For Quick Alerts
  ALLOW NOTIFICATIONS  
  For Daily Alerts

  ಕಳೆದ ವಾರ ಅತಿ ಹೆಚ್ಚು ವೀಕ್ಷಣೆ: ಟಾಪ್ 1 ಸ್ಥಾನದಲ್ಲಿ ಪೊಗರು

  By ಫಿಲ್ಮೀಬೀಟ್ ಡೆಸ್ಕ್‌
  |

  ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ, ರಿಯಾಲಿಟಿ ಶೋಗಳ ಜನಪ್ರಿಯತೆಯನ್ನು ಟಿಆರ್‌ಪಿಯಿಂದ ಅಳೆಯಲಾಗುತ್ತದೆ. ಬಾರ್ಕ್‌ ಸಂಸ್ಥೆಯು ಟಿಆರ್‌ಪಿ ನೀಡುವಲ್ಲಿ ವಿಶ್ವಸನೀಯ ಸಂಸ್ಥೆಯೆಂದು ಗುರುತಿಸಿಕೊಂಡಿದೆ.

  ಒಂದು ವಾರಕ್ಕೊಮ್ಮೆ ಯಾವ ಚಾನೆಲ್‌ಗೆ ಹೆಚ್ಚು ಟಿಆರ್‌ಪಿ. ಯಾವ ಚಾನೆಲ್‌ನ ಯಾವ ಶೋಗೆ ಹೆಚ್ಚು ಟಿಆರ್‌ಪಿ ದೊರೆತಿದೆ ಎಂದು ಪ್ರತಿವಾರವೂ ವರದಿ ಪ್ರಕಟಿಸುತ್ತದೆ ಬಾರ್ಕ್. ನ್ಯೂಸ್‌ ಚಾನೆಲ್‌ಗಳಿಗೂ ಟಿಆರ್‌ಪಿ ನೀಡಲಾಗುತ್ತದೆ.

  ಏಪ್ರಿಲ್‌ 16 ರಿಂದ ಏಪ್ರಿಲ್ 21 ರವರೆಗೆ ಎಷ್ಟು ಕನ್ನಡದ ಯಾವ ಟಿವಿ ಚಾನೆಲ್‌ನ ಯಾವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ ಎಂಬುದನ್ನು ಆಧರಿಸಿ ಟಿಆರ್‌ಪಿ ನೀಡಿದೆ ಬಾರ್ಕ್‌.

  ಬಾರ್ಕ್ ನೀಡಿರುವ ಪಟ್ಟಿಯಂತೆ ಉದಯ ಟಿವಿಯಲ್ಲಿ ಪ್ರಸಾರವಾದ 'ಪೊಗರು' ಸಿನಿಮಾವನ್ನು ಈ ವಾರ ಹೆಚ್ಚು ಜನ ನೋಡಿದ್ದಾರೆ. ಅದಾದ ನಂತರದ ಜೀ ಕುಟುಂಬ ಉತ್ಸವ ಕಾರ್ಯಕ್ರಮವನ್ನು ಹೆಚ್ಚು ಜನ ನೋಡಿದ್ದಾರೆ.

  ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ ಇದೆ. 'ಸತ್ಯ' ಈ ವಾರ ಅತಿ ಹೆಚ್ಚು ನೋಡಲ್ಪಟ್ಟ ಕನ್ನಡ ಧಾರಾವಾಹಿ ಆಗಿದೆ. ನಾಲ್ಕನೇ ಸ್ಥಾನದಲ್ಲಿ 'ನಾಗಿಣಿ 2' ಹಾಗೂ ಐದನೇ ಸ್ಥಾನದಲ್ಲಿ 'ಮಂಗಳ ಗೌರಿ ಮದುವೆ' ಧಾರಾವಾಹಿ ಇದೆ.

  ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಹೈಪ್ ಹುಟ್ಟಿಸಿದ್ದ 'ಬಿಗ್‌ಬಾಸ್ ಸೀಸನ್ 8' ರಿಯಾಲಿಟಿ ಶೋ ಟಾಪ್ ಐದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

  English summary
  BARC Released TRP Points Of April 16 To April 21. Movie Pogaru is the most watched program this week in Kannada. Sathya serial is the most watched Kannada serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X