BBK 10: ಅನಿರೀಕ್ಷಿತ ಹೆಸರುಗಳು ಸೇಫ್.. ನಾಮಿನೇಷನ್ ಪ್ರಕ್ರಿಯೆಯಲ್ಲಿ ಸ್ಟ್ರಾಂಗ್ ಇರೋರೇ ಹೊರ ಹೋಗ್ತಾರಾ?
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವಾಗ ಹಲವು ಕಂಟೆಸ್ಟೆಂಟ್‌ಗಳನ್ನು ನಾಮಿನೇಟ್ ಮಾಡುತ್ತಾರೆ. ಅದರಲ್ಲಿ ಜನ ಸೇವ್ ಮಾಡುವ ಕಂಟೆಸ್ಟೆಂಟ್‌ಗಳಿಗೆ ಬಿಗ್ ಬಾಸ್ ಜರ್ನಿ ಮುಂದುವರೆಯುತ್ತದೆ. ವಾರದ ಕೊನೆಯಲ್ಲಿ ಒಬ್ಬರು ಮನೆಗೆ ಹೋಗುತ್ತಾರೆ. ಈ ವಾರ ಬರೋಬ್ಬರಿ ಒಬ್ಬತ್ತು ಜನ ನಾಮಿನೇಟ್ ಆಗಿದ್ದಾರೆ. ಯಾರಿಗೇ ಅದೃಷ್ಟ ಕೈತಪ್ಪಿದೆಯೋ ಅವರು ಮನೆಯಿಂದ ಹೊರಗೆ ನಾಳೆ ಹೆಜ್ಜೆ ಹಾಕಲಿದ್ದಾರೆ.
ಎಲಿಮಿನೇಷನ್ ಅನ್ನೋದು ಕುತೂಹಲಕ್ಕೆ ಕಾರಣವಾಗಿರಬೇಕು. ಇಷ್ಟು ವಾರ ಆ ಕುತೂಹಲ, ಎಕ್ಸೈಟ್ಮೆಂಟ್ ಇರಲಿಲ್ಲ. ಯಾಕಂದ್ರೆ ಹೊರ ಬರುವ ಸದಸ್ಯರು ಇವರೇ ಇರಬಹುದು ಎಂಬುನ್ನು ಸುಲಭವಾಗಿ ಊಹಿಸಬಹುದಿತ್ತು. ಆದರೆ, ಈ ವಾರ ಆ ಕುತೂಹಲ ಎಲ್ಲರಲ್ಲೂ ಹಾಗೇ ಉಳಿದಿದೆ. ಯಾಕಂದ್ರೆ, ಲೀಸ್ಟ್‌ನಲ್ಲಿ ಇರುವವರು ಅಷ್ಟೇ ಸ್ಟ್ರಾಂಗ್ ಕಂಟೆಸ್ಟೆಂಟ್.

ನಾಮಿನೇಟ್ ಆದ ಆ 9 ಜನ ಯಾರು..?
ಒಬ್ಬರಲ್ಲ ಇಬ್ಬರಲ್ಲ 9 ಜನ ಈ ವಾರ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಒಬ್ಬರು ಮನೆಯಿಂದ ಹೊರ ಬರುವುದು ಪಕ್ಕಾ ಆಗಿದೆ. ಸಿರಿ, ತುಕಾಲಿ ಸಂತು, ತನಿಷಾ, ರಕ್ಷಕ್, ಮೈಕೆಲ್, ಸ್ನೇಹಿತ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್ ಈ ವಾರ ನಾಮಿನೇಟ್ ಆಗಿದ್ದಾರೆ. ಈ ಒಂಬತ್ತು ಜನರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ.
ಭಾಗ್ಯಶ್ರೀ ಈ ವಾರವೂ ಸೇಫ್
ಈ ಸೀಸಸ್‌ನಲ್ಲಿ ಪರವಾಗಿಲ್ಲ ಈ ವಾರ ಮನೆಯಿಂದ ಹೊರ ಹೋಗಬಹುದು ಎಂಬ ನಿರೀಕ್ಷೆ ಬರುವುದು ಒಂದು ಭಾಗ್ಯಶ್ರೀ ಮತ್ತೊಂದು ಇಶಾನಿ ಮೇಲೆ. ಯಾರೂ ಇಲ್ಲದೆ ಹೋದರೆ ಸಿರಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಭಾಗ್ಯಶ್ರೀ ಕಳೆದ ವಾರ ಮನೆಯಲ್ಲಿಯೇ ಉಳಿದು ಬಿಟ್ಟರು. ದಸರಾ ಬೋನಸ್ ನಂತೆ ಬಿಗ್ ಬಾಸ್, ಭಾಗ್ಯಶ್ರೀ ಇನ್ನಷ್ಟು ದಿನ ಜರ್ನಿ ಮುಂದುವರೆಸಲು ಅವಕಾಶ ನೀಡಿದೆ. ಈ ವಾರವಂತು ಭಾಗ್ಯಶ್ರೀ ಹಾಗೂ ಇಶಾನಿ ನಾಮಿನೇಷನ್ ಲೀಸ್ಟ್‌ನಲ್ಲಿಯೇ ಇಲ್ಲ.
ಶನಿವಾರ ಸೇವ್ ಆಗಿದ್ದು ಇವರೇ
ನಾಮಿನೇಟ್ ಆಗಿದ್ದ ಒಂಭತ್ತು ಜನರಲ್ಲಿ ಮೊದಲಿಗೆ ಸೇಫ್ ಆಗಿದ್ದು ಸಿರಿ. ಯಾಕಂದ್ರೆ ಸ್ವಲ್ಪ ಘಟಾನುಘಟಿಗಳೇ ಈ ವಾರದ ನಾಮಿನೇಷನ್ ಲೀಸ್ಟ್ ನಲ್ಲಿ ಇದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಇವತ್ತು ಸೇಫ್ ಆಗಿರುವ ಸದಸ್ಯರ ಹೆಸರಲ್ಲಿ ಮೊದಲು ಸಿರಿ, ವರ್ತೂರ್ ಸಂತೋಷ್, ಕಾರ್ತೀಕ್ ಹೆಸರನ್ನೇ ತೆಗೆದುಕೊಂಡಿದ್ದಾರೆ. ವರ್ತೂರು ಸಂತೋಷ್ ಮನೆಗೆ ಬಂದಾಗ ಸಾಕಷ್ಟು ಜನ ಅವರನ್ನು ನಾಮಿನೇಟ್ ಮಾಡಿದ್ದರು. ಆದರೆ ಜನರಿಂದ ಅವರು ಸೇಫ್ ಆಗಿದ್ದಾರೆ. ಈ ವಾರ ಇವರು ಹೋಗಬಹುದು ಎಂದು ಅಂದಾಜು ಮಾಡುವವರೇ ಮೊದಲ ಲೀಸ್ಟ್ ನಲ್ಲಿ ಸೇಫ್ ಆಗಿದ್ದಾರೆ.
ಯಾರ ನಡುವೆ ನಡೆಯಲಿದೆ ಯುದ್ಧ
ಈ ವಾರವೇ ಎಲಿಮಿನೇಷನ್ ರೌಂಡ್ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಯಾಕಂದ್ರೆ, ಉಳಿದವರಲ್ಲಿ ತುಕಾಲಿ ಸಂತು, ತನಿಷಾ, ರಕ್ಷಕ್, ಮೈಕೆಲ್, ಸ್ನೇಹಿತ್, ವಿನಯ್ ಉಳಿದಿದ್ದಾರೆ. ತುಕಾಲಿ ಹಾಗೋ ಹೀಗೋ ಮನರಂಜನೆ ನೀಡುತ್ತಾರೆ, ತನಿಷಾ ಅಡುಗೆ ಮನೆಯನ್ನು ಚೆನ್ನಾಗಿ ನಿಭಾಯಿಸುವುದಲ್ಲದೆ ಆಕ್ಟಿವ್ ಆಗಿರುತ್ತಾರೆ. ರಕ್ಷಕ್ ಇನ್ನು ಆರ್ಭಟಿಸುವುದನ್ನು ನೋಡಬೇಕಿದೆ. ಮೈಕಲ್ ಈಗಾಗಲೇ ಟಾಸ್ಕ್‌ಗಳಲ್ಲಿ ಸ್ಟ್ರಾಂಗ್ ಅಂತ ತೋರಿಸಿದ್ದಾರೆ. ಈ ವಾರ ಜನರ ಮೆಚ್ಚುಗೆ ಬೇರೆ ಗಳಿಸಿದ್ದಾರೆ. ಸ್ನೇಹಿತ್ ಅಂತು ಉತ್ತಮ ಎಂಬ ಪಟ್ಟವನ್ನೇ ಪಡೆದಿದ್ದಾರೆ. ಇನ್ನು ವಿನಯ್ ಆನೆಯಂತೆಯೇ ಮೆಂಟೈನ್ ಮಾಡಿದ್ದಾರೆ. ಹೀಗಾಗಿ ನಾಳಿನ ಎಲಿಮಿನೇಷನ್ ಸಾಕಷ್ಟು ಕುತೂಹಲ ಹೆಚ್ಚಿಸಿದೆ.


Click it and Unblock the Notifications











