ಶಾಲೆಗೆ ಮರಳಿದ 'ಸರಿಗಮಪ' ತಂಡ : ಹಂಸಲೇಖ ಈಗ ಸ್ಕೂಲ್ ಮೇಷ್ಟ್ರು
ಜೀ ಕನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮದ ಮತ್ತೊಂದು ವಿಶೇಷ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಈ ಬಾರಿ 'ಬ್ಯಾಕ್ ಟು ಸ್ಕೂಲ್' ಎನ್ನುವ ಕಾನ್ಸೆಪ್ಟ್ ನಲ್ಲಿ ಕಾರ್ಯಕ್ರಮ ಸಿದ್ಧವಾಗಿದೆ.
ಪ್ರತಿ ವಾರ ಕೂಡ ವೀಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ಒಂದಲ್ಲ ಒಂದು ವಿಶೇಷ ಸಂಚಿಕೆಗಳ ಮೂಲಕ 'ಸರಿಗಮಪ' ಬರುತ್ತಿದೆ. ಈ ವಾರ ಶಾಲೆಯ ವಿಶೇಷ ಸಂಚಿಕೆಗಾಗಿ ಎಲ್ಲರೂ ಮಕ್ಕಳಾಗಿದ್ದಾರೆ. ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಶಾಲೆಯ ಸಮವಸ್ತ್ರ ತೊಟ್ಟಿದ್ದಾರೆ.

ತೀರ್ಪುಗಾರರು ಮಕ್ಕಳ ರೀತಿ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ. ಅನುಶ್ರೀ ಎರಡು ಜಡೆ ಹಾಕಿ ಶಾಲಾ ಬಾಲಕಿಯಾಗಿದ್ದಾರೆ. ಮಹಾ ಗುರುಗಳಾದ ಹಂಸಲೇಖ ಅವರು ಕನ್ನಡ ಮೇಷ್ಟ್ರು ಆಗಿದ್ದಾರೆ.

ಈ ವಿಶೇಷ 'ಸರಿಗಮಪ ಸೀಸನ್ 16'ರ ಈ ವಿಶೇಷ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಮಕ್ಕಳೆ ಇದ್ದು, ಅವರಿಗೆ ಈ ಸಂಚಿಕೆ ಬಹಳ ಹತ್ತಿರ ಆಗಲಿದೆ.
English summary
Zee Kannada channel's popular show 'Sarigamapa Season 16' Back To School special episode will telecast on Saturday and Sunday.


Click it and Unblock the Notifications