BBK 10: ಸಂಗೀತಾ-ಸ್ನೇಹಿತ್ ಮದುವೆ.. ಭಾಗ್ಯಶ್ರೀ ಕ್ಯಾಪ್ಟನ್ಸಿ ವಿಚಾರ ತಂದು ಬೆಳಕಿನ ಹಬ್ಬದಲ್ಲಿ ನಗು ತರಿಸಿದ ಕಿಚ್ಚ

By ಎಸ್ ಸುಮಂತ್

ದೀಪಾವಳಿ ಹಬ್ಬ.. ಬೆಳಕಿನ ಹಬ್ಬಕ್ಕೆ ಮನೆಯೆಲ್ಲಾ ಬೆಳಕು, ಮನಸ್ಸೆಲ್ಲಾ ಬೆಳಕು. ಇಡೀ ನಾಡೇ ಬೆಳಗುವಾಗ ಬಿಗ್ ಬಾಸ್ ಮನೆ ಬೆಳಗುವುದಿಲ್ಲವೆ. ಮನೆಯವರಿಂದ ಸ್ಪರ್ಧಿಗಳು ದೂರ ಇರಬಹುದು. ಆದರೆ, ಯಾವುದೇ ವಿಶೇಷ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಬಿಗ್ ಬಾಸ್ ಆ ಒಂದು ಬೇಸರವನ್ನು ಸ್ಪರ್ಧಿಗಳಿಗೆ ನೀಡುವುದಿಲ್ಲ.

ದೀಪಾವಳಿ ಹಬ್ಬಕ್ಕೆ ಬಿಗ್ ಬಾಸ್ ಮನೆ ಶೃಂಗಾರಗೊಂಡಿದೆ. ನೋಡಿದ ಕಡೆಯಲ್ಲೆಲ್ಲಾ ಕಲರ್ ಫುಲ್ ಹೂಗಳಿಂದ ಕಂಗೊಳಿಸುತ್ತಿದೆ. ಮನೆಯಷ್ಟೇ ಮನೆ ಮಂದಿ ಕೂಡ ತುಂಬಾ ಅದ್ಭುತವಾಗಿ ರೆಡಿಯಾಗಿದ್ದಾರೆ. ಈ ಸಂತಸವನ್ನು ಕಿಚ್ಚ ಸುದೀಪ್ ಮತ್ತಷ್ಟು ದುಪ್ಪಟ್ಟು ಮಾಡಿದ್ದಾರೆ. ಕಿಚ್ಚನ ಮಾತಿಗಂತು ಮನೆ ಮಂದಿ ನಕ್ಕು ನಕ್ಕು ಸುಸ್ತಾಗಿದ್ದಾರೆ.

BBK 10 November 12th Deepavali episode Kichcha Sudeep laughing therapy

ಸಂಗೀತಾಗೆ ಸ್ನೇಹಿತ್ ಜೊತೆಗೆ ಮದುವೆ

ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಇಂದು ಬೇರೆ ರೀತಿಯಾದ ವಿಚಾರಗಳು ಚರ್ಚೆಗೆ ಬಂದಿಲ್ಲ. ಹಬ್ಬ ಎನ್ನುವ ಒಂದು ಕಾರಣವೂ ಇರಬಹುದು. ಹೀಗಾಗಿ ಬುದ್ದಿ ಹೇಳುವ ವಿಚಾರವನ್ನೆಲ್ಲ ನಿನ್ನೆ ಶನಿವಾರದ ಪಂಚಾಯತಿಯಲ್ಲಿಯೇ ಮುಗಿಸಿದ್ದರು. ಇದೀಗ ಹಾಸ್ಯದ ಸಮಯ ಶುರುವಾಗಿದ್ದು, ಸಂಗೀತಾ ಕನಸಿನ ಬಗ್ಗೆ ಅನಾವರಣವಾಗಿದೆ. ಸಂಗೀತಾ ಕನಸಿನ ಹುಡುಗ ಸ್ನೇಹಿತ್ ಥರ ಇರಬೇಕು ಎಂಬ ಕಿಚ್ಚನ ಪ್ರಶ್ನೆಗೆ, ನಮ್ರತಾ, ಸ್ನೇಹಿತ್, ಇಶಾನಿ, ವಿನಯ್ ಎಸ್ ಅಂತ ತೋರಿಸಿದ್ದಾರೆ. ಸಂಗೀತಾ ಅವರೇ ಬಂದು ಆ ಕನಸನ್ನು ನಮ್ಮ ಬಳಿ ಹೇಳಿದ್ದರು ಎಂದಿದ್ದಾರೆ. ಅಷ್ಟಕ್ಕೆ ಆ ಟಾಪಿಕ್ ಬಿಟ್ಟು ಕಿಚ್ಚ ಮುಂದೆ ಹೋಗೋಣಾ ಅಂತ ಹೇಳುವ ಮೂಲಕ ಸಂಗೀತಾ ಇಲ್ಲ ಎನ್ನುವುದಕ್ಕೂ ಬಿಡದಷ್ಟು ನಗಿಸಿದ್ದಾರೆ.

ಭಾಗ್ಯಶ್ರೀ ಬಗ್ಗೆ ಮನೆಯಲ್ಲೆಲ್ಲಾ ನಗು

ಈ ವಾರ ಮೈಕೆಲ್ ಹಾಗೂ ಭಾಗ್ಯಶ್ರೀ ನಡುವೆ ಕ್ಯಾಪ್ಟನ್ ರೇಸಿನಲ್ಲಿ ಇದ್ದರು. ಆದರೆ ಸಂಗೀತಾ, ಭಾಗ್ಯಶ್ರೀ ಪರ ಆಟ ಆಡಿ ಸೋತಿದ್ದರು. ಈ ವಿಚಾರಕ್ಕೆ ಕಿಚ್ಚ ಸುದೀಪ್, "ಭಾಗ್ಯಶ್ರೀ ಕ್ಯಾಪ್ಟನ್ ಆಗಿದ್ದರೆ ಮನೆ ಬೃಂದಾವನ ಆಗುತ್ತಿತ್ತು ಅಲ್ವಾ?" ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಸೋತಂತ ಸಂಗೀತಾ ಕೂಡ ವ್ಯಂಗ್ಯ ಮಾಡಿದ್ದಾರೆ. ಸಂತೋಷ್ ಇನ್ನು ವ್ಯಂಗ್ಯ ಮಾಡಿದ್ದಾರೆ.

ತುಕಾಲಿ ಸಿಕ್ಕಿತು ಮತ್ತೆ ಶಿಕ್ಷೆ

ಬಳಿಕ ಕಿಚ್ಚ ಸುದೀಪ್ ತುಕಾಲಿ ಸಂತು ವಿಚಾರಕ್ಕೆ ಬಂದಿದ್ದಾರೆ. ಮನೆಯಲ್ಲಿ ಎರಡು ಬಾರಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಗ್ ಬಾಸ್ ನೀಡಿದ್ದ ಶಿಕ್ಷೆಯನ್ನು ನೆನಪಿಸಿದ್ದಾರೆ. ಹೆಣ್ಣಿನ ವೇಷ ಧರಿಸಿ, ಎಲ್ಲಾ ಕ್ಯಾಮರಾಗಳಿಗೂ ಕ್ಷಮೆ ಕೇಳಿಸಿದ್ದರು ಸರ್ ಎಂದು ಸುದೀಪ್ ಮುಂದೆ ಒಪ್ಪಿಕೊಂಡಿದ್ದಾರೆ.

ತುಕಾಲಿ ಹುಡುಗಿಯಾದಾಗ ಏನು ಆಯ್ತು?

ತುಕಾಲಿಯನ್ನು ಮತ್ತೊಮ್ಮೆ ಹುಡುಗಿಯಾಗಿ ಮಾಡಿದ್ದಾರೆ. ಹುಡುಗಿ ವೇಷ ಧರಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದು. ಬಳಿಕ ವಿನಯ್ ಅಂಡ್ ಟೀಂ ಅವರಿಗೆ ಲೈನ್ ಹಾಕಬೇಕು. ಇದು ಕಿಚ್ಚನ ಹೊಸ ಟಾಸ್ಕ್ ಆಗಿತ್ತು. ವಿನಯ್, ಕಾರ್ತಿಕ್, ಮೈಕೆಲ್, ಸ್ನೇಹಿತ್ ನಾಲ್ಕು ಜನ ತುಕಾಲಿಯನ್ನು ಪಟಾಯಿಸುವುದಕ್ಕೆ ಬೇಜಾನು ಪಾಡು ಪಟ್ಟರು. ಆದರೆ, ಕಾರ್ತಿಕ್ ಕಡೆಗೆ ಪಟಾಯಿಸಿ ಬಿಟ್ಟಿದ್ದರು. ಇದು ತಮಾಷೆಗಾಗಿ ಆಗಿತ್ತು. ಆದರೆ ತುಕಾಲಿ, ಈ ವೇಷ ಬೇಡ ಅಣ್ಣ. ದಯವಿಟ್ಟು ಮುಗಿಸಿಬಿಡು ಅಣ್ಣ ಅಂತ ಬೇಡಿಕೊಂಡರು. ಈ ಎಲ್ಲಾ ರೀತಿಯಾದ ಫನ್‌ಗಳಿಂದ ಮನೆ ಮಂದಿ ನಕ್ಕು ನಗಿಸಿದ್ದಾರೆ.

More from Filmibeat

English summary
BBK 10 November 12th Deepavali episode Kichcha Sudeep laughing therapy:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X