twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಕಿರುತೆರೆಯಲ್ಲಿ ಬರ್ತಿದೆ ಸೂಪರ್ ಹಿಟ್ ಸಿನಿಮಾ 'ಬಾಹುಬಲಿ'

    |

    ಕಿರುತೆರೆಯಲ್ಲಿ ಡಬ್ಬಿಂಗ್ ಯುಗ ಪ್ರಾರಂಭವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಹಲವಾರು ಡಬ್ಬಿಂಗ್ ಸಿನಿಮಾಗಳು, ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇದೀಗ ತೆಲುಗು ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ ಸಿನಿಮಾ ಕೂಡ ಕನ್ನಡ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

    ಬಾಲಿವುಡ್ ಮಾತ್ರವಲ್ಲ, ಹಾಲಿವುಡ್‌ನ ಗಮನವನ್ನೂ ಸೆಳೆದ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಬೆರಗು ಮೂಡಿಸಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ ನಟನೆಯ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಆದರೆ, ಡಬ್ಬಿಂಗ್ ಇಲ್ಲದ ಕಾರಣ ಕನ್ನಡಿಗರು ಅದರ ಮೂಲಭಾಷೆ ತೆಲುಗಿನಲ್ಲಿಯೇ ನೋಡುವಂತಾಗಿತ್ತು. ಕರ್ನಾಟಕದಲ್ಲಿ ಹತ್ತಾರು ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಹಿಂದಿ ಆವೃತ್ತಿ ಕೂಡ ಬಿಡುಗಡೆಯಾಗಿದ್ದವು.

    KBC ಸೀಸನ್ 12: ಒಂದು ಕೋಟಿ ರೂ. ಗೆದ್ದ ಮೊದಲ ಸ್ಪರ್ಧಿ, 7 ಕೋಟಿಯ ಪ್ರಶ್ನೆಗೆ ಉತ್ತರಿಸುತ್ತಾರಾ?KBC ಸೀಸನ್ 12: ಒಂದು ಕೋಟಿ ರೂ. ಗೆದ್ದ ಮೊದಲ ಸ್ಪರ್ಧಿ, 7 ಕೋಟಿಯ ಪ್ರಶ್ನೆಗೆ ಉತ್ತರಿಸುತ್ತಾರಾ?

    ಬಾಹುಬಲಿಯ ಮೊದಲ ಆವೃತ್ತಿ 2015ರಲ್ಲಿ ಬಿಡುಗಡೆಯಾಗಿದ್ದರೆ, ಎರಡನೆಯ ಭಾಗ 2017ರಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಐದು ವರ್ಷಗಳ ಬಳಿಕ ಬಾಹುಬಲಿಯ ಮೊದಲ ಭಾಗ ಕನ್ನಡಕ್ಕೆ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದೆ. ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ಬಾಹುಬಲಿ ಸಿನಿಮಾ ಇದೆ ತಿಂಗಳು ನವೆಂಬರ್ 15 ದೀಪಾವಳಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

    Bahubali Kannada Dubbing Version Will Telecast In Television On November 15th

    ಬಾಹುಬಲಿ ದೃಶ್ಯಕಾವ್ಯವನ್ನು ನಾಜೂಕಾಗಿ ಕನ್ನಡಕ್ಕೆ ಡಬ್ ಮಾಡಿದ್ದಾರಂತೆ. ಮಾತುಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಸಿನಿಮಾ ನೋಡದ ಕನ್ನಡಿಗರು ಮನೆಯಲ್ಲೇ ಕುಳಿತು ಕನ್ನಡದಲ್ಲೇ ಸಿನಿಮಾ ವೀಕ್ಷಿಸಬಹುದು. ಅಮರೇಂದ್ರ ಬಾಹುಬಲಿ, ಬಲ್ಲಾಳದೇವ, ದೇವಸೇನಾ, ಆವಂತಿಕಾ, ಶಿವಗಾಮಿಯ ಮಾತುಗಳನ್ನು ಕನ್ನಡದಲ್ಲೇ ಕೇಳಿಸಿಕೊಂಡು ಎಂಜಾಯ್ ಮಾಡಬಹುದು.

    English summary
    Bahubali Kannada Dubbing version will Telecast in Television On November 15th.
    Wednesday, November 11, 2020, 7:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X