ಕರೋಡ್ ಪತಿಯಲ್ಲಿ 7ಕೋಟಿಯ ಪ್ರಶ್ನೆಗೆ ಉತ್ತರ ಗೊತ್ತಿದ್ದರು ಕ್ವಿಟ್ ಮಾಡಿದ ಬಬಿತಾ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗ ಕರೋಡ್ ಪತಿ-11ನೇ ಆವೃತ್ತಿಯಲ್ಲಿ ಬಬಿತಾ ತಾಡೆ ಒಂದು ಕೋಟಿ ಗೆದ್ದಿದ್ದಾರೆ. ಶಾಲೆಯಲ್ಲಿ ಬಿಸಿಯೂಟ ಅಡುಗೆ ಕೆಲಸ ಮಾಡುವ ಬಬಿತಾ ತಾಡೆ ಆಡಿದ ಪರಿಗೆ ಇಡೀ ದೇಶವೆ ಹೆಮ್ಮೆ ಪಟ್ಟಿದೆ. ಬಬಿತಾ ಏಳು ಕೊಟಿ ಪ್ರಶ್ನೆಗೆ ಉತ್ತರಿಸುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿತ್ತು.
1 ಕೋಟಿ ಗೆದ್ದು ಏಳು ಕೋಟಿಯ ಕೊನೆಯ ಪ್ರಶ್ನೆ ಅಟೆಂಡ್ ಮಾಡಿದ ಬಬಿತಾ ಕೊನೆಕ್ಷಣದಲ್ಲಿ ಆಟವನ್ನು ಕ್ವಿಟ್ ಮಾಡಿದ್ರು. ತೀರಾ ನಿರಾಸೆಯ ವಿಚಾರ ಅಂದ್ರೆ ಬಬಿತಾ ಕೊನೆಯ ಪ್ರಶ್ನೆಗ ಸರಿಯಾದ ಉತ್ತರ ನೀಡಿದ್ದರು. ಆದ್ರೆ ರಿಸ್ಕ್ ಬೇಡ ಎನ್ನುವ ಕಾರಣಕ್ಕೆ ಉತ್ತರ ಗೊತ್ತಿದ್ದರು ಆಟವನ್ನು ನಿಲ್ಲಿದರು.

ಏಳು ಕೋಟಿಯ ಪ್ರಶ್ನೆ
ಬಬಿತಾಗೆ ಎದುರಾದ ಏಳು ಕೋಟಿಯ ಪ್ರಶ್ನೆ "ಯಾವ ರಾಜ್ಯದ ರಾಜ್ಯಪಾಲರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರಪತಿಯಾಗಿದ್ದಾರೆ?
A. ರಾಜಾಸ್ಥಾನ್
B. ಬಿಹಾರ್
C. ಪಂಜಾಬ್
D. ಆಂಧ್ರ ಪ್ರದೇಶ್
ಸರಿ ಉತ್ತರ: B. ಬಿಹಾರ್
ಈ ಪ್ರಶ್ನೆಗೆ ಬಬಿತಾ ಮೊದಲು ಸರಿಯಾದ ಉತ್ತರ ನೀಡಿದರು ಸಹ ಕೊನೆ ಕ್ಷಣದಲ್ಲಿ ಆಟವನ್ನು ಕ್ವಿಟ್ ಮಾಡಿದರು.

ಮೊಬೈಲ್ ಗಿಫ್ಟ್ ಮಾಡಿದ ಅಮಿತಾಭ್
ಬಬಿತಾಗೆ ಈ ಶೋನಲ್ಲಿ ಸಿಕ್ಕ ಹಣವನ್ನು ಏನು ಮಾಡುತ್ತೀರಾ ಎಂದು ಅಮಿತಾಭ್ ಕೇಳಿದ ಪ್ರಶ್ನೆಗೆ "ಮೊದಲು ಒಂದು ಫೋನ್ ತೆಗೆದುಕೊಳ್ಳುತ್ತೇನೆ. ಯಾಕಂದ್ರೆ ನಮ್ಮ ಮನೆಯಲ್ಲಿ ಇರೋದು ಒಂದೆ ಫೋನ್. ಎಲ್ಲರು ಅದನ್ನೆ ಬಳಸುತ್ತಿದ್ದಾರೆ" ಎಂದು ಹೇಳಿದ್ರು. ಬಬಿತಾ ಮಾತು ಕೇಳಿ ಅಚ್ಚರಿ ಪಟ್ಟ ಅಮಿತಾಭ್ ಕಾರ್ಯಕ್ರಮದಲ್ಲಿ ಮೊಬೈಲ್ ಫೋನ್ ಅನ್ನು ಗಿಫ್ಟಾಗಿ ನೀಡಿದ್ದಾರೆ.

ಬಬಿತಾ ತಿಂಗಳ ಸಂಬಳ 1500
ಅಮರಾವತಿ ಜಿಲ್ಲೆಯ ಬಬಿತಾ ತಾಡೆ ಸರಕಾರಿ ಶಾಲೆಯ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ 1500 ರೂಗಳಿಸುತ್ತೇನೆ ಎಂದು ಬಬಿತಾ ಹೇಳಿದ ಮಾತಿಗೆ ಅಮಿತಾಭ್ ಒಮ್ಮೆ ಸೈಲೆಂಟ್ ಆದ್ರು. ಬಬಿತಾ ಮಾಡುವ ಅಡುಗೆ ಅಂದ್ರೆ ಮಕ್ಕಳಿಗೆ ತಂಬಾ ಇಷ್ಟವಂತೆ.

ಕೋಟಿ ಗೆದ್ದ ಎರಡನೆ ಸ್ಪರ್ಧಿ
ಸನೋಜ್ ರಾಜ್ ಒಂದು ಕೋಟಿ ಗೆದ್ದರು. ನಂತರ ಏಳು ಕೋಟಿ ಪ್ರಶ್ನೆ ಎದುರಿಸದ ಸನೋಜ್ ಇದಕ್ಕೂ ಸರಿ ಉತ್ತರ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಕ್ರಿಕೆಟ್ ಆಟದ ಕುರಿತು ಕೇಳಲಾದ ಏಳು ಕೋಟಿ ಪ್ರಶ್ನೆ ನೋಡುತ್ತಿದ್ದಂತೆ ಗೊಂದಲಕ್ಕೆ ಒಳಗಾದ ಸನೋಜ್, ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು.


Click it and Unblock the Notifications











