»   » ಬಾಯ್ ಫ್ರೆಂಡ್ ಮೇಲೆ 'ಬಾಲಿಕಾ ವಧು' ಕಂಪ್ಲೇಂಟ್

ಬಾಯ್ ಫ್ರೆಂಡ್ ಮೇಲೆ 'ಬಾಲಿಕಾ ವಧು' ಕಂಪ್ಲೇಂಟ್

Posted By:
Subscribe to Filmibeat Kannada
Pratyusha Banerjee
ಕಿರುತೆರೆಯಲ್ಲಿ ಪ್ರತ್ಯೂಷಾ ಎಂದೇ ಜನಪ್ರಿಯರಾಗಿರುವ ತಾರೆ ಆನಂದಿ ಅವರು ತನ್ನ ಬಾಯ್ ಫ್ರೆಂಡ್ ವಿರುದ್ಧ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ತನ್ನ ಮಾಜಿ ಬಾಯ್ ಫ್ರೆಂಡ್ ಮಕ್ರಂದ್ ಮಲ್ಹೋತ್ರ ಅವರು ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಿಷ್ಟೇ ಅಲ್ಲದೆ ತಮಗೆ ಬೆದರಿಕೆಯನ್ನೂ ಒಡ್ಡುತ್ತಿದ್ದರು ಎಂದು ಪ್ರತ್ಯೂಷಾ ದೂರಿನಲ್ಲಿ ತಿಳಿಸಿದ್ದಾರೆ. ಮುಂಬೈನ ಓಷಿವರಾ ಪೊಲೀಸ್ ಠಾಣೆಯಲ್ಲಿ ಬುಧವಾರ (ಸೆ.4) ಬೆಳಗಿನ ಜಾವ 3 ಗಂಟೆಗೆ ಪೊಲೀಸರಿಗೆ ದೂರು ನೀಡಲಾಗಿದೆ.

"ಕಳೆದ ಮೂರು ದಿನಗಳಿಂದ ನಿರಂತರವಾಗಿ ತನಗೆ ತೊಂದರೆ ಕೊಡುತ್ತಿದ್ದ. ಬೆದರಿಕೆಯನ್ನೂ ಒಡ್ಡುತ್ತಿದ್ದ. ಹಾಗಾಗಿ ತಾನು ಪೊಲೀಸರ ಮೊರೆ ಹೋಗಿದ್ದಾಗಿ" ಪ್ರತ್ಯೂಷಾ ತಿಳಿಸಿದ್ದಾರೆ. ತನಗೆ ಪದೇ ಪದೇ ದೂರವಾಣಿ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದಿದ್ದಾರೆ.

ಮಂಗಳವಾರ ರಾತ್ರಿ ಆತ ನೇರವಾಗಿ ನಮ್ಮ ಮನೆಗೆ ಬಂದು ಬಾಯಿ ಬಂದಂತೆ ಬೈದಿದ್ದಾನೆ. ನಮ್ಮ ಕುಟುಂಬಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಮನೆಯವರ ಮೇಲೂ ಕೈ ಮಾಡಿದ್ದಾನೆ. ಕಳೆದ ಮೂರು ದಿನಗಳಿಂದ ನನಗೆ ಮಾನಸಿಕ ಕಿರುಕುಳ ನೀದಿದ್ದಾನೆ ಎಂದು ಆರೋಪಿಸಲಾಗಿದೆ.

ಈಗಾಗಲೆ ಇವರಿಬ್ಬರಿಗೂ ಗುಟ್ಟಾಗಿ ಮದುವೆಯಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಮಾತುಗಳನ್ನು ಪ್ರತ್ಯೂಷಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಬಾಲಿಕಾ ವಧು, ಝಲಕ್ ದಿಖಲಾ ಜಾ ತರಹದ ಕಾರ್ಯಕ್ರಮಗಳ ಮೂಲಕ ಪ್ರತ್ಯೂಷಾ ಮನೆಮಾತಾದವರು.

ಈಗ ಅವರು ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋಗೂ ಅಡಿಯಿಡುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಈ ಎಲ್ಲಾ ತಂತ್ರಗಳನ್ನು ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿವೆ. (ಏಜೆನ್ಸೀಸ್)

English summary
Hindi TV star Pratyusha Banerjee filed a police complaint against ex-boyfriend, businessman Makrand Malhotra, on Wednesday. He also filed a cross complaint against her. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada