ಒಂದೆ ಒಂದು ಪ್ರಶ್ನೆ ಬಾಕಿ ಇದೆ. ಈ ಪ್ರಶ್ನೆಗೆ ಉತ್ತರ ನೀಡಿ 7 ಕೋಟಿ ಗೆಲ್ಲುತ್ತಾರಾ? ಎನ್ನುವುದು ವೀಕ್ಷಕರ ಕುತೂಹಲ.


Click it and Unblock the Notifications











