twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿಯೇ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ 'ಬಾಹುಬಲಿ'

    |

    ಕಿರುತೆರೆಯಲ್ಲಿ ಡಬ್ಬಿಂಗ್ ಯುಗ ಪ್ರಾರಂಭವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಹತ್ತಾರು ಡಬ್ಬಿಂಗ್ ಸಿನಿಮಾಗಳು, ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳಲ್ಲಿ ಕನ್ನಡಿಗರು ಬಹಳ ಕಾಲದಿಂದ ತಮ್ಮದೇ ಭಾಷೆಯಲ್ಲಿ ನೋಡಲು ಅಪೇಕ್ಷಿಸಿದ್ದ ಮಹಾಭಾರತ, ಮಾಲ್ಗುಡಿ ಡೇಸ್‌ನಂತಹ ಧಾರಾವಾಹಿಗಳು ಕೂಡ ಸೇರಿವೆ.

    ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರಗಳನ್ನು ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಅವುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಟೆಲಿವಿಷನ್ ರೇಟಿಂಗ್ ಗಮನಿಸಿದಾಗ ಡಬ್ಬಿಂಗ್ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎನ್ನುವುದು ತಿಳಿಯುತ್ತದೆ. ಈ ನಡುವೆ ಮತ್ತಷ್ಟು ಸಿನಿಮಾ ಮತ್ತು ಧಾರಾವಾಹಿಗಳ ಡಬ್ಬಿಂಗ್ ಅವತರಣಿಕೆಗೆ ಬೇಡಿಕೆ ಬಂದಿದೆ. ಮುಂದೆ ಓದಿ...

    ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

    ಕನ್ನಡದಲ್ಲಿ ಬಿಡುಗಡೆಯಾಗಿರಲಿಲ್ಲ

    ಕನ್ನಡದಲ್ಲಿ ಬಿಡುಗಡೆಯಾಗಿರಲಿಲ್ಲ

    ಬಾಲಿವುಡ್ ಸಾಮ್ರಾಜ್ಯ ಮಾತ್ರವಲ್ಲ, ಹಾಲಿವುಡ್‌ನ ಗಮನವನ್ನೂ ಸೆಳೆದ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಬೆರಗು ಮೂಡಿಸಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ ನಟನೆಯ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಆದರೆ, ಡಬ್ಬಿಂಗ್ ಇಲ್ಲದ ಕಾರಣ ಕನ್ನಡಿಗರು ಅದರ ಮೂಲಭಾಷೆ ತೆಲುಗಿನಲ್ಲಿಯೇ ನೋಡುವಂತಾಗಿತ್ತು. ಕರ್ನಾಟಕದಲ್ಲಿ ಹತ್ತಾರು ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಹಿಂದಿ ಆವೃತ್ತಿ ಕೂಡ ಬಿಡುಗಡೆಯಾಗಿದ್ದವು.

    ಬಾಹುಬಲಿ 2ರ ವೇಳೆ ಅಭಿಯಾನ

    ಬಾಹುಬಲಿ 2ರ ವೇಳೆ ಅಭಿಯಾನ

    'ಬಾಹುಬಲಿ'ಯನ್ನು ಕನ್ನಡದಲ್ಲಿ ನೋಡಲು ಆಗಿರಲಿಲ್ಲ. ಹೀಗಾಗಿ 'ಬಾಹುಬಲಿ 2' ಕೊನೆಯ ಭಾಗವನ್ನಾದರೂ ಕನ್ನಡದಲ್ಲಿ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಅದಕ್ಕಾಗಿ ಡಬ್ಬಿಂಗ್ ಪರ ವಾದಿಗಳು ಅಭಿಯಾನ ಕೂಡ ನಡೆಸಿದ್ದರು. ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಹೋರಾಟ ನಡೆದರೂ ಅದು ಪ್ರಯೋಜನವಾಗಿರಲಿಲ್ಲ.

    ಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿಡಬ್ಬಿಂಗ್ ಧಾರಾವಾಹಿ ನಿಷೇಧಿಸುವಂತೆ ಕಿರುತೆರೆ ಕಲಾವಿದರ ಮನವಿ

    ಐದು ವರ್ಷದ ಬಳಿಕ ಡಬ್ಬಿಂಗ್

    ಐದು ವರ್ಷದ ಬಳಿಕ ಡಬ್ಬಿಂಗ್

    ಬಾಹುಬಲಿಯ ಮೊದಲ ಆವೃತ್ತಿ 2015ರಲ್ಲಿ ಬಿಡುಗಡೆಯಾಗಿದ್ದರೆ, ಎರಡನೆಯ ಭಾಗ 2017ರಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಐದು ವರ್ಷಗಳ ಬಳಿಕ ಬಾಹುಬಲಿಯ ಮೊದಲ ಭಾಗ ಕನ್ನಡಕ್ಕೆ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದೆ. ಖಾಸಗಿ ಮನರಂಜನಾ ವಾಹಿನಿಯೊಂದರಲ್ಲಿ ಶೀಘ್ರದಲ್ಲಿಯೇ ಬಾಹುಬಲಿಯ ಕನ್ನಡ ಡಬ್ಬಿಂಗ್ ಅವತರಣಿಕೆ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

    ಪ್ರಸಾರದ ದಿನಾಂಕ ಮತ್ತು ಸಮಯ

    ಪ್ರಸಾರದ ದಿನಾಂಕ ಮತ್ತು ಸಮಯ

    'ಬಾಹುಬಲಿ' ಡಬ್ಬಿಂಗ್ ಅವತರಣಿಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದಕ್ಕೆ ಡಬ್ಬಿಂಗ್ ಪರ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೂ ಈ ಸಿನಿಮಾ ಕನ್ನಡಿಗರಿಗೆ ಸಿಗಲಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ ಪ್ರಸಾರದ ದಿನಾಂಕ ಮತ್ತು ಸಮಯ ಇನ್ನೂ ಬಹಿರಂಗವಾಗಿಲ್ಲ.

    'ಬುಸುಗುಡುತ್ತಿದೆ' ಡಬ್ಬಿಂಗ್ ಧಾರಾವಾಹಿ: ಬದಲಾಗಲಿದೆಯೇ ಕಿರುತೆರೆ?'ಬುಸುಗುಡುತ್ತಿದೆ' ಡಬ್ಬಿಂಗ್ ಧಾರಾವಾಹಿ: ಬದಲಾಗಲಿದೆಯೇ ಕಿರುತೆರೆ?

    English summary
    Five years after releasing in theatres, dubbing version of Bahubali movie finally to be telecasted in Kannada television.
    Monday, July 6, 2020, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X