BBK 10: ಮೈಕೆಲ್ ಅತಿ ಬುದ್ದಿವಂತಿಕೆಯೇ ಮನೆಯವರಿಗೆ ಮುಳುವಾಯ್ತು..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ನಿಯಮಗಳು ಇದೆ. ಆ ನಿಯಮಗಳನ್ನು ಬಿಗ್ ಬಾಸ್ ಆಗಾಗ ನೆನಪು ಮಾಡುತ್ತಲೂ ಇರುತ್ತದೆ. ಟಾಸ್ಕ್‌ಗಳನ್ನು ನೀಡಿದಾಗಲೂ ಆ ಟಾಸ್ಕ್ ಗಳಿಗೆ ಇರುವ ನಿಯಮವನ್ನು ಮತ್ತೊಮ್ಮೆ ನೆನಪು ಮಾಡಿರುತ್ತದೆ. ಆದರೆ ಈ ಸೀಸನ್ ಸ್ಪರ್ಧಿಗಳಷ್ಟು ಬೇರೆ ಯಾವ ಸ್ಪರ್ಧಿಗಳು ಇಷ್ಟೊಂದು ನಿಯಮಗಳನ್ನು ಮುರಿದಿಲ್ಲ.

ಪ್ರತಿ ಟಾಸ್ಕ್ ನಲ್ಲೂ ಬಿಗ್ ಬಾಸ್‌ಗೆ ಬೇಸರ ಮಾಡಿದ್ದಾರೆ. ನಿಯಮ ಮುರಿದಿರುವುದಕ್ಕೆ ಈಗಾಗಲೇ ಹಲವು ಬಾರಿ ಮನೆ ಮಂದಿಯೆಲ್ಲಾ ಶಿಕ್ಷೆ ಅನುಭವಿಸಿದ್ದಾರೆ. ಹಲವು ಬಾರಿ, ಸಿಗಬೇಕಾದ ಸೌಲಭ್ಯವನ್ನು ಕಳೆದುಕೊಂಡಿದೆ. ಆದರೂ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಮನೆ ಮಂದಿ ಮುಂದೆ ಇದ್ದಾರೆ.

BBK 10 November 14th episode about Michael and Karthik task rules break

ದಿನಸಿ ಪದಾರ್ಥ ಪಡೆಯಲು ಟಾಸ್ಕ್

ಬಿಗ್ ಬಾಸ್ ಮನೆಗೆ ಬೇಕಾದ ಯಾವ ಪದಾರ್ಥವನ್ನು ಸುಮ್ಮನೆ ಕೊಡುವುದೇ ಇಲ್ಲ. ಬದಲಿಗೆ ಅದಕ್ಕಾಗಿ ಮನೆಯವರು ಕಷ್ಟ ಪಡಬೇಕು, ದೇಹ ದಂಡಿಸಬೇಕು. ಹಲವು ರೀತಿಯಾದಂತ ಟಾಸ್ಕ್‌ಗಳನ್ನು ಬಿಗ್ ಬಾಸ್ ನೀಡುತ್ತಾರೆ. ಆ ಟಾಸ್ಕ್‌ಗಳಲ್ಲಿ ಜಯ ಗಳಿಸಿದರೆ ಮಾತ್ರ ದಿನಸಿಯೂ ಸಿಗಲಿದೆ. ಇಲ್ಲಿಯವರೆಗೂ ದಿನಸಿ ಗಳಿಸಲು ಮನೆ ಮಂದಿ ಪೂರ್ಣವಾಗಿ ಆಡಿಯೇ ಇಲ್ಲ. ಬದಲಿಗೆ ಸಾಕಷ್ಟು ಮಂದಿ ಆ ರೂಲ್ಸ್ ಬ್ರೇಕ್ ಮಾಡಿ ದಿನಸಿಯನ್ನು ಕಳೆದುಕೊಂಡಿದ್ದಾರೆ. ಈ ಬಾರಿಯೂ ನಾಲ್ಕು ಬಾಸ್ಕೆಟ್ ದಿನಸಿಯನ್ನು ಮನೆ ಕಳೆದುಕೊಂಡಿದೆ.

ಶಾರ್ಟ್ಸ್ ಹಾಕಿಕೊಳ್ಳುವ ಟಾಸ್ಕ್

ಮನೆ ಮಂದಿ ಮನೆಗೆ ಬೇಕಾದ ದಿನಸಿ ಪಡೆಯಲು ಬಿಗ್ ಬಾಸ್ ಹೊಸ ಟಾಸ್ಕ್ ಒಂದನ್ನು ನೀಡಿದ್ದರು. ಅದುವೇ ಶಾರ್ಟ್ಸ್ ಹಾಕಿಕೊಳ್ಳುವುದು. ಅದೇನು ಕಷ್ಟ ಎನ್ನಬಹುದು. ಆದರೆ ಬಿಗ್ ಬಾಸ್ ನೀಡಿದ್ದು, ಕೈ ಸಹಾಯ ಪಡೆಯದೆ ಶಾರ್ಟ್ಸ್ ಧರಿಸಬೇಕು. ಬರೀ ಕಾಲಿನ ಸಪೋರ್ಟ್‌ನಿಂದ ಮಾತ್ರ ಹಾಕಿಕೊಳ್ಳಬೇಕು. ಇದನ್ನು ಮುರಿದರೆ ದಿನಸಿ ಕಳೆದುಕೊಳ್ಳುತ್ತಾರೆ.

ರೂಲ್ಸ್ ಬ್ರೇಕ್ ಮಾಡಿದ ಮೈಕೆಲ್-ಕಾರ್ತಿಕ್

ಮೊದಲಿಗೆ ಈ ಟಾಸ್ಕ್ ಆಡಲು ಮೈಕೆಲ್ ಹಾಗೂ ಕಾರ್ತಿಕ್ ಬಂದಿದ್ದರು. ಅದರಲ್ಲಿ ಮೈಕೆಲ್ ಒಂದು ಟೇಬಲ್ ಸಹಾಯ ಪಡೆದಿದ್ದರು. ಇದರಿಂದ ಆಟದ ರೂಲ್ಸ್ ಬ್ರೇಕ್ ಆಗಿತ್ತು. ಗೆದ್ದೆವು ಎಂದು ಕಾಯುತ್ತಿದ್ದ ಇಬ್ಬರಿಗೂ ಬಿಗ್ ಬಾಸ್ ಸರಿಯಾಗಿ ಎಚ್ಚರಿಕೆ ನೀಡಿದ್ದಾರೆ. 'ಮೈಕೆಲ್, ಬುದ್ದಿವಂತಿಕೆ ಆಟಕ್ಕೆ ಒಳ್ಳೆಯದು. ಅತಿ ಬುದ್ದಿವಂತಿಕೆ ಆಟಕ್ಕಷ್ಟೇ ಅಲ್ಲ ದಿನಸಿಯನ್ನು ಕಳೆದುಕೊಳ್ಳಲಿದೆ. ಬಿಗ್ ಬಾಸ್ ನಿಯಮಗಳನ್ನು ಮೀರಿದ ಮನೆ ನಾಲ್ಕು ಬಾಸ್ಕೇಟ್ ದಿನಸಿ ಕಳೆದುಕೊಳ್ಳುತ್ತಿದೆ' ಎಂದು ಅನೌನ್ಸ್ ಮಾಡಿದೆ.

ನಮ್ರತಾ ಮೇಲೆ ಕೂಗಾಡಿದ ಕಾರ್ತಿಕ್

ಕಾರ್ತಿಕ್ ಆಟ ಒಂದು ಹಂತಕ್ಕೆ ಪೂರ್ಣವಾಗಿತ್ತು. ಮೈಕೆಲ್ ಮಾಡಿದ್ದನ್ನು ಕಂಡ ನಮ್ರತಾ, ಈ ಕಡೆ ಬನ್ನಿ ಕಾರ್ತಿಕ್. ನೀವೂ ಅದೇ ಥರ ಮಾಡಿ ಎಂದಿದ್ದರು. ಕಾರ್ತಿಕ್ ಅದೇ ರೀತಿ ಮಾಡಿದರು. ಅವರಿಂದ ಕೂಡ ಎರಡು ಬಾಸ್ಕೆಟ್ ದಿನಸಿ ಹೋಯಿತು. ಇದು ಕಾರ್ತಿಕ್ ಕೋಪಕ್ಕೆ ಕಾರಣವಾಗಿತ್ತು. ಆ ಕೋಪದಿಂದ ನಮ್ರತಾ ಅವರಿಗೆ ಪರೋಕ್ಷವಾಗಿ ಬೈದಿದ್ದಾರೆ. ಸುಮ್ಮನೆ ಇರಬೇಕು. ಆ ಕಡೆ ಬನ್ನಿ ಈ ಕಡೆ ಬನ್ನಿ ಅಂತೆ. ಅಲ್ಲಿಯೇ ನನ್ನ ಆಟ ಪೂರ್ತಿ ಆಗಿತ್ತು ಎಂದಿದ್ದಾರೆ. ಇನ್ನು ವರ್ತೂರು, ಪ್ರತಾಪ್, ಸ್ನೇಹಿತ್, ವಿನಯ್, ಸಂಗೀತಾ ಆಡಿ ದಿನಸಿಯನ್ನು ಉಳಿಸಿಕೊಂಡಿದ್ದಾರೆ.

More from Filmibeat

English summary
BBK 10 November 14th episode about Michael and Karthik task rules break:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X