BBK 10: ಸಂಗೀತಾಗೆ ಸೋಲು.. ಮೈಕೆಲ್ ಕ್ಯಾಪ್ಟನ್.. ಬಿಗ್ ಬಾಸ್ ದಾರಿ ಮಾಡಿಕೊಟ್ಟರು ಗೆಲ್ಲಲಿಲ್ಲ ಭಾಗ್ಯಶ್ರೀ !
ಇಂದು ಕ್ಯಾಪ್ಟನ್ ಅವಧಿ ಮುಗಿದು, ಹೊಸ ಕ್ಯಾಪ್ಟನ್ ಸರದಿ ಬಂದಿದೆ. ಈ ವಾರದ ಕ್ಯಾಪ್ಟನ್ ರೇಸಲ್ಲಿ ಮೈಕೆಲ್ ಹಾಗೂ ಭಾಗ್ಯಶ್ರಿ ಇದ್ದಾರೆ. ಆ ಇಬ್ಬರನ್ನೇ ಓಟದಲ್ಲಿ ಬಿಟ್ಟರೆ ಗೆಲ್ಲುವುದು ಮೈಕೆಲ್ ಮಾತ್ರ. ಆದರೆ, ಬಿಗ್ ಬಾಸ್ ಪ್ಲ್ಯಾನ್ ಬೇರೆಯದ್ದೇ ಆಗಿದೆ. ಬಿಗ್ ಬಾಸ್ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದ್ದರೆ ಖಂಡಿತಾ ಭಾಗ್ಯಾ ಅವರು ಕ್ಯಾಪ್ಟನ್ ಆಗ್ತಾ ಇದ್ರು. ಆದರೆ, ಭಾಗ್ಯಾಶ್ರೀ ಪರವಾಗಿ ಆಡಿದ ಸಂಗೀತಾ ಸೋಲು ಕಂಡಿದ್ದಾರೆ.
ಈ ವಾರ ಕ್ಯಾಪ್ಟನ್ ಆಗುವ ಅದೃಷ್ಟ ಗಂಧದ ಗುಡಿ ತಂಡಕ್ಕೆ ಬಂದಿತ್ತು. ಏಳು ಜನ ರೇಸಲ್ಲಿ ಇದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ ಆರು ಸುತ್ತುಗಳು ಸಹ ಮೈಕೆಲ್ ಗೆದ್ದು, ಒಬ್ಬೊಬ್ಬರನ್ನೇ ಹೊರಗಿಟ್ಟಿದ್ದರು. ಕೊನೆಯಲ್ಲಿ ಉಳಿದಿದ್ದದ್ದು ಮೈಕೆಲ್ ಹಾಗೂ ಭಾಗ್ಯಶ್ರೀ. ಅವರಿಬ್ಬರಲ್ಲಿ ಈ ವಾರ ಮೈಕೆಲ್ ಕ್ಯಾಪ್ಟನ್ ಆಗಬಹುದು.

ಕ್ಯಾಪ್ಟನ್ ಟಾಸ್ಕ್‌ನಲ್ಲಿ ಉಳಿದಿದ್ದು ಮೈಕೆಲ್ & ಭಾಗ್ಯಶ್ರೀ
ಟಾಸ್ಕ್ ಅಂತ ಬಂದಾಗ ಮೈಕೆಲ್ ಸಿಕ್ಕಾಪಟ್ಟೆ ಸ್ಟ್ರಾಂಗ್. ದೈಹಿಕವಾಗಿ ಎಂಥದ್ದೇ ಟಾಸ್ಕ್ ಕೊಟ್ಟರು ಆ ಟಾಸ್ಕ್‌ನಲ್ಲಿ ವಿನ್ ಆಗ್ತಾರೆ. ಈಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ಅಷ್ಟೇ, ಬಲೂನ್ ಊದುವ ಮೂಲಕ, ಲೋಟಗಳನ್ನು ಜೋಡಿಸುವ ಟಾಸ್ಕ್ ನಲ್ಲೂ ಮೈಕೆಲ್ ಎಲ್ಲಾ ರೌಂಡ್ ನಲ್ಲೂ ಗೆದ್ದಿದ್ದಾರೆ. ಅದರಲ್ಲೂ ವಜ್ರಕಾಯ ತಂಡದವರು ಆಪೋಸಿಟ್ ತಂಡದವರಾದ್ರೂ ಸಹ, ಮೈಕೆಲ್ ಗೆಲ್ಲಲಿ ಎಂದೇ ಹಾರೈಸಿದ್ದರು. ಮೈಕೆಲ್ ಅದಾಕ್ಷಣ ಖುಷಿ ಪಟ್ಟಿದ್ದರು.
ಸಂಗೀತಾರಿಂದ ಭಾಗ್ಯಶ್ರೀಗೆ ಸೋಲು
ಬಲೂನ್ ಆಟದಲ್ಲಿ ಮೈಕೆಲ್ ಸಿಂಪತಿ ಮೂಲಕ ಭಾಗ್ಯಶ್ರೀ ಉಳಿಸಿದ್ದರು. ಭಾಗ್ಯಶ್ರೀ ತನಗೆ ಯಾವುದರಿಂದಾನೂ ಸ್ಪರ್ಧಿಯಲ್ಲ ಎಂದೇ ಭಾವಿಸಿದ್ದರು. ಹೀಗಾಗಿ ಅವರನ್ನೇ ಉಳಿಸಿಕೊಂಡಿದ್ದರು. ಆದರೆ, ಬಿಗ್ ಬಾಸ್ ಆಟವೇ ಬೇರೆ ಅಲ್ವಾ. ಮೈಕೆಲ್ ಜೊತೆಗೆ ಭಾಗ್ಯಶ್ರೀಯನ್ನು ಸ್ಪರ್ಧೆಗೆ ಬಿಡಲಿಲ್ಲ. ಬದಲಿಗೆ ಅವರಿಬ್ಬರ ಪರವಾಗಿ ಆಡಲು ಬೇರೆಯವರಿಗೆ ಸೂಚನೆ ನೀಡಿತ್ತು. ಅದರಂತೆ ಭಾಗ್ಯಶ್ರೀ ಪರ ಸಂಗೀತಾ, ಮೈಕೆಲ್ ಪರ ಸ್ನೇಹಿತ್ ಆಡಿದ್ದರು.

ಬೇಸರ ಮಾಡಿಕೊಂಡ ಸಂಗೀತಾ
ದೇವರು ವರ ಕೊಟ್ಟರು ಪೂಕಾರಿ ಕೊಡಲ್ಲ ಎಂಬ ಮಾತಿದೆ. ಅದರಂತೆ ಸಂಗೀತಾ ಸ್ಟ್ರಾಂಗ್ ಎಂದುಕೊಂಡು ಭಾಗ್ಯಶ್ರೀ ಆಯ್ಕೆ ಮಾಡಿದ್ದರು. ಆದರೆ ಅದು ಆಗಲೇ ಇಲ್ಲ. ಸಂಗೀತಾ ಬಾಲ್ ಆಟ ಆಡುವಾಗ ಅದ್ಯಾಕೆ ಸರಿಯಾದ ರೀತಿಯಲ್ಲಿ ಆಡುವುದಕ್ಕೆ ಆಗಲಿಲ್ಲ. ಆ ಬಗ್ಗೆ ಭಾಗ್ಯಶ್ರೀಗೂ ಆತಂಕವಾಯ್ತು. ಕೆಳಗೆ ಇಳಿದು ಸಂಗೀತಾ ಬೇಸರ ಮಾಡಿಕೊಂಡರು. ಆದರೆ ಬೇಸರದ ಮನಸ್ಸಿನಿಂದಾನೇ ಭಾಗ್ಯಶ್ರೀ ಸಮಾಧಾನ ಮಾಡಿದರು.
ತನಗಾಗಿ ಆಸಕ್ತಿ ಕಳೆದುಕೊಂಡಿದ್ದ ಸಂಗೀತಾ
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ತಮ್ಮ ತಂಡ ಅಂದ್ರೆ ಗಂಧದ ತಂಡಕ್ಕೆ ಸಿಕ್ಕಿತ್ತು. ಆ ರೇಸಲ್ಲಿ ಸಂಗೀತಾ ಕೂಡ ಇದ್ದರು. ಅದ್ಯಾಕೋ ಟಾಸ್ಕ್ ಆಡುತ್ತಿದ್ದ ಉತ್ಸಾಹ ಕಾಣಿಸಲೇ ಇಲ್ಲ. ಮೈಕೆಲ್, ಸಂಗೀತಾ ಅವರನ್ನು ಹೊರ ಹಾಕಿದಾಗಲೂ ಅಷ್ಟೊಂದು ಬೇಸರ ಮಾಡಿಕೊಳ್ಳಲಿಲ್ಲ. ಕಾರ್ತಿಕ್ ಬಳಿಯೇ ಹೇಳಿಕೊಂಡಿದ್ದರು. ಈ ಕ್ಯಾಪ್ಟನ್ಸಿ ಟಾಸ್ಕ್ ನಂಗೆ ಇಷ್ಟವೇ ಇರಲಿಲ್ಲ ಅಂತ. ಆದರೆ, ಇದು ಭಾಗ್ಯಾಶ್ರೀ ಅವರ ಕನಸಿನ ಆಟವಾಗಿತ್ತು. ಸಂಗೀತಾ ಗೆದ್ದೇ ಗೆಲ್ಲುತ್ತಾರೆ ಎಂಬ ಭರವಸೆ ಇತ್ತು. ಹೀಗಾಗಿಯೇ ಅವರನ್ನು ಆಯ್ಕೆ ಮಾಡಿದ್ದರು. ತಮಗಾಗಿ ಹಾಡುವಾಗ ಹಾಕುವ ಎಫರ್ಟ್ ಹಾಕಿದ್ದರು ಗೆಲ್ಲುತ್ತಿದ್ದರೇನೋ..?


Click it and Unblock the Notifications











