Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಬಿಗ್ ಬಾಸ್ ಬ್ಯಾನ್ ಮಾಡಿ' ಎಂದು ರೊಚ್ಚಿಗೆದ್ದ ಜನರು
Recommended Video
ಬಿಗ್ ಬಾಸ್ ಅಂದ್ರೆ ಅದೊಂದು ವಿವಾದಾತ್ಮಕ ಶೋ ಎಂದು ಗುರುತಿಸಿಕೊಂಡಿದೆ. ಮನರಂಜನೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದರೂ, ಆ ಹಾದಿಯಲ್ಲಿ ಅಶ್ಲೀಲತೆ, ಅಸಭ್ಯತೆ ಹೆಚ್ಚಾಗಿದೆ. ಇದು ಭಾರತೀಯ ಸಂಸ್ಕೃತಿಯನ್ನ ಹಾಳು ಮಾಡುತ್ತಿದೆ ಎಂದು ಜನಸಾಮಾನ್ಯರು ವಿರೋಧಿಸುತ್ತಿದ್ದಾರೆ.
'ಬಿಗ್
ಬಾಸ್'
ಮನೆಗೆ
ಹೋಗುವ
ಸ್ಪರ್ಧಿಗಳ
ಪಟ್ಟಿ
ಇದೇನಾ?
ಬಿಗ್ ಬಾಸ್ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಪ್ರದಾಯಸ್ಥ ಜನರು, ಅಭಿಯಾನ ಮಾಡುತ್ತಿದ್ದಾರೆ. #bycottbigboss, #bigbossbycott, unsubscribecolourstv, #ban_biggboss, #boycottbigboss ಹ್ಯಾಷ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿದೆ.
ಅಷ್ಟಕ್ಕೂ, ಬಿಗ್ ಬಾಸ್ ಶೋಗೆ ಈ ವಿರೋಧ ಯಾಕೆ? ಹದಿಮೂರನೇ ಆವೃತ್ತಿಯಲ್ಲಿ ಅಂತಹದ್ದೇನು ನಡೆಯಿತು? ಮುಂದೆ ಓದಿ....

ಕೇಂದ್ರಕ್ಕೆ ಪತ್ರ ಬರೆದ ಬಿಜೆಪಿಯ ಶಾಸಕ
ಉತ್ತರ ಪ್ರದೇಶದ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜಾರ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸರಣಾ ಇಲಾಖೆ ಸಚಿವ ಪ್ರಕಾಶ್ ಜವಡೇಕರ್ ಅವರಿಗೆ ಬಿಗ್ ಬಾಸ್ ಬ್ಯಾನ್ ಮಾಡಿ ಎಂದು ಒತ್ತಾಯಿಸಿ ಪತ್ರ ಬರೆದಿದ್ದಾರೆ. ಬಿಗ್ ಬಾಸ್ ಶೋನಿಂದ ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ, ಅಸಭ್ಯತೆ, ಅಶ್ಲೀಲತೆ ಹೆಚ್ಚಿದೆ. ಇದರಿಂದ ಕೌಟುಂಬಿಕ ವೀಕ್ಷಕರಿಗೆ ಕಿರಿಕಿರಿಯಾಗುತ್ತಿದೆ ಎಂದು ದೂರಿದ್ದಾರೆ.
ಬ್ಯಾನ್
ಮಾಡ್ಕೋ
ಹೋಗು
:
ಫೋಟೋಗ್ರಾಫರ್
ವಿರುದ್ಧ
ಸಲ್ಮಾನ್
ಗರಂ

ಅನ್ಯಧರ್ಮದ ಜೋಡಿಯಿಂದ ಅಪಚಾರ
ಬಿಗ್ ಬಾಸ್ ಶೋನಲ್ಲಿ ಅಸಭ್ಯತೆ ಮತ್ತು ಅಶ್ಲೀಲತೆಯ ದೃಶ್ಯಗಳು ಹೆಚ್ಚಿವೆ. ಉದ್ದೇಶಪೂರ್ವಕವಾಗಿ ಇಂತಹ ದೃಶ್ಯಗಳನ್ನ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ದೇಶದ ಸಂಸ್ಕೃತಿಗೆ ಧಕ್ಕೆ ಬರುತ್ತೆ. ಅಷ್ಟೇ ಅಲ್ಲದೇ ಅನ್ಯಧರ್ಮದ ಹುಡುಗ-ಹುಡುಗಿ ಒಂದೇ ಬೆಡ್ ನಲ್ಲಿ ಮಲಗುವ ದೃಶ್ಯಗಳು ಧಾರ್ಮಿಕ ಕಲಹಕ್ಕೆ ದಾರಿ ಮಾಡುತ್ತೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಬಿಗ್
ಬಾಸ್'
ಮನೆ
ಕಂಡ
ಬಿಸಿ
ಬಿಸಿ
ಪ್ರೇಮ
ಪ್ರಸಂಗಗಳು

ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ
ಬಿಗ್ ಬಾಸ್ 13ನೇ ಆವೃತ್ತಿ ನಿರೂಪಣೆ ಮಾಡುತ್ತಿರುವ ನಟ ಸಲ್ಮಾನ್ ಖಾನ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ಅನೇಖರು ಅವರ ಟ್ವಿಟ್ಟರ್ ಖಾತೆಯನ್ನ ಬ್ಲಾಕ್ ಮಾಡುತ್ತಿದ್ದಾರೆ. ಅವರನ್ನ ಅನ್ ಫಾಲೋ ಮಾಡುತ್ತಿದ್ದಾರೆ. ಜೊತೆಗೆ ಕಲರ್ಸ್ ಟವಿಯನ್ನ ಬ್ಲಾಕ್ ಮಾಡುತ್ತಿದ್ದಾರೆ.

ಕನ್ನಡದ ಮೇಲೆ ಪರಿಣಾಮ ಬೀರುತ್ತಾ?
ಹಿಂದಿ ಹಾಗೂ ಇತರೆ ಭಾಷೆಯ ಬಿಗ್ ಬಾಸ್ ನಲ್ಲಿ ಇಂತಹ ಆರೋಪಗಳು, ವಿವಾದಗಳು ಹೆಚ್ಚು ಸದ್ದು ಮಾಡುತ್ತಿರುವುದು ಕನ್ನಡದ ರಿಯಾಲಿಟಿ ಶೋ ಮೇಲೆ ಪರಿಣಾಮ ಬೀರುತ್ತಾ? ಇದೇ ವಾರದಿಂದ ಕನ್ನಡದಲ್ಲಿ ಬಿಗ್ ಬಾಸ್ ಶೋ ಆರಂಭವಾಗುತ್ತಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಈ ರೀತಿಯ ಆರೋಪ ಕೇಳಿ ಬಂದಿಲ್ಲ.