Chukki thare: 'ಚುಕ್ಕಿತಾರೆ' ಮೂಲಕ ನವೀನ್ ಸಜ್ಜುಗೆ ಮಗಳಾದ ಮಹಿತಾ: ಯಾರೀಕೆ..?
ಇದು ಸೀರಿಯಲ್ ಯುಗ. ಬರೀ ಸೀರಿಯಲ್ ಯುಗ ಅಲ್ಲ, ಸಖತ್ ಕಾಂಪಿಟೇಷನ್ ಯುಗ. ಇರುವ ಅಷ್ಟು ಮನರಂಜನೆಯ ಚಾನೆಲ್‌ಗಳು ಒಂದಕ್ಕಿಂತ ಒಂದು ಸ್ಪರ್ಧೆಯನ್ನೇ ಒಡ್ಡುತ್ತಿವೆ. ಒಂದಕ್ಕಿಂದ ಒಂದು ಕಥೆ ವಿಚಾರದಲ್ಲಾದರೂ ಸರಿ, ಅದ್ದೂರಿತನದಲ್ಲಾದರೂ ಸರಿ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತ ಧಾರಾವಾಹಿಗಳನ್ನು ನೀಡುತ್ತಿವೆ.
ಕಲರ್ಸ್ ಕನ್ನಡದಲ್ಲಿ ಕಥೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗಾಗಲೇ 'ಶ್ರೀಗೌರಿ', 'ಕರಿಮಣಿ' ಹೊಸ ಧಾರಾವಾಹಿಗಳ ನಡುವೆ ಮನರಂಜಿಸುವುದಕ್ಕೆ ಬರುತ್ತಿರುವುದು 'ಚುಕ್ಕಿತಾರೆ'. ಈ ಧಾರಾವಾಹಿ ಯಾವಾಗ ಬರುತ್ತೋ ಅಂತ ಜನ ಕಾಯ್ತಿದ್ದಾರೆ. ಯಾಕಂದ್ರೆ ಈ ಧಾರಾವಾಹಿ ಮೂಲಕ ಗಾಯಕ ನವೀನ್ ಸಜ್ಜು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡನೇ ಪ್ರೋಮೋ ಬಿಟ್ಟ ವಾಹಿನಿ
ಬಿಗ್ ಬಾಸ್ ಮುಗಿದ ಮೇಲೆ ಕಲರ್ಸ್ ಕನ್ನಡ ಒಂದಷ್ಟು ಧಾರಾವಾಹಿ, ರಿಯಾಲಿಟಿ ಶೋಗಳನ್ನು ಅನೌನ್ಸ್ ಮಾಡಿತ್ತು. ಅದರಲ್ಲಿ 'ಚುಕ್ಕಿತಾರೆ' ಕೂಡ ಒಂದು. ಈ ಧಾರಾವಾಹಿಯೇ ವಿಭಿನ್ನವಾಗಿದೆ. ಭಾವನೆಗಳನ್ನು ಹಿಡಿದಿಡುವ ಧಾರಾವಾಹಿಯಾಗಿದೆ. ಆರಂಭದಲ್ಲಿ ಒಂದು ಪ್ರೋಮೋ ಬಿಟ್ಟಿದ್ದರು. ಅದು ಅಕ್ಕತಂಗಿಯರ ಕಥೆ ಎಂಬಂತೆ ಭಾಸವಾಗಿತ್ತು. ಆದರೆ ಈಗೊಂದು ಪ್ರೋಮೋ ಬಿಟ್ಟಿದ್ದು, ಕಥೆ ಬೇರೆಯದ್ದೇ ರೀತಿ ಕಾಣುತ್ತಿದೆ. ಮನಸ್ಸಿಗೆ ನಾಟುತ್ತಿದೆ.
ತಂದೆ ಪಾಲಿಗೆ ಮಗಳೇ ಚುಕ್ಕಿ-ತಾರೆ
ಮಗಳು ಹುಟ್ಟಿದಾಗ ಅಪ್ಪನಿಗೆ ಅದೆಷ್ಟು ಸಂಭ್ರಮ. ಮಗಳ ಹಾರೈಕೆಯಲ್ಲೇ ತೊಡಗಿಕೊಳ್ಳುತ್ತಾನೆ. ಜಗದ ಸುಖವನ್ನೆಲ್ಲಾ ಮಗಳಿಗೆ ನೀಡಲು ಬಯಸುತ್ತಾನೆ. ಎಲ್ಲೆ ಹೋದರೂ ಹೆಗಲ ಮೇಲೆ ಹೊತ್ತು ಮೆರೆಸುತ್ತಾನೆ. ಮಗಳಿಗೆ ಕಾಲಿನ ಸಮಸ್ಯೆ ಇದೆ ಎಂದರು ಅದನ್ನು ಮಗಳಿಗೆ ತಿಳಿಯದಂತೆ ಸಂಭಾಳಿಸುತ್ತಾನೆ. ಇದು ಹೊಸ ಪ್ರೋಮೋದಲ್ಲಿ ಅನಾವರಣವಾದ ವಿಚಾರ. ತಂದೆ ಮಗಳ ಬಾಂಧವ್ಯವನ್ನು ಸಾರುವ ಧಾರಾವಾಹಿ ಎಂಬುದು ಅರ್ಥವಾದಂತೆ ಆಗಿದೆ.
ಮುಖ್ಯ ಪಾತ್ರದಲ್ಲಿ ಮಹಿತಾ
ಪುಟಾಣಿ ಮಹಿತಾ ಕಲರ್ಸ್ ಕನ್ನಡ ಚಾನೆಲ್‌ಗೆ ಕಮ್ ಬ್ಯಾಕ್ ಆಗಿದ್ದಾಳೆ. ಈ ಮೊದಲು 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋಗೆ ಆಕೆಯ ತಾಯಿ ತನುಜಾ ಜೊತೆಗೆ ಬಂದು ಭಾಗವಹಿಸಿದ್ದಳು. ಅವಳ ನಟನೆಗೆ ವೇದಿಕೆ ಮೇಲೆಯೇ ಎಲ್ಲರೂ ಫಿದಾ ಆಗಿದ್ದರು. ಇದೀಗ ಮತ್ತೆ ಕಲರ್ಸ್ ಕನ್ನಡಕ್ಕೆ ಬಂದಿದ್ದು, 'ಚುಕ್ಕಿ ತಾರೆ' ಮೂಲಕ ನವೀನ್ ಸಜ್ಜು ಮಗಳಾಗಿ ಬಂದಿದ್ದಾಳೆ. ಅಪ್ಪನ ಪ್ರಪಂಚವಾಗಿ ಬಂದಿದ್ದಾಳೆ. ಪಠ ಪಠ ಅಂತ ಮಾತನಾಡುತ್ತಾ ಎಲ್ಲರನ್ನು ಸೆಳೆಯುವ ಮಗುವಾಗಿದ್ದಾಳೆ.

ಮಹಿತಾ ಸಿಕ್ಕಾಪಟ್ಟೆ ಚಾಲಾಕಿ, ಜಾಣ್ಮೆ, ಬುದ್ದಿವಂತ ಮಗು. ಅವಳ ಸೋಷಿಯಲ್ ಮೀಡಿಯಾ ಖಾತೆಯನ್ನೊಮ್ಮೆ ನೋಡಿದರೆ ಖಂಡಿತ ಬುದ್ದಿವಂತಿಕೆ ತಿಳಿಯದೆ ಇರುವುದಿಲ್ಲ. ನಟನೆಯಲ್ಲಂತೂ ಹೇಳುವುದೇ ಬೇಡ. ಒಳ್ಳೆ ಕಲಾವಿದೆ ಎಂಬುದನ್ನು ಪ್ರೂವ್ ಮಾಡಿದ್ದಾಳೆ. ಅಷ್ಟೇ ಅಲ್ಲ ಕಾಮಿಡಿ ಸೆನ್ಸ್ ಕೂಡ ಕೊಂಚ ಹೆಚ್ಚಾಗಿಯೇ ಇದೆ. ಈಗಲೇ ಮಹಿತಾ ತನ್ನ ಇನ್ಸ್ಸ್ಟಾಗ್ರಾಮ್‌ನಲ್ಲಿ 165 ಸಾವಿರ ಫಾಲೋವರ್ಸ್ ಹೊಂದಿದ್ದಾಳೆ. ಹೊಸ ಪ್ರೋಮೋ ನೋಡಿದವರು ಮಹಿತಾ ಹಾಗೂ ನವೀನ್ ಸಜ್ಜುಗೆ ಹಾರೈಸುತ್ತಿದ್ದಾರೆ. ಎಕ್ಸಾಂ ವಿಚಾರ, ಶಾಲೆ ವಿಚಾರ ಹೀಗೆ ಪ್ರಸ್ತುತ ವಿಚಾರಗಳನ್ನು ತೆಗೆದುಕೊಂಡು ಅಮ್ಮ ಮಗಳು ಸಖತ್ ಆಕ್ಟಿಂಗ್ ಮಾಡ್ತಾರೆ. ಅಮ್ಮ ಮಗಳ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಕಿಟ್‌ಗಳೆ ತುಂಬಿವೆ.


Click it and Unblock the Notifications











