BBK 10: ಕಬ್ಬನ್ ಪಾರ್ಕ್ ಅಲ್ಲ.. ಬಿಗ್ ಬಾಸ್ ಮನೆ ಎಂಬುದನ್ನು ಮೈಕೆಲ್ ಅಂಡ್ ಇಶಾನಿಗೆ ಎಚ್ಚರಿಸಿದ ಕಿಚ್ಚ..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ಅಂತ ಶುರುವಾಗುವುದು ಸಹಜ. ಪ್ರತಿ ಸೀಸನ್ ನಲ್ಲಿ ಪ್ರೀತಿಗಳು ಶುರುವಾಗುತ್ತೆ. ಆ ಪ್ರೀತಿಗಳು ಹೊರಗೆ ಬಂದಾಗ ಮುಂದುವರೆಯುವುದು ಹಲವು, ಕಳೆದು ಹೋಗುವುದು ಇನ್ನು ಕೆಲವು. ಸೀಸನ್ 10 ಬಂದಿದೆ. ಈ ಸೀಸನ್‌ನಲ್ಲಿಯೂ ಪ್ರೀತಿಯೊಂದು ಅಧಿಕೃತವಾಗಿ ಅರಳಿದೆ.

ಸದ್ಯದ ಬಿಗ್ ಬಾಸ್ ಮನೆಯಲ್ಲಿ ಮೂರು ಲವ್ ಸ್ಟೋರಿಗಳು ನಡೆಯುತ್ತಿವೆ. ಸಂಗೀತಾ ಮತ್ತು ಕಾರ್ತೀಕ್, ನಮ್ರತಾ ಹಾಗೂ ಸ್ನೇಹಿತ್. ಆದರೆ ಅಧಿಕೃತ ಎಂದು ಒಪ್ಪಿಕೊಂಡಿಲ್ಲ. ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಸಪೋರ್ಟ ಥರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ಇಶಾನಿಯ ನಡವಳಿಕೆ, ಅಧಿಕಾರಕ್ಕೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.

bbk-kichcha-sudeep-michael-eshani
ಇಶಾನಿ ಪ್ರಕಾರ ಬಾಯ್ ಫ್ರೆಂಡ್ ಅಂದ್ರೆ ಏನು?

ಬಿಗ್ ಬಾಸ್ ಮನೆಯಲ್ಲಿ ಇಶಾನಿಯ ನಡವಳಿಕೆ ಕಂಡಾಗ ನೋಡುಗರಿಗೆ ಅದು ಡಾಮಿನೇಟ್ ಅನ್ನಿಸಿದೆ. ಮೈಕೆಲ್‌ನ ಬಾಯ್ ಫ್ರೆಂಡ್ ಅಂತ ಒಪ್ಪಿಕೊಂಡಿದ್ದೆ ಬಿಗ್ ಬಾಸ್‌ನಲ್ಲಿ ಆಟವಾಡುವುದಕ್ಕೆ ಎಂಬಂತೆ ಇದೆ. ಯಾಕಂದ್ರೆ, ಮಾತಿಗೆ ಮುಂಚೆ ಮೈಕೆಲ್‌ನ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಲೆ ಇರುತ್ತಾರೆ. ಜೊತೆಗೆ ಮಾತಿಗೆ ಮುಂಚೆ ಜೋರು ಅಳುತ್ತಾರೆ. ಇದು ನೋಡುಗರಿಗೂ ಸಾಕಷ್ಟು ಕಿರಿಕಿರಿ ಆಗಿದೆ.

ಇಶಾನಿ ಗೆಲುವಿಗಾಗಿ ದಾರಿ ತಪ್ಪಿದ ಮೈಕೆಲ್

ಇಶಾನಿ ಪರೋಕ್ಷವಾಗಿ ಸದಾ ಮೈಕೆಲ್ ತನಗೆ ಫೇವರ್ ಆಗಿ ಇರಬೇಕು ಅಂತಾನೆ ಬಯಸುತ್ತಾರೆ. ಮೈಕೆಲ್ ತನ್ನದೇ ಆದಂತ ಸ್ಟ್ಯಾಂಡ್ ತೆಗೆದುಕೊಂಡಾಗಲೂ ಇಶಾನಿಯ ಜೋರು ಗಲಾಟೆಯಿಂದಾಗಿ ಮೈಕೆಲ್ ಮತ್ತೆ ಮತ್ತೆ ತನ್ನ ನಿರ್ಧಾರವನ್ನು ಬದಲಾಯಿಸುತ್ತಾ ಇದ್ದರು. ಇಶಾನಿಗಾಗಿ ತಮ್ಮ ಟೀಂ ಅನ್ನೇ ಬಿಟ್ಟು ಕೊಟ್ಟರು. ವಿರುದ್ಧ ತಂಡಕ್ಕೆ ಸ್ಟಾಟರ್ಜಿ ಹೇಳಿಕೊಟ್ಟಿದ್ದರು. ಅದು ಇವತ್ತು ಕಿಚ್ಚನಿಂದ ಎಲ್ಲರ ಮುಂದೆ ಬಟಾಬಯಲಾಗಿತ್ತು.

ಬುದ್ದಿ ಹೇಳಿದ ಕಿಚ್ಚ

ಇಶಾನಿಯ ನಡವಳಿಕೆಯಿಂದ ಮೈಕೆಲ್ ಬದಲಾಗಿದ್ದು ಸುದೀಪ್ ಗಮನಕ್ಕೂ ಬಂದಿದೆ. ಹೀಗಾಗಿಯೇ ಇಂದಿನ ವಾರದ ಕಥೆ ಕಿಚ್ಚನ ಜೊತೆಗಿನ ಪಂಚಾಯ್ತಿಯಲ್ಲಿ ಆ ವಿಚಾರ ತೆಗೆದಿದ್ದಾರೆ. ಮೈಕೆಲ್ ಗೆ ತನ್ನ ತಪ್ಪನ್ನು ರಿಯಲೈಸ್ ಮಾಡಿದ್ದಾರೆ. ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಅಂದ್ರೆ ಏನು ಎಂಬುದನ್ನ ತಿಳಿಸಿದ್ದಾರೆ. ಅಷ್ಟೇ ಅಲ್ಲ ಇದು ಕಬ್ಬನ್ ಪಾರ್ಕ್ ಅಲ್ಲ ಬಿಗ್ ಬಾಸ್ ಎಂಬುದನ್ನು ನೆನಪಿಸಿದ್ದಾರೆ.

ಮೈಕೆಲ್ ಬಳಿ ಕ್ಷಮೆ ಕೇಳಿದ ಇಶಾನಿ

ಸುದೀಪ್ ಅವರು ಬುದ್ದಿ ಹೇಳಿದ ಮೇಲೆ ಇಶಾನಿ ಜೋರು ಕಣ್ಣೀರು ಹಾಕೋದಕ್ಕೆ ಶುರು ಮಾಡಿದ್ದಾರೆ. ಈ ವೇಳೆ ಮೈಕೆಲ್, ಇಶಾನಿಗೆ ಕ್ಲಾರಿಟಿ ಕೊಟ್ಟಿದ್ದಾರೆ. ನಿಂಗೆ ಸಾರಿ ಕೇಳ್ತೀನಿ. "ನೀನು ಏನು ಮಾತಾಡ್ತೀಯಾ, ಏನು ಹೇಳ್ತೀಯ ಅಂತ ಹೊಂದಾಣಿಕೆನೇ ಆಗ್ತಾ ಇಲ್ಲ" ಎಂದಾಗ ಜೋರು ಕಣ್ಣೀರು ಹಾಕಿದ್ದಾರೆ. ನಾವೂ ಭೇಟಿ ಮಾಡಿ ಒಂದು ತಿಂಗಳಾಗಿದೆ ಅಂತ. ಇದೆಲ್ಲ ಕೇಳಿದ ಮೇಲೆ ಇಶಾನಿ ಕ್ಷಮೆಯನ್ನು ಕೇಳಿದ್ದಾರೆ. ಬಳಿಕ ವೇದಿಕೆ ಮೇಲೆ ಸುದೀಪ್ ಬಳಿ, "ಹಳೇ ಬಾಯ್ ಫ್ರೆಂಡ್ಸ್ ಎಲ್ಲ ನಿನ್ನಿಂದಾನೇ ಬಿಟ್ಟು ಹೋಗಿದ್ದಾರೆ ಅಂದ್ರು. ಆದರೆ, ನಾನು ಏನು ಅಂತ ನನಗೆ ಗೊತ್ತು. ಯಾರಿಗೂ ಹರ್ಟ್ ಮಾಡುವುದಕ್ಕೆ ಇಷ್ಟ ಇಲ್ಲ. ನಾನು ಆ ಥರದ ಹುಡುಗಿ ಅಲ್ಲ" ಎಂದು ಮೈಕೆಲ್ ಆಡಿದ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
BBK 10 Kichcha Sudeep gave warning to Michael Ajay and Eshani on love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X