ಮನೆಯಲ್ಲಿ ಬತ್ತಿ ಇಡುತ್ತಿದ್ದಾರಾ ಶಕೀಲಾ ಆಂಟಿ?
ಬೇರೆಯವರಲ್ಲಿ ಕೆಟ್ಟ ಗುಣ ಹುಡುಕುತ್ತೀರಾ ಎಂಬ ಆರೋಪವೂ ಅವರ ವಿರುದ್ಧ ಕೇಳಿಬಂತು. ಇದನ್ನೂ ಅವರು ತಳ್ಳಿಹಾಕಿದರು. ಬಳಿಕ ಶಕೀಲಾ ಅವರನ್ನು ಕಟಕಟೆಗೆ ಕರೆಯಲಾಗಿತು, ಅವರ ಮೇಲಿನ ಆರೋಪ, ಅವರ ವಿಷಯವನ್ನು ಇವರಿಗೆ ಇವರ ವಿಷಯವನ್ನು ಅವರಿಗೆ ಹೇಳುತ್ತೀರಾ.
ಇದಕ್ಕೆ ಉತ್ತರಿಸಿದ ಶಕೀಲಾ, ಹೌದು ಇತ್ತೀಚೆಗೆ ಅದನ್ನು ಮಾಡಿದ್ದೇನೆ. ಅಲ್ಲಿನದ್ದು ಇಲ್ಲಿ, ಇಲ್ಲಿನದ್ದು ಅಲ್ಲಿ ಹೇಳಿದ್ದೇನೆ. ಆದರೆ ಒಳ್ಳೆಯ ವಿಷಯಗಳನ್ನು ಮಾತ್ರ ಹೇಳಿದ್ದೇನೆ. ಕೆಟ್ಟದಾಗಿ ತಾನು ಏನೂ ಹೇಳಿಲ್ಲ ಎಂದರು. ಅವರ ಉತ್ತಕ್ಕೆ ಮನೆಯ ಸದಸ್ಯರು ಮೂಕವಿಸ್ಮಿತರಾದರು.

ಕ್ಯಾಪ್ಟನ್ ಆದ ಬಳಿಕ ನಿಮ್ಮ ನಡವಳಿಕೆ ಬದಲಾಗಿದೆ ಎಂಬ ಮತ್ತೊಂದು ಆರೋಪಕ್ಕೆ ಉತ್ತರಿಸಿದ ಆದಿ, ಎಲ್ಲರ ಒತ್ತಾಯ ಮೇರೆಗೆ ನಾನು ಕ್ಯಾಪ್ಟನ್ ಆಗಿದ್ದು. ಕ್ಯಾಪ್ಟನ್ ಆದ ಬಳಿಕ ಬದಲಾಗಿದ್ದು ನಿಜ ಎಂದು ಒಪ್ಪಿಕೊಂಡರು.
ಇದೆಲ್ಲಾ ಮುಗಿದ ಮೇಲೆ ಮನೆಯ ಒಳಗೆ ಇನ್ನೂ ಆರೋಪ ಪ್ರತ್ಯಾರೋಪಗಳ ಚರ್ಚೆಯೆ ನಡೆಯಿತು. ಶಕೀಲಾ ಅವರು ಮಾತನಾಡುತ್ತಾ, ಒಂದು ವೇಳೆ ನಾನು ಮನೆಯನ್ನು ಒಡೆಯುವ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ಅದು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಬಹುದು. ಅದರೆ ತಮಗೆ ಆ ರೀತಿಯ ಉದ್ದೇಶವಿಲ್ಲ. ಮನೆಯವರನ್ನೆಲ್ಲಾ ನಾನು ಒಂದು ಮಾಡಲು ಪ್ರಯತ್ನಿಸುತ್ತಿದ್ದೆನೆ ಎಂದರು.
ಮಯೂರ್ ಮತ್ತು ಆದಿ ಲೋಕೇಶ್ ಅವರನ್ನು ಕಡೆಗೂ ಒಂದು ಮಾಡುವಲ್ಲಿ ನೀತೂ ಯಶಸ್ವಿಯಾದರು. ಇಬ್ಬರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ಮುಸುಕಿನ ಯುದ್ಧಕ್ಕೆ ವಿರಾಮ ಘೋಷಿಸಿದರು.
ಬಿಗ್ ಬಾಸ್ ಮನೆಯಲ್ಲಿ ಒಂದು ನ್ಯಾಯಾಲಯ ರಚನೆಯಾಗಿ ಭಿನ್ನಾಭಿಪ್ರಯಗಳು, ದೂರು, ದುಃಖ ದುಮ್ಮಾನಗಳನು ಪರಿಹರಿಸಿಕೊಳ್ಳಲು ಸಹಕಾರಿಯಾಯಿತು. ಆದರೆ ಅವು ಎಷ್ಟರ ಮಟ್ಟಿಗೆ ಪರಿಹಾರವಾದವೋ ಅಥವಾ ಇನ್ನಷ್ಟು ಗೊಂದಲ ಸೃಷ್ಟಿಸಿದವೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











