BBK 10: ಸಂಗೀತಾ ಮೇಲೆ ಕ್ರಶ್? ಮೈಕಲ್ ಜೊತೆಗೆ ಇಶಾನಿ ಬ್ರೇಕಪ್.. ಮನೆಯಲ್ಲಿ ತ್ರಿಕೋನ ಪ್ರೇಮಕಥೆ!
ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ಸಲ ಸಣ್ಣ ಸಣ್ಣ ವಿಚಾರಗಳಿಗೂ ದೊಡ್ಡ ದೊಡ್ಡ ಗಲಾಟೆಯೇ ನಡೆದು ಹೋಗುತ್ತದೆ. ಒಳ್ಳೆ ಬಾಂಧವ್ಯ ಇದೆ ಎಂದುಕೊಂಡವರಲ್ಲಿಯೇ ಕಿತ್ತಾಟದ ಸೂಚನೆಗಳು ಕಾಣಿಸುತ್ತವೆ. ಇದೀಗ ಇಶಾನಿ ಮತ್ತು ಕಾರ್ತಿಕ್ ನಡುವೆ ದೊಡ್ಡ ಜಗಳವೇ ಎದ್ದಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮಕ್ಕೇನು ಕೊರತೆಯಿಲ್ಲ. ಪ್ರತಿ ಸೀಸನ್‌ನಲ್ಲೂ ಪ್ರೇಮ ಪಕ್ಷಿಗಳು ಸಿಕ್ಕಿ ಬೀಳುತ್ತವೆ. ಅದರಂತೆ ಈ ಬಾರಿಯ ಸೀಸನ್‌ನ ಆರಂಭದಲ್ಲಿಯೇ ಮೈಕಲ್ ಹಾಗೂ ಇಶಾನಿ ತಾವೂ ಪ್ರೇಮಿಗಳು ಎನ್ನುವಂತೆ ಬಿಂಬಿಸಿದ್ದರು. ಈಗ ಅದೇ ಪ್ರೀತಿ ಕಾರ್ತಿಕ್ ವಿಚಾರಕ್ಕೆ ಬ್ರೇಕಪ್ ಆಗಿದೆ.

ಸಂಗೀತಾ ವಿಚಾರಕ್ಕೆ ಜಗಳ
ಸಂಗೀತಾ ಕಳಪೆ ತೆಗೆದುಕೊಂಡು ಜೈಲಲ್ಲಿ ಇದ್ದಾರೆ. ಕಾರ್ತಿಕ್ ಹಾಗೂ ತನಿಷಾ ಅಡುಗೆ ಮಾಡುವ ಜಾಗಕ್ಕೆ ಬಂದ ಇಶಾನಿ, ಪಪೇಟ್ ಎಂದಿದ್ದಾರೆ. ಇದು ಕಾರ್ತಿಕ್‌ಗೆ ಇದು ಇಷ್ಟ ಆಗಿಲ್ಲ. "ಫ್ರೆಂಡ್ ಜೈಲಲ್ಲಿದ್ದಾಗ ಡಿಫೆನ್ಸ್ ಮಾಡುವುದು ನನ್ನ ಕರ್ತವ್ಯ. ಮೊದಲಿನಿಂದ ನಾವೂ ಮೂರು ಜನ ಒಟ್ಟಾಗಿಯೇ ಇದ್ದೀವಿ" ಎಂದಿದ್ದಾರೆ. "ಇದನ್ನು ಗ್ರೂಪ್ ಅಂತ ಹೇಳಿ" ಎಂದು ಕೂಗಾಡಿದ್ದಾರೆ ಇಶಾನಿ.
ಕಾರ್ತಿಕ್ ಪರ ನಿಂತ ಮೈಕಲ್
ಮುಂದುವರೆದು ಮಾತನಾಡಿದ ಕಾರ್ತಿಕ್, "ನೀನು ಒಂಟಿಯಾಗಿ ಇಲ್ಲಿ ಆಟವಾಡಿ ತೋರಿಸು. ಅದಕ್ಕೆ ನಿನಗೆ ತಾಕತ್ತು ಇಲ್ಲ" ಎಂದಿದ್ದಾರೆ. ಈ ಮಾತನ್ನ ಇಶಾನಿ ಒಬ್ಬ ಹುಡುಗಿಯಾಗಿರುವುದಕ್ಕೆ ಈ ರೀತಿ ಎಲ್ಲಾ ಹೇಳುತ್ತಾ ಇದ್ದೀಯಾ ಅಲ್ವಾ ಅಂತ ತಪ್ಪಾಗಿ ಭಾವಿಸಿ, ನಮ್ರತಾರನ್ನು ಕರೆದು ತಂದಿದ್ದಾರೆ. ಎಲ್ಲರ ಮುಂದೆ ಜೋರು ಮಾಡಿದ್ದಾರೆ. ಕಣ್ಣೀರು ಹಾಕಿದ್ದಾರೆ. ಕಾರ್ತಿಕ್‌ಗೆ ಅವಾಜ್ ಹಾಕಿದರೂ, ಕಾರ್ತಿಕ್ ಹೇಳಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇಶಾನಿಯನ್ನ ಸೈಕೋ ಎಂದ ಮೈಕಲ್
ಮೈಕಲ್ ಕೂಡ ಅಲ್ಲಿಯೇ ಇದ್ದ ಕಾರಣ, ಕಾರ್ತಿಕ್ ಹೇಳಿದ್ದು ಆ ರೀತಿ ಅಲ್ಲ ಅಂದಿದ್ದಾರೆ. ಇದು ಇಶಾನಿಯನ್ನ ಮತ್ತಷ್ಟು ಕೆರಳಿಸಿದೆ. ನನ್ನ ಕಡೆಗೆ ಮಾತನಾಡುವುದನ್ನು ಬಿಟ್ಟು ಕಾರ್ತಿಕ್ ಕಡೆಗೆ ಮಾತನಾಡುತ್ತಾನೆ. ಥೂ ನೀನು ಒಬ್ಬ ಬಾಯ್ ಫ್ರೆಂಡ್. ನನಗೆ ನೀನು ಬೇಡವೇ ಬೇಡ ಎಂದಿದ್ದಾರೆ. ಮೈಕಲ್ ಆದಷ್ಟು ಸಮಾಧಾನ ಮಾಡಲು ಪ್ರಯತ್ನ ಪಟ್ಟಿದ್ದಾರೆ. ನಾನು ಅಲ್ಲಿಗೆ ಬಂದಿದ್ದು ನಿನ್ನ ಬೆಂಬಲಕ್ಕೆ ಎಂದು ಹೇಳಿದರೂ, ಇಶಾನಿ ಕೇಳದೆ ಹೋದಾಗ ಮತ್ತೆ ಸಮಾಧಾನ ಮಾಡಲು ಹೋಗಲಿಲ್ಲ.
ಇಶಾನಿ ಕೋಪದಲ್ಲಿ ಹೇಳಿದ ಆ ಸತ್ಯ ಏನು..?
ಮೈಕಲ್‌ಗೆ ಇಶಾನಿಯನ್ನು ನೋಡಿ ನೋಡಿ ಸಾಕಾಗಿದೆ. ಕೋಪಗೊಂಡ ಮೈಕಲ್, ಸೈಕೋ ಅಂತ ಪದ ಬಳಕೆ ಮಾಡಿ ಮುಂದೆ ಹೋಗಿದ್ದಾರೆ. ಈ ಪದ ಕೇಳಿ ಇಶಾನಿ ಇನ್ನಷ್ಟು ಕಣ್ಣೀರು ಹಾಕಿದ್ದಾರೆ. "ನೋಡಿ ನನಗೆ ಸೈಕೋ ಅಂತಾನೆ. ಯಾರಾದರೂ ತನ್ನ ಹುಡುಗಿಗೆ ಹೀಗೆ ಹೇಳುತ್ತಾರಾ? ಸೈಕೋ ಅನ್ನೋರೆಲ್ಲ ನಂಗೆ ಬೇಡವೇ ಬೇಡ. ಅವತ್ತು ಒಂದಿನ ನಿನ್ನ ಜೊತೆ ಇಲ್ಲದೆ ಹೋಗಿದ್ದರೆ ನಾನು ಸಂಗೀತಾ ಜೊತೆಗೆ ಇರುತ್ತಿದ್ದೆ ಎಂದಿದ್ದ" ಅಂತ ಇಶಾನಿ ಹೇಳಿದ್ದಾರೆ. ನಮ್ರತಾ ಹಾಗೂ ವಿನಯ್ ಸಮಾಧಾನ ಮಾಡಿದ್ದಾರೆ. ಮೈಕಲ್ ತೆಗೆದುಕೊಂಡ ನಿರ್ಧಾರ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಇಷ್ಟವಾಗಿದೆ. ನ್ಯಾಯದ ಪರ ನಿಂತಿದ್ದಕ್ಕೆ ಭೇಷ್ ಎಂದಿದ್ದಾರೆ.


Click it and Unblock the Notifications











