ಕೋಟ್ಯಧಿಪತಿಯಲ್ಲಿ ಭರ್ಜರಿ ಮೊತ್ತ ಗೆದ್ದ ಬ್ಯಾಂಕ್ ಅಟೆಂಡರ್ ಮನು

ಕನ್ನಡದ ಕೋಟ್ಯಧಿಪತಿ ನಾಲ್ಕನೇ ಸಂಚಿಕೆಯಲ್ಲಿ ಈ ವಾರ ಅಪರೂಪದ ಪ್ರತಿಭೆಯೊಬ್ಬರು ಭಾಗಿಯಾಗಿದ್ದರು. ತುಮಕೂರಿನ ಅರಸಿಕೆರೆ ಮೂಲದ ಮನೋಹರ್ ಎಂಬ ಯುವಕ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವ ಅದೃಷ್ಟ ಪಡೆದುಕೊಂಡರು.

ಸಾಫ್ಟ್ ವೇರ್ ಇಂಜಿಯರ್ ಆಗಬೇಕೆಂಬ ಆಸೆ, ಆದರೆ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡ ಮನು, ನಾಲ್ಕೈದು ವರ್ಷದಿಂದ ಬ್ಯಾಂಕ್ ನಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿಕೊಂಡರು.

ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಮನೋಹರ್ ಭಾರತ ತಂಡದಲ್ಲಿ ಒಂದು ಪಂದ್ಯವಾದರೂ ಆಡಬೇಕು ಎಂಬ ಆಸೆ. ಆದರೆ, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಮನು ಯಾವ ಆಸೆಯೂ ನೆರವೇರಿಲ್ಲ. ಈಗ ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಮೊತ್ತ ಗೆದ್ದುಕೊಂಡಿದ್ದಾರೆ. ಇದರಿಂದ ಅವರ ಲೈಫ್ ಸಂಪೂರ್ಣವಾಗಿ ಬದಲಾಗುವ ಸಾಧ್ಯತೆ ಇದೆ. ಅಷ್ಟಕ್ಕೂ, ಮನು ಗೆದ್ದ ಹಣವೆಷ್ಟು? ಮುಂದೆ ಓದಿ....

ಮನುಗೆ ಅದೃಷ್ಟ ತಂದುಕೊಟ್ಟ ಪ್ರಶ್ನೆ ಇದು

ಮನುಗೆ ಅದೃಷ್ಟ ತಂದುಕೊಟ್ಟ ಪ್ರಶ್ನೆ ಇದು

ಬ್ಯಾಂಕ್ ಅಟೆಂಡರ್ ಮನು ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ವೇಗವಾಗಿ ಸರಿ ಉತ್ತರ ನೀಡಿ ಹಾಟ್ ಸೀಟ್ ಗೆ ಆಯ್ಕೆಯಾದರು. ಆ ಪ್ರಶ್ನೆ ಯಾವುದು ಎಂದರೆ.....
ಕರ್ನಾಟಕ ಪ್ರೀಮಿಯರ್ ಲೀಗ್ ಈ ತಂಡಗಳನ್ನು ಅವುಗಳು ಪ್ರತಿನಿಧಿಸುವ ಊರುಗಳ ಆಧಾರದ ಮೇಲೆ ಉತ್ತರದಿಂದ ದಕ್ಷಿಣಕ್ಕೆ ಜೋಡಿಸಿ?
A ಬಿಜಾಪುರ್ ಬುಲ್ಸ್
B ಶಿವಮೊಗ್ಗ ಲಯನ್ಸ್
C ಬೆಂಗಳೂರು ಬ್ಲಾಸ್ಟರ್ಸ್
D ಬಳ್ಳಾರಿ ಟಸ್ಕರ್ಸ್
ಸರಿಯಾದ ಉತ್ತರ: A ಬಿಜಾಪುರ್ ಬುಲ್ಸ್, D ಬಳ್ಳಾರಿ ಟಸ್ಕರ್ಸ್, B ಶಿವಮೊಗ್ಗ ಲಯನ್ಸ್, C ಬೆಂಗಳೂರು ಬ್ಲಾಸ್ಟರ್ಸ್ (ಸರಿ ಉತ್ತರ ಕೊಟ್ಟಿದ್ದು ಒಬ್ಬರೇ)

3.20 ಲಕ್ಷದ ವರೆಗೂ ಲೈಫ್ ಲೈನ್ ಬಳಸಿಲ್ಲ

3.20 ಲಕ್ಷದ ವರೆಗೂ ಲೈಫ್ ಲೈನ್ ಬಳಸಿಲ್ಲ

ಬಹಳ ಕಾನ್ಫಿಡೆಂಟ್ ಆಗಿ ಕನ್ನಡದ ಕೋಟ್ಯಧಿಪತಿ ಆಟ ಆಡಿದ ಮನೋಹರ್ ಅವರು ಹತ್ತು ಪ್ರಶ್ನೆಗಳಿಗೆ ಯಾವುದೇ ಲೈಫ್ ಲೈನ್ ಬಳಸದೇ ಸರಿ ಉತ್ತರ ನೀಡಿದರು. 3.20 ಲಕ್ಷ ಗೆಲ್ಲುವ ಮೂಲಕ ಕೋಟಿ ಗೆಲ್ಲುವ ಭರವಸೆ ಮೂಡಿಸಿದರು.

ಲೈಫ್ ಲೈನ್ ಬಳಸಿ 6.40 ಗೆದ್ದ ಮನು

ಲೈಫ್ ಲೈನ್ ಬಳಸಿ 6.40 ಗೆದ್ದ ಮನು

ಇವರಲ್ಲಿ ಯಾರು ಆಗಸ್ಟ್ 15ರಂದು ಜನಿಸಿಲ್ಲ?
A ಸಂಗೊಳ್ಳಿ ರಾಯಣ್ಣ
B ಶ್ರೀ ಅರಬಿಂದೋ
C ನೆಪೋಲಿಯನ್ ಬೋನಪಾರ್ಟಿ
D ಆನಿ ಬೆಸೆಂಟ್
6.40 ಲಕ್ಷಕ್ಕೆ ಕೇಳಲಾದ ಈ ಪ್ರಶ್ನೆಗೆ ಮನೋಹರ್ ಗೆ ಉತ್ತರ ಗೊತ್ತಿರಲಿಲ್ಲ. ಹಾಗಾಗಿ, ಫಿಫ್ಟಿಫಿಫ್ಟಿ ಲೈನ್ ಬಳಸಿದರು. A ಸಂಗೊಳ್ಳಿ ರಾಯಣ್ಣ, B ಶ್ರೀ ಅರಬಿಂದೋ ಆಯ್ಕೆ ಮಾಯವಾಯಿತು. ನಂತರ ಫೋನ್ ಎ ಫ್ರೆಂಡ್ ಲೈನ್ ಬಳಸಿದರು. ಫೋನೋ ಫ್ರೆಂಡ್ D ಆನಿ ಬೆಸೆಂಟ್ ಎಂದು ಉತ್ತರಿಸಿದರು. ಮನು ಕೂಡ ಅದೇ ಉತ್ತರವನ್ನ ಲಾಕ್ ಮಾಡಿದರು. ಅದೃಷ್ಟವಶಾತ್ ಅದು ಸರಿ ಆಗಿತ್ತು. ಅಲ್ಲಿಗೆ 6.40 ಲಕ್ಷ ಸಿಕ್ತು.

ಮನುಗೆ ಕೈಕೊಟ್ಟ ಮತ್ತೊಂದು ಪ್ರಶ್ನೆ

ಮನುಗೆ ಕೈಕೊಟ್ಟ ಮತ್ತೊಂದು ಪ್ರಶ್ನೆ

ನಂತರ 12.50 ಲಕ್ಷಕ್ಕೆ ಕೇಳಲಾದ ಪ್ರಶ್ನೆ ಮನೋಹರ್ ಗೆ ಮತ್ತಷ್ಟು ಗೊಂದಲಕ್ಕೆ ಕಾರಣವಾಯಿತು. ಆಡಿಯೆನ್ಸ್ ಪೋಲ್ ಮತ್ತು ಡಬಲ್ ಡಿಪ್ ಲೈಫ್ ಲೈನ್ ಇತ್ತು. ಸ್ಪಷ್ಟ ಉತ್ತರ ಗೊತ್ತಿಲ್ಲದ ಕಾರಣ ಆಡಿಯೆನ್ಸ್ ಪೋಲ್ ಮೊರೆ ಹೋದರು. ಆದರೆ, ಆಡಿಯೆನ್ಸ್ ನೀಡಿದ ಉತ್ತರದ ಮೇಲೆ ನಂಬಿಕೆ ಇಲ್ಲದೇ ಆಟವನ್ನ ಕ್ವಿಟ್ ಮಾಡಿದರು. ಅಲ್ಲಿಗೆ 6.40 ಲಕ್ಷವನ್ನ ಮಾತ್ರ ಉಳಿಸಿಕೊಂಡರು. 12.50 ಲಕ್ಷ ಗೆಲ್ಲುವ ಅವಕಾಶ ಮಿಸ್ ಆಯ್ತು.

12.50 ಲಕ್ಷದ ಪ್ರಶ್ನೆ ಯಾವುದು?

12.50 ಲಕ್ಷದ ಪ್ರಶ್ನೆ ಯಾವುದು?

ಬ್ರಿಟನ್ನಿನ ಯಾವ ಮಾಜಿ ಪ್ರಧಾನಿ 'ಬ್ಯಾಂಗ್ ಲೋರ್ ಕ್ಲಬ್'ನಲ್ಲಿ 1899ರಲ್ಲಿ 13 ರೂಪಾಯಿಗಳ ಬಾಕಿ ಉಳಿಸಿದ್ದರು?
A ಮಾರ್ಗರೇಟ್ ಥ್ಯಾಚರ್
B ರಾಮ್ಸೆ ಮೆಕ್ ಡೊನಾಲ್ಡ್
C ನೆವಿಲ್ ಚೇಂಬರ್ ಲೇನ್
D ವಿನ್ಸಟಿಲ್ ಚರ್ಚಿಲ್
ಸರಿ ಉತ್ತರ: D ವಿನ್ಸಟಿಲ್ ಚರ್ಚಿಲ್

More from Filmibeat

English summary
Kannadada kotyadhipathi 4: Bank attender manu particepated in Kannadada kotyadhipathi and he won big amount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X