BBK 10: ಕಾರ್ತಿಕ್ ಬಿಗ್ ಬಾಸ್‌ಗೆ ಬರುವುದಕ್ಕೆ ರಿಯಲ್ ಗರ್ಲ್ ಫ್ರೆಂಡ್ ಕಾರಣ? ಹಾಗಾದ್ರೆ ಸಂಗೀತಾ ಕಥೆಯೇನು?
ಬಿಗ್ ಬಾಸ್ ನೂರು ದಿನಗಳ ಆಟ. ಈ ಆಟದಲ್ಲಿ ವಾರಕ್ಕೊಬ್ಬರು ಔಟ್ ಆದಾಗಲೇ ಕೊನೆಯಲ್ಲಿ ಇಬ್ಬರನ್ನು ಬಲಗಡೆ ಮತ್ತು ಎಡಗಡೆ ನಿಲ್ಲಿಸಿಕೊಂಡು, ಜಯಭೇರಿಯನ್ನು ಘೋಷಣೆ ಮಾಡುವುದಕ್ಕೆ ಸಾಧ್ಯ. ಅದಕ್ಕೆ ಮನೆಯಲ್ಲಿ ಟಫ್ ಟಾಸ್ಕ್ ನೀಡುತ್ತಾರೆ. ಆ ಟಾಸ್ಕ್‌ಗಳಲ್ಲಿ ಗೆಲುವು ಬಹಳ ಮುಖ್ಯವಾಗುತ್ತದೆ.
ಬಿಗ್ ಬಾಸ್ ಟಾಸ್ಕ್ ವಿಚಾರದಲ್ಲಿ ಮಾನಸಿಕ ಹಾಗೂ ದೈಹಿಕ ಎರಡಕ್ಕೂ ಕೆಲಸ ಕೊಡುವಂತ ಟಾಸ್ಕ್‌ಗಳನ್ನೇ ನೀಡುತ್ತದೆ. ಈ ಬಾರಿ ಗೊಂಬೆಯಂತೆ ಕುಳಿತ ಸ್ಪರ್ಧಿಗಳಿಗೆ ಕೋಪ ತರಿಸಬೇಕು. ಇದೇ ದೊಡ್ಡ ಟಾಸ್ಕ್. ಇದರಲ್ಲಿ ಸ್ಪರ್ಧಿಗಳ ನಡವಳಿಕೆಯೂ ಬಹಳ ಮುಖ್ಯವಾಗುತ್ತದೆ.

ಹೊಸ ಟಾಸ್ಕ್ ನೀಡಿದ ಬಿಗ್ ಬಾಸ್
ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಟಾಸ್ಕ್, ಮನೆಯ ಸದಸ್ಯರ ಬಗ್ಗೆ ಮನಸ್ಸಲ್ಲಿ ಇರುವ ಭಾವನೆಗಳ ಬಗ್ಗೆ, ತಮ್ಮ ನಡವಳಿಕೆಯ ಅನಾವರಣವಾಗುವಂತ ಟಾಸ್ಕ್ ಗಳನ್ನೇ ಬಿಗ್ ಬಾಸ್ ನೀಡುತ್ತೆ. ಎದುರು ಇರುವ ವ್ಯಕ್ತಿಯನ್ನು ಡಿಸ್ಟರ್ಬ್ ಮಾಡುವ ಟಾಸ್ಕ್ ಅನ್ನು ಬಿಗ್ ಬಾಸ್ ಈಗಾಗಲೇ ಹಲವು ಸೀಸನ್‌ಗಳಲ್ಲಿ ನೀಡಲಾಗಿದೆ. ಈ ಬಾರಿಯೂ ಅಂತದ್ದೇ ಟಾಸ್ಕ್‌ಗಳನ್ನು ನೀಡಿದ್ದು, ಸ್ಪರ್ಧಿಗಳು, ನೋಡುಗರಿಗೆ ಶಾಕ್ ಎನಿಸುವಂತ ನಡವಳಿಕೆಯನ್ನು ತೋರಿಸಿದ್ದಾರೆ.
ವೈಯಕ್ತಿಕ ನಿಂದನೆ ಮಾಡಿದ್ದು ಕಾರ್ತಿಕ್ ಟೀಂ
ಬಿಗ್ ಬಾಸ್ ಕೊಟ್ಟ ಟಾಸ್ಕ್ ಅಂದ್ರೆ ಗಂಧದ ಗುಡಿ ತಂಡದವರು ಕುಳಿತಾಗ ವಜ್ರಕಾಯ ತಂಡದವರು ಡಿಸ್ಟರ್ಬ್ ಮಾಡಬೇಕು. ಹಾಗೇ ವಜ್ರಕಾಯ ತಂಡದವರನ್ನು ಗಂಧದಗುಡಿ ತಂಡದವರು ಡಿಸ್ಟರ್ಬ್ ಮಾಡಬೇಕು. ಹೀಗೆ ಮಾಡುವಾಗ ಮೊದ ಮೊದಲಿಗೆ ಸರಿಯಾದ ರೀತಿಯಲ್ಲಿ, ಸರಿಯಾದ ಮಾತಿನ ಮೂಲಕ ಡಿಸ್ಟರ್ಬ್ ಮಾಡುವ ಪ್ರಯತ್ನ ನಡೆದಿತ್ತು. ಅದ್ಯಾಕೋ ಅದು ವರ್ಕೌಟ್ ಆಗುತ್ತಿಲ್ಲ ಎನಿಸಿದಾಗ ವೈಯಕ್ತಿಕ ನಿಂದನೆ ಮಾಡಲು ಶುರು ಮಾಡಿದರು. ಅದನ್ನು ಶುರು ಮಾಡಿದ್ದು ಗಂಧದ ಗುಡಿಯೇ ಮೊದಲು.
ಕಾರ್ತಿಕ್,ಸಂಗೀತಾ,ತನಿಷಾ ಟಾರ್ಗೆಟ್
ಗಂಧದ ಗುಡಿಯವರು ಹಾಕಿಕೊಟ್ಟ ಗೆರೆಯಲ್ಲಿಯೇ ವಜ್ರಕಾಯ ನಡೆಯುತ್ತಿದೆ. ಗಂಧದ ಗುಡಿಯವರಿಗೂ ವಜ್ರಕಾಯದವರು ಟಾರ್ಗೆಟ್ ಮಾಡಿದರು. ವೈಯಕ್ತಿಕ ನಿಂದನೆಯನ್ನು ಶುರು ಮಾಡಿದರು. ಕಾರ್ತಿಕ್, ಸಂಗೀತಾ, ತನಿಷಾ ಅವರನ್ನು ನಮ್ರತಾ, ಸ್ನೇಹಿತ್ ಟಾರ್ಗೆಟ್ ಮಾಡಿ, ಯುದ್ದಕ್ಕೆ ನಿಂತಿದ್ದರು.
ಗೇಮ್ ಮುಗಿದ ಮೇಲೆ ಸ್ನೇಹಿತ್ ಕ್ಷಮೆ
ಈ ಟಾಸ್ಕ್‌ನಲ್ಲಿ ವೈಯಕ್ತಿಕ ವಿಚಾರವೊಂದು ಹೊರಗೆ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸಂಗೀತಾ ಹಾಗೂ ಕಾರ್ತಿಕ್ ಪ್ರೇಮಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇದು ಬಿಗ್ ಬಾಸ್‌ಗೆ ಮಾತ್ರ ಸೀಮಿತವಾಗಿದೆಯಾ ಎಂಬ ಅನುಮಾನ ಈಗ ಮೂಡಿದೆ. ಆ ಅನುಮಾನ ಮೂಡುವುದಕ್ಕೆ ಕಾರಣ ಸ್ನೇಹಿತ್ ಹೇಳಿದ ಆ ಒಂದು ಮಾತು. ಕೋಪ ತರಿಸಬೇಕು ಎಂಬ ಟಾಸ್ಕ್‌ನಲ್ಲಿ ಸ್ನೇಹಿತ್, ಕಾರ್ತಿಕ್ ಬಳಿ ಬಂದು. ಹೊರಗೆ ಒಂದು ಲವ್ ಒಳಗೆ ಒಂದು ಲವ್. ಪಾಪ ಅವರು ನಿನ್ನನ್ನ ಬಿಗ್ ಬಾಸ್‌ಗೆ ಕಳುಹಿಸಿದರೆ, ನೀನು ಒಳಗೆ ಒಬ್ಬರ ಜೊತೆಗೆ ಓಡಾಡ್ತಾ ಇದ್ದೀಯಾ ಎಂದಿದ್ದಾರೆ. ಇದು ಕಾರ್ತಿಕ್‌ಗೆ ಹರ್ಟ್ ಮಾಡಿದೆ. ನಾನು ಒಳಗಿನ ವಿಚಾರ ಅಷ್ಟೇ ಮಾತನಾಡಿದ್ದು. ತೆಗೆದರೆ ಸಾವಿರ ತೆಗೆಯಬಹುದಿತ್ತು ಎಂದು ಕಾರ್ತಿಕ್ ಹೇಳಿದಾಗ, ಕ್ಷಮೆ ಇರಲಿ, ಫ್ಲೋನಲ್ಲಿ ಬಂದು ಬಿಡ್ತು ಅಂತ ಸ್ನೇಹಿತ್ ಹೇಳಿದ್ದಾರೆ.


Click it and Unblock the Notifications











