BBK 10: ಡ್ಯಾಶ್ ಆಟದಲ್ಲಿ ಬಯಲಾಯ್ತು ವರ್ತೂರು ಸಂತೋಷ್ ಕ್ರಶ್ ಮ್ಯಾಟರ್.. ಏನದು?
ಬಿಗ್ ಬಾಸ್ ಮನೆಯಲ್ಲಿ ಸದಸ್ಯರೆಲ್ಲಾ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಬೆಳಗ್ಗೆಯಿಂದಾನೂ ಹಬ್ಬದ ಹಾಡು, ಹಬ್ಬದೂಟ ಎಲ್ಲವನ್ನು ನೀಡುತ್ತಿದೆ. ಇದರ ಜೊತೆಗೆ ಮನೆಗೆ ಅತಿಥಿಯನ್ನು ಕೂಡ ಕಳುಹಿಸಿದ್ದಾರೆ. ಅತಿಥಿಯಾಗಿ ಆಗಮನದಿಂದ ಎಲ್ಲರ ಮನಸ್ಸು ಬೆಳಗಿದೆ. ಕೆಲವರ ಮನಸ್ಸುಗಳು ಹಗುರವಾಗಿದೆ.
'ಭಾಗ್ಯಲಕ್ಷ್ಮೀ' ತಂಡದಿಂದ ಭಾಗ್ಯ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಭಾಗ್ಯ ಅವರ ಎಂಟ್ರಿಯಿಂದ ಮನೆಯಲ್ಲಿ ಒಂದಷ್ಡು ಬದಲಾವಣೆಯಾಗಿದೆ. ತಪ್ಪು ಮಾಡುತ್ತಿದ್ದವರಿಗೆ ಭಾಗ್ಯ ತಿದ್ದಿ ಬುದ್ದಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೇಗೆಲ್ಲಾ ಇರಬೇಕು ಎಂಬುದನ್ನು ತಿಳಿಸಿದ್ದಾರೆ.

ಭಾಗ್ಯ ಬಂದ ಮೇಲೆ ಹೊಸ ಟಾಸ್ಕ್
ಬಿಗ್ ಬಾಸ್ ಮನೆಗೆ ಯಾರೇ ಅತಿಥಿಯಾಗಿ ಬಂದರು, ಮನೆಯವರಿಂದಾನೂ ಮನರಂಜನೆ ಸಿಗಬೇಕು. ಅವರಿಂದ ಮನೆಯವರಿಗೂ ಒಂದಷ್ಟು ಧೈರ್ಯ ಬರಬೇಕು. ಅಂತಹ ಟಾಸ್ಕ್‌ಗಳನ್ನೇ ಬಿಗ್ ಬಾಸ್ ನೀಡುತ್ತದೆ. ಇದೀಗ ಬಿಗ್ ಬಾಸ್ ಮನೆಗೆ ಬಂದ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ಇಡೀ ಮನೆಗೆ ಗೇಮ್ ಆಡಿಸಿದ್ದಾರೆ. ಅದು ಕೇವಲ ಮನರಂಜನೆಗಾಗಿ, ಸ್ಪರ್ಧೆಗಾಗಿ ಆಡಿದ ಆಟ. ಅದುವೇ ಬಿಟ್ಟ ಸ್ಥಳವನ್ನು ತುಂಬಬೇಕು.
ಗಮನ ಸೆಳೆದ ವರ್ತೂರು ಸಂತೋಷ್
ವರ್ತೂರು ಸಂತೋಷ್ ಇತ್ತೀಚೆಗೆ ಕೊಂಚ ಬದಲಾಗಿದ್ದಾರೆ. ತನಿಷಾ ಮೇಲೆ ಕ್ರಶ್ ಆಗಿದೆ ಎಂದು ಎಲ್ಲರೂ ರೇಗಿಸುತ್ತಾ ಇದ್ದರು. ಇದೀಗ ಅದೇ ಸತ್ಯವಾಗಿದೆ. ಮನೆಯೊಳಗೆ ಭಾಗ್ಯ ಆಡಿಸಿದ ಡ್ಯಾಶ್ ಆಟದಲ್ಲಿ, ಯಾರು ಈ ಮನೆಯಲ್ಲಿ ಸುಂದರವಾಗಿದ್ದಾರೆ? ಎಂಬ ಪ್ರಶ್ನೆಗೆ ವರ್ತೂರು ಕೊಟ್ಟ ಉತ್ತರ ತನಿಷಾ ಆಗಿತ್ತು. ಮತ್ತೊಂದು ಡ್ಯಾಶ್ ಪ್ರಶ್ನೆಯಲ್ಲಿ, ಯಾರ ಮೇಲೆ ಕ್ರಶ್ ಇದೆ. ಈ ಪ್ರಶ್ನೆಗೂ ವರ್ತೂರು ಸಂತೋಷ್ ತನ್ನ ಬೆಂಕಿ ಹೆಸರನ್ನೇ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಗೀತಾ ಕೂಡ ಉತ್ತರಿಸಿದ್ದಾರೆ. ವರ್ತೂರು ಹಾಗೂ ಬೆಂಕಿ ನಡುವೆ ಕದ್ದು ಮುಚ್ಚಿ ನಡೆಯುತ್ತಾ ಇದೆ ಎಂದಿದ್ದಾರೆ.

ವಿನಯ್ ಪರವಾಗಿ ನಿಂತಿರೊ ಸಂಗೀತಾ
ಆರಂಭದಲ್ಲಿಯೇ ವಿನಯ್ ಹಾಗೂ ಸಂಗೀತಾ ಒಬ್ಬರನ್ನೊಬ್ಬರು ಕಂಡರೇನೆ ಆಗುತ್ತಿರಲಿಲ್ಲ. ಬರೀ ಕಿತ್ತಾಟ, ಜೋರು ಜಗಳ. ಆದರೆ ಇತ್ತೀಚೆಗೆ ಸೂಪರ್ ಸಂಡೇ ವಿತ್ ಸುದೀಪ ಪಂಚಾಯತಿಯಲ್ಲೂ ಅಷ್ಟೇ ಪಟಾಕಿಯನ್ನು ವಿನಯ್‌ಗೆ ಡೆಡಿಕೇಟ್ ಮಾಡಿದ್ದರು. "ಇದೀಗ --- ಹಾಗೂ --- ಸದಸ್ಯರು ಈ ಮನೆಯಲ್ಲಿ ತುಂಬಾ --- ಮಾಡುತ್ತಾರೆ?" ಎಂಬ ಪ್ರಶ್ನೆಗೆ ವಿನಯ್ ಸದಸ್ಯರು ಈ ಮನೆಯಲ್ಲಿ ತುಂಬಾ ಪ್ರೀತಿ ಮಾಡುತ್ತಾರೆ ಎಂದು ಸಂಗೀತಾ ಉತ್ತರಿಸಿದ್ದಾರೆ. ನಮ್ರತಾ ಬಳಿ ಕೇಳಿದಾಗ, ಸ್ನೇಹಿತ್ ಹಾಗೂ ಕಾರ್ತಿಕ್ ಸದಸ್ಯರು ಈ ಮನೆಯಲ್ಲಿ ಯಾವಾಗ ಫ್ಲರ್ಟ್ ಮಾಡುತ್ತಾರೆ ಎಂದಿದ್ದಾರೆ.
ಸ್ನೇಹಿತ್ ಸೀಕ್ರೆಟ್ ಬಿಟ್ಟಿಟ್ಟ ನಮ್ರತಾ
ಪ್ರಶ್ನೆಗಳು ಮುಂದುವರೆದಂತೆ "ಸ್ನೇಹಿತ್ ಬೆಡ್ ರೂಮಿನಲ್ಲಿ --- ಬಚ್ಚಿಡುತ್ತಾರೆ" ಎಂಬ ಪ್ರಶ್ನೆಗೆ, ನಮ್ರತಾ ಮುಚ್ಚಿಟ್ಟಿದ್ದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. "ಸ್ನೇಹಿತ್ ಬೆಡ್ ರೂಮಿನಲ್ಲಿ ಅವರ ಗಿಟಾರ್ ಚಡ್ಡಿ ಬಚ್ಚಿಡುತ್ತಾರೆ" ಎಂದಿದ್ದಾರೆ. ಇದು ತುಂಬಾ ಸೀಕ್ರೆಟ್ ವಿಚಾರ ಅಲ್ವಾ ನಮ್ರತಾ ಎಂದು ಸ್ನೇಹಿತ್ ಸಮಜಾಯಿಷಿ ನೀಡಿದ್ದಾರೆ. "ನಕ್ಕು ನಕ್ಕು ಸಾಕಾದ ನಮ್ರತಾ, ಹೌದು, ಆ ಚಡ್ಡಿ ಹಾಕಿಕೊಂಡಾಗೆಲ್ಲ ಟಾಸ್ಕ್ ಗೆಲ್ಲುತ್ತಾರಂತೆ. ನಾನು ಅದನ್ನು ನೋಡಿಲ್ಲ. ಆದರೆ, ನೋಡಿದವರು ಹೇಳುತ್ತಾರೆ. ಆ ಚಡ್ಡಿಯನ್ನು ಯಾರಿಗೂ ತೋರಿಸಿಲ್ಲ" ಎಂದಿದ್ದಾರೆ.


Click it and Unblock the Notifications











