BBK 10: ಭಾಗ್ಯಶ್ರೀ ಕಣ್ಣಲ್ಲಿ ಡ್ರೋನ್ ಹೀರೋ..ಪ್ರತಾಪ್ ಸ್ಟಾಟರ್ಜಿ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭನಾ ?
ಬಿಗ್ ಬಾಸ್ ಮನೆಯಲ್ಲಿ ಆಗಾಗ ತನ್ನ ಅಗಾಧ ಪ್ರತಿಮೆಯನ್ನು ತೋರಿಸುವುದು ಡ್ರೋನ್ ಪ್ರತಾಪ್. ಎಷ್ಟೋ ಸಲ ಊಹೆಯನ್ನು ಮಾಡುವುದಕ್ಕೂ ಆಗುವುದಿಲ್ಲ. ಆ ರೀತಿ ನಡೆದುಕೊಳ್ಳುತ್ತಾರೆ. ತುಂಬಾ ಯೋಚನೆ ಮಾಡಿ, ಯಾವುದು ಲಾಭವಾಗುತ್ತೋ ಅದನ್ನೆ ಮಾಡುತ್ತಾರೆ. ಕಳೆದ ಬಾರಿ ನಾಮಿನೇಷನ್ ಅಧಿಕಾರ ಬಂದಾಗಲೂ ಅಷ್ಟೇ, ಎಲ್ಲಾ ಪಾಸ್ ಗಳನ್ನು ತನ್ನಲ್ಲೇ ಇಟ್ಟುಕೊಂಡು, ಗೇಮ್ ಆಡಿದ್ದರು.
ಪ್ರತಾಪ್ ಆಡುವುದು ಬುದ್ದಿವಂತಿಕೆಯ ಆಟ. ಗೆಲುವಿಗೆ ಏನು ಬೇಕು ಅಂತ ನೋಡುತ್ತಾರೆ ವಿನಃ ತನಗೆ ಯಾರಿಷ್ಟ ಎಂಬುದನ್ನು ನೋಡುವುದಿಲ್ಲ. ಅದೇ ಸ್ಟಾಟರ್ಜಿಯೇ ಇವತ್ತು ವರ್ಕ್ ಆಗಿದೆ. ಎದುರು ಇರುವ ಟೀಂಗೆ ಭಯ ಹುಟ್ಟಿಸಿದೆ.

ವಜ್ರಕಾಯ, ಗಂಧದಗುಡಿ ಆಡೋಕೆ ರೆಡಿ
ಬಿಗ್ ಬಾಸ್ ಮನೆಯಲ್ಲಿ ಆಗಾಗ ಅವರೇ ಟೀಂ ಮಾಡಿಕೊಳ್ಳುತ್ತಾರೆ. ಇನ್ನು ಕೆಲವೊಂದು ಸಲ ಟಾಸ್ಕ್‌ನಲ್ಲಿ ಎನರ್ಜಿ ಇರಲಿ ಅಂತ ಬಿಗ್ ಬಾಸ್ ಕಡೆಯಿಂದಾನೇ ಟೀಂ ಆಗುತ್ತದೆ. ಇವತ್ತು ಬಿಗ್ ಬಾಸ್ ಎರಡು ಟೀಂ ಮಾಡಿದೆ. ಅದರಲ್ಲಿ ಒಂದು ಗಂಧದ ಗುಡಿ. ಈ ಟೀಂಗೆ ಪ್ರತಾಪ್ ನಾಯಕ. ಇನ್ನೊಂದು ವಜ್ರಕಾಯ. ಅದಕ್ಕೆ ಸಿರಿ ಲೀಡರ್. ಎರಡು ಟೀಂಗೆ ಬಿಗ್ ಬಾಸ್ ಟಾಸ್ಕ್‌ಗಳನ್ನು ನೀಡಿದೆ. ಟೀಂಗಳು ಹೇಗೆ ಆಡುತ್ತವೆಯೋ ಅದೇ ಮೇಲೆ ನಾಮಿನೇಷನ್ ಡಿಪೆಂಡ್ ಆಗಿದೆ.
ಗಂಧದ ಗುಡಿಗೆ ಸಿಕ್ತು ವಿಶೇಷ ಅಧಿಕಾರ
ರಿಲೇ ಮಾದರಿಯಲ್ಲಿ ಬಣ್ಣದ ತುಂಡನ್ನು ಹಲಗೆಯ ಮೇಲೆ ಜೋಡಿಸಬೇಕು. ಯಾರು ಮೊದಲು ಜೋಡಿಸುತ್ತಾರೋ ಅವರು ವಿಶೇಷ ಅಧಿಕಾರ ಪಡೆಯುತ್ತಾರೆ. ಈ ವಿಶೇಷ ಅದು ನಾಮಿನೇಷನ್ ಮೇಲೆ ಪರಿಣಾಮ ಬೀರುತ್ತೇ. ಎರಡು ಟೀಂನಲ್ಲಿ ಪ್ರತಾಪ್ ಕಡೆಯಿಂದ ಮೈಕಲ್ ಉಸ್ತುವಾರಿ ವಹಿಸಿದ್ದರೆ, ಸಿರಿ ಕಡೆಯಿಂದ ನೀತೂ ವಹಿಸಿದ್ದರು. ಈ ಟಾಸ್ಕ್‌ನಲ್ಲಿ ಪ್ರತಾಪ್ ತಂಡ ಗಂಧದಗುಡಿ ಗೆದ್ದಿದೆ. ಹೀಗಾಗಿ ವಿಶೇಷ ಅಧಿಕಾರ ಕೂಡ ಗಂಧದ ಗುಡಿಗೆ ಸಿಕ್ಕಿದೆ.
ಭಾಗ್ಯಶ್ರೀಯನ್ನು ಸೇಫ್ ಮಾಡಿದ್ದು ಪ್ರತಾಪ್
ಪ್ರತಾಪ್‌ಗೆ ಬಿಗ್ ಬಾಸ್ ಈ ಅಧಿಕಾರ ನೀಡಿದರು. ಒಬ್ಬರನ್ನು ನಾಮಿನೇಷನ್‌ನಿಂದ ಪಾರು ಮಾಡಬಹುದು. ಯಾರೊಂದಿಗೂ ಚರ್ಚೆ ಮಾಡುವಂತಿಲ್ಲ ಎಂದು ಹೇಳಲಾಗಿತ್ತು. ಆದರೆ, ಪ್ರತಾಪ್ ಆಯ್ಕೆಮಾಡಿಕೊಂಡಿದ್ದು ಭಾಗ್ಯಶ್ರೀಯನ್ನು. ಆಟದಲ್ಲಿ ತುಂಬಾ ಚೆನ್ನಾಗಿ ಆಡಿದರು ಎಂಬ ಕಾರಣ ಹೇಳಿದರು. ಆದರೆ ಪ್ರತಾಪ್ ಸ್ಟಾಟರ್ಜಿ ಬೇರೆಯೇ ಆಗಿತ್ತು. ಅದನ್ನು ಪ್ರತಾಪ್ ಎಲ್ಲಿಯೂ ಹೊರಗೆ ಹಾಕಲ್ಲ. ಆದರೆ ಭಾಗ್ಯಶ್ರೀ ಮಾತ್ರ ತುಂಬಾನೇ ಖುಷೊ ಪಟ್ಟರು. ಯಾಕಂದ್ರೆ ಇನ್ನೇನು ಹೊರಗೆ ಹೋಗಿಯೇ ಬಿಟ್ಟರು ಎನ್ನುವಷ್ಟರಲ್ಲಿ ದಸರಾ ಹಬ್ಬ ಉಳಿಸಿತ್ತು. ಈಗ ಪ್ರತಾಪ್ ಐಡಿಯಾ ವರ್ಕ್ ಆಗಿದೆ.
ವಜ್ರಕಾಯ ಟೀಂಗೆ ಇದ್ಯಾ ಭಯ?
ಪ್ರತಾಪ್‌ನ ಆಟ ಕಂಡು ತುಕಾಲಿಗೆ ಅನುಮಾನ ಬಂದಿದೆ. ತಮ್ಮ ಟೀಂನಲ್ಲಿ ಕೂತು ಆ ಬಗ್ಗೆ ಮಾತನಾಡಿದ್ದಾರೆ. "ನಾಮಿನೇಷನ್ ಮಾಡೋದು, ಸೇವ್ ಮಾಡೋದು ಎರಡು ಅವನ ಕೈಗೆ ಸಿಕ್ತಾ ಇದೆ. ನಾವೂ ಯಾಮಾರಿ ಈಗ ಮತ್ತೆ ಸೋತರೆ ಕಷ್ಟ" ಎಂದು ಸಂತೋಷ್ ಹೇಳಿದ್ರೆ, 'ಭಾಗ್ಯಶ್ರೀ ಮೇಡಂ ಇದ್ದರೆ ಅವರ ಟೀಂನಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ. ಆಗ ನಮ್ಮ ಟೀಂ ವಿನ್ ಆಗುತ್ತೆ. ಈಗ ನಮ್ಮ ಟೀಂನಲ್ಲಿ ಒಬ್ಬರು ಹೋದರೆ ಅವರು ಸ್ಟ್ರಾಂಗ್ ಆಗುತ್ತಾರೆ" ಎಂದು ಟೀಂನಲ್ಲಿ ಸ್ನೇಹಿತ್ ಹಿಂಟ್ ಕೊಟ್ಟಿದ್ದಾರೆ.


Click it and Unblock the Notifications











