Bharjari Bachelors- 2: ಗಾರ್ಮೆಂಟ್ಸ್ ಹೋಗೋ ಹೆಣ್ಣುಮಕ್ಕಳ ಮನಸ್ಸು ಗೆದ್ದ ಹುಲಿ ಕಾರ್ತಿಕ್
'ಭರ್ಜರಿ ಬ್ಯಾಚುಲರ್'-2 ಶೋನಲ್ಲಿ ಹುಲಿ ಕಾರ್ತಿಕ್ ಕೂಡ ಒಳ್ಳೆ ಮನರಂಜನೆಯನ್ನ ನೀಡುತ್ತಾರೆ. ಗ್ರಾಮೀಣ ಭಾಗದ ಪ್ರತಿಭೆಯಾಗಿರುವ ಕಾರಣ, ಕಷ್ಟ ಸುಖವನ್ನಂತು ಹತ್ತಿರದಿಂದಾನೇ ಬಲ್ಲವರಾಗಿದ್ದಾರೆ. ಈಗ ಮನರಂಜನೆ ನೀಡುವುದಕ್ಕೆ ಅಂತ ಬಂದರು, ಕೆಲವೊಂದು ಟಾಸ್ಕ್ ಗಳು ಕೆಲವೊಂದು ಸಲ ಮನಸ್ಸನ್ನೆ ಡಿಸ್ಟರ್ಬ್ ಮಾಡಿ ಬಿಡುತ್ತದೆ. ದೂರದಿಂದ ನೋಡಿದಾಗ ಏನು ಅನ್ನಿಸದೆ ಇರಬಹುದು. ಅದೊಂದು ಕೆಲಸವಾಗಿ ಫೀಲ್ ಆಗಬಹುದು. ಆದರೆ ಹತ್ತಿರದಲ್ಲಿ, ಆ ಕೆಲಸ ಮಾಡಿ ನೋಡಿದಾಗಲೇ ಅದರ ಹಿಂದಿನ ಕಷ್ಟ ಗೊತ್ತಾಗೋದು. ಇದನ್ನ ಹೇಳ್ತಾ ಇರೋದಕ್ಕೆ ಕಾರಣ ಹುಲಿ ಕಾರ್ತಿಕ್, ಇಂದು ಗಾರ್ಮೆಂಟ್ಸ್‌ನಲ್ಲಿ ದುಡಿಯುವುದಕ್ಕೆ ಹೋಗುವ ಹೆಣ್ಣುಮಕ್ಕಳ ಮನಸ್ಸನ್ನೇ ಗೆದ್ದಿದ್ದಾರೆ.
ಶೋನಲ್ಲಿ ಈ ವಾರ ವಿಭಿನ್ನವಾದ ಕಾನ್ಸೆಪ್ಟ್ ನೀಡಿದ್ದಾರೆ. ಒಂದು ದಿನದ ಸಂಪಾದನೆ ಬಗ್ಗೆ. ಆ ಸಂಅಪದನೆ ಮಾಡಬೇಕಾದರೆ ಎಷ್ಟೆಲ್ಲಾ ರಿಸ್ಕ್ ಇರುತ್ತೆ ಎಂಬುದು ಕೂಡ ಅರುವಾಗಿದೆ. ಅದರಲ್ಲೂ ಹುಲಿ ಕಾರ್ತಿಕ್ ಹೆಣ್ಣು ಮಕ್ಕಳ ಕಷ್ಟವನ್ನ ಅರ್ಥ ಮಾಡಿಕೊಂಡಿದ್ದಾರೆ.

ದುಡಿಮೆಯ ಕಾಣಿಕೆ ಟಾಪಿಕ್
ಈ ವಾರ ಭರ್ಜರಿ ಬ್ಯಾಚುಲರ್-2 ಶೋನಲ್ಲಿ ದುಡಿಮೆಯ ಕಾಣಿಕೆ ಎಂಬ ಟಾಪಿಕ್ ಮೇಲೆ ಮನರಂಜನೆ ನಡೆಯುತ್ತಿದೆ. ಒಂದು ದಿನ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ದುಡಿಯಬೇಕು. ಒಂದು ದಿನಕ್ಕೆ ಎಷ್ಟು ಸಂಪಾದನೆ ಮಾಡಬಹುದು ಎಂಬುದೇ ಆಗಿದೆ. ಈ ಟಾಸ್ಕ್ ನ ಉಸ್ತುವಾರಿ ರವಿಚಂದ್ರನ್ ಅವರಾಗಿದ್ದು, ಅವರು ಹೇಳಿದ ಕೆಲಸವನ್ನ ಹುಲಿ ಕಾರ್ತಿಕ್ ಮಾಡಿ ಮುಗಿಸಿದ್ದಾರೆ.
ಗಾರ್ಮೆಂಟ್ಸ್‌ನಲ್ಲಿ ಕೆಲಸ
ಗಾರ್ಮೆಂಟ್ಸ್ ಎಂದಾಕ್ಷಣಾ ನೆನಪಾಗುವುದು ಹೆಣ್ಣು ಮಕ್ಕಳು. ಇಂದು ಅದೆಷ್ಟೋ ಹೆಣ್ಣು ಮಕ್ಕಳು ತಮಗೆ ಕಷ್ಟವಾದರೂ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡಿ, ಸಂಸಾರದ ನೊಗವನ್ನ ಎಳೆದುಕೊಂಡು ಹೋಗುತ್ತಿದ್ದಾರೆ. ಹುಲಿ ಕಾರ್ತಿಕ್ ಕೂಡ ಅದೇ ಕೆಲಸವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಗಾರ್ಮೆಂಟ್ಸ್‌ನಲ್ಲಿ ಶರ್ಟ್‌ಗಳನ್ನು ಹೊಲಿದು, ಹಣವನ್ನು ಸಂಪಾದನೆ ಮಾಡಿದ್ದಾರೆ. ಒಂದು ಶರ್ಟ್‌ಗೆ ಸಿಗುವುದು ಕೇವಲ 50 ರೂಪಾಯಿ. ಬರೀ ಶರ್ಟ್ ಹೊಲಿಯುವುದಲ್ಲ. ಕಟ್ಟಿಂಗ್‌ನಿಂದ ಹಿಡಿದು, ಕಾಲರ್ ಎಲ್ಲವನ್ನು ನೋಡಿಕೊಳ್ಳಬೇಕು. ಹೀಗಾಗಿ ಹೆಚ್ಚು ಹೊಲಿಯುವುದಕ್ಕೆ ಸಾಧ್ಯವಾಗುವುದಿಲ್ಲ.
ಹೆಣ್ಣು ಮಕ್ಕಳ ಬಗ್ಗೆ ಮೆಚ್ಚುಗೆ
ನಾವಾಕುವ ಒಂದೊಂದು ಶರ್ಟ್ ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಎನ್ನಬಹುದು. ಆದರೆ ಒಂದೊಂದು ಶರ್ಟ್ ಹೊಲಿಯುವುದಕ್ಕೂ ಸಾಕಷ್ಟು ಜನರ ಶ್ರಮ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳು ಬೆಳಗ್ಗೆನೆ ಎದ್ದು, ಮಕ್ಕಳಿಗೆಲ್ಲ ತಿಂಡಿ ತಿನ್ನಿಸಿ, ಗಂಡನ ಕ್ಯಾರಿಯರ್ ರೆಡಿ ಮಾಡಿ, ಬಸ್ ಗಾಗಿ ಓಡಿ ಹೋಗುತ್ತಾರೆ. ಅಲ್ಲಿ ಒಂದು ಫ್ಯಾನ್ ಕೂಡ ಇಲ್ಲ. ಟೆರೆಸ್ ಅಂತ ಸ್ಥಳದಲ್ಲಿ, ಫುಲ್ ಶೀಟ್ ಹಾಕಿರುತ್ತಾರೆ. ಆ ಶೀಟ್ ಇನ್ನಷ್ಟು ಶೆಕೆ ಹೊಡೀತಾ ಇರುತ್ತೆ. ಆದರೂ ಕೆಲಸವನ್ನ ಮಾಡ್ತಾನೇ ಇರುತ್ತಾರೆ. ರಜೆ ಹಾಕದೇ ಮಾಡಿದರು ಸುಮಾರು ಹತ್ತು ಸಾವಿರ ಸಿಗಬಹುದು ಅಷ್ಟೇ ಎಂದಿದ್ದಾರೆ.
ಕಾರ್ತಿಕ್ ಕೊಟ್ಟ ಹಣವೆಷ್ಟು..?
ಗಾರ್ಮೆಂಟ್ಸ್‌ನಲ್ಲಿ ಒಂದು ಶರ್ಟ್‌ಗೆ 50 ರೂಪಾಯಿ ಕೊಡ್ತಾರೆ. ಅದರಂತೆ ಈಗ ಹುಲಿ ಕಾರ್ತಿಕ್ ದುಡಿದಿರುವ ಹಣ 800 ರೂಪಾಯಿ. ಕಾರ್ತಿಕ್ ಪಾಟ್ನರ್ ಆಗಿರುವಂತ ಧನ್ಯಶ್ರೀಗೆ ಆ ಹಣವನ್ನ ಕೊಟ್ಟಿದ್ದಾರೆ. ಅಮ್ಮನಿಗೋಸ್ಕರ, ತನಗೋಸ್ಕರ ಬಿಟ್ಟರೆ ಈಗ ದುಡಿದಿರುವುದು ಧನ್ಯಶ್ರೀಗೋಸ್ಕರ ಮಾತ್ರ. ಧನ್ಯಶ್ರೀ ಕೂಡ ಆ ಹಣ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ. ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳುತ್ತಿದ್ದ ಧನ್ಯಶ್ರೀಗೆ ಇಂದು ಹುಲಿ ಕಾರ್ತಿಕ್ ಹಣ ತುಂಬಾನೇ ತೂಕವಾದದ್ದಾಗಿದೆ.


Click it and Unblock the Notifications











