BBK 10: ಸುದೀಪ್ ಮುಂದೆನೇ ಉತ್ತಮ -ಕಳಪೆ ತೀರ್ಮಾನ ಆಯ್ತು.. ಈ ವಾರ ಉತ್ತಮ ಯಾರು?
ಬಿಗ್ ಬಾಸ್ ಮನೆಯಲ್ಲಿ ಕೆಲವು ವಿಚಾರಗಳಿಗಾಗಿ ಸ್ಪರ್ಧೆ ನಡೆಯುತ್ತವೆ. ಅದರಲ್ಲಿ ಕ್ಯಾಪ್ಟನ್, ಉತ್ತಮ ಮತ್ತು ಕಳಪೆ, ಕಿಚ್ಚನ ಚಪ್ಪಾಳೆ ಹೀಗೆ ಹಲವು ವಿಚಾರಗಳು ಮುಖ್ಯವಾಗುತ್ತದೆ. ವಾರಪೂರ್ತಿ ಬಿಗ್ ಬಾಸ್ ಮನೆಯಲ್ಲಿ ಸದಸ್ಯರು ಹೇಗೆ ನಡೆದುಕೊಳ್ಳುತ್ತಾರೆ ಎಂಬ ಆಧಾರದ ಮೇಲೆ ಈ ಅವಾರ್ಡ್‌ಗಳು ಸಿಗುತ್ತವೆ.
ಈ ವಾರ ಉತ್ತಮ ಎಂಬ ಅವಾರ್ಡ್ ವಿನಯ್‌ಗೆ ಸಿಕ್ಕಿದೆ. ಕಳಪೆ ಎಂಬುದು ಸಂಗೀತಾಗೆ ಸಿಕ್ಕಿದೆ. ಸಂಗೀತಾ ಈ ವಾರ ಜೈಲು ವಾಸ ಅನುಭವಿಸಿದ್ದಾರೆ. ಆದರೆ, ಸಂಗೀತಾಗೆ ಕಳಪೆ ಕೊಟ್ಟಿದ್ದು ಎಷ್ಟು ಸರಿ ಅನ್ನುವುದು ಜನರಿಗೂ ಪ್ರಶ್ನೆಯಾಗಿ ಕಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅದೇ ವಿಚಾರ ಹೆಚ್ಚು ಚರ್ಚೆಯಾಗಿತ್ತು.

ಉತ್ತಮ-ಕಳಪೆ ಬಗ್ಗೆ ಸುದೀಪ್ ಬೇಸರ
ಬಿಗ್ ಬಾಸ್ ಮನೆಯಲ್ಲಿ ಆಟಕ್ಕೋಸ್ಕರ ಎರಡು ಟೀಂ ಮಾಡಲಾಗಿತ್ತು. ಅದರಲ್ಲಿ ಸಂಗೀತಾ ಒಂದು ಟೀಂ ಆದರೆ ವಿನಯ್‌ದು ಮತ್ತೊಂದು ಟೀಂ. ಟೀಂನಲ್ಲಿ ಆಟ ಆಡುವಾಗ ಗುದ್ದಾಟ, ಕಿತ್ತಾಟಗಳೇ ಜೋರಾಗಿ ನಡೆದಿತ್ತು. ಅದರ ಹೊರತಾಗಿಯೂ ಗುಂಪುಗಾರಿಕೆ ಜಾಸ್ತಿಯಾಗಿತ್ತು. ಅಷ್ಟೇ ಅಲ್ಲ ಇಡೀ ಟೀಂ ಸೇರಿ ವಿನಯ್‌ನನ್ನೇ ತಮ್ಮ ನಾಯಕನಂತೆ ಬಿಂಬಿಸಿಕೊಂಡಿದ್ದರು. ಕಡೆಗೆ ಎಲ್ಲರೂ ಸೇರಿ ವಿನಯ್‌ಗೆ ಉತ್ತಮ ಪಟ್ಟ ಕೂಡ ಕೊಟ್ಟಿದ್ದಾರೆ. ಇದು ಕರ್ನಾಟಕದ ಜನತೆಗೆ ಬೇಸರವಾಗಿತ್ತು. ಪಂಚಾಯ್ತಿಯಲ್ಲಿ ಕಿಚ್ಚನಿಗೂ ಬೇಸರ ತರಿಸಿದೆ.
ಸುದೀಪ್ ಮುಂದೆ ಎಲ್ಲವೂ ಉಲ್ಟಾ
ಉತ್ತಮ ಮತ್ತು ಕಳಪೆಯನ್ನು ಈ ವಾರ ಕೊಟ್ಟಿದ್ದು ನ್ಯಾಯವಾಗಿರಲಿಲ್ಲ. ಇದು ಎಲ್ಲರಿಗೂ ಗೊತ್ತಿತ್ತು. ಸುದೀಪ್ ಈ ವಿಚಾರವನ್ನು ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ತೆಗೆದುಕೊಂಡರು. ಆಗ ವಿನಯ್ ಪರ ಕೈ ಎತ್ತಿದವರೆಲ್ಲ ಸ್ನೇಹಿತ್ ಪರವಾಗಿ ಕೈ ಎತ್ತಿದರು. ವಿನಯ್‌ಗೆ ಬಿದ್ದ ವೋಟು ಕೇವಲ ಎರಡರಿಂದ ಮೂರು. ಸಂಗೀತಾ ಹಾಗೂ ಸ್ನೇಹಿತ್‌ಗೆ ಹೆಚ್ಚಾಗಿ ವೋಟು ಬಿದ್ದಿದ್ದವು.

ಸ್ನೇಹಿತ್‌ಗೆ ಫುಲ್ ಖುಷಿ
ಸುದೀಪ್ ಮುಂದೆ ಉತ್ತಮ ಅವಾರ್ಡ್ ಬದಲಾಗಿತ್ತು. ಸ್ನೇಹಿತ್‌ಗೆ ಹೆಚ್ಚಿನ ವೋಟ್ ಬಿದ್ದಿದ್ದರಿಂದ ಉತ್ತಮದ ಪದಕಕ್ಕೆ ವೇದಿಕೆಯಲ್ಲಿಯೇ ನ್ಯಾಯ ಕೊಡಿಸಿದರು. ವಿನಯ್ ಕಡೆಯಿಂದಾನೇ ಪದಕ ಹಾಕಿಸಿದರು. ಅಲ್ಲಿಯೇ ಕಳಪೆ ಬಗ್ಗೆ ಪ್ರಶ್ನೆ ಎತ್ತಿದರೆ ಅದೂ ಕೂಡ ಬದಲಾವಣೆ ಆಗುತ್ತಾ ಇತ್ತು. ಆದರೆ ಆ ವಿಚಾರಕ್ಕೆ ಕಿಚ್ಚ ಹೋಗಲಿಲ್ಲ. ಕಿಚ್ಚನ ಈ ಮಾತುಗಳಿಂದ ಖಂಡಿತ ಮನೆಯವರ ಮನಸ್ಸಲ್ಲಿ ಕೊಂಚ ಬೇಸರವಂತು ಕಂಡಿದೆ.
ವಿನಯ್‌ಗೆ ಹದೆರಿದ್ದಾರಾ ಮನೆಯವರು..?
ಈಗಾಗಲೇ ಕಿಚ್ಚ ಸುದೀಪ್ ಸಾಕಷ್ಟು ಸಲ ಹೇಳಿದ್ದಾರೆ. ನೀವೆಲ್ಲ ಸೇರಿ ಫೈನಲ್ ಸ್ಪರ್ಧಿಯನ್ನು ರೆಡಿ ಮಾಡಿದ್ದೀರಿ. ವಿನಯ್ ಕಂಡರೆ ಭಯ ಪಡುತ್ತೀರಿ ಎಂದು. ಅದನ್ನೇ ಈ ವಾರವೂ ಪ್ರೂವ್ ಮಾಡಿದ್ದಾರೆ. ತಾವೆಲ್ಲ ಒಬ್ಬಂಟಿ ಆಟವಾಡಲು ಬಂದಿದ್ದೀವಿ ಎಂಬುದನ್ನೇ ಮರೆತು ವಿನಯ್ ಪರವಾಗಿ ಆಟವಾಡುವುದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಉತ್ತಮ ಹಾಗೂ ಕಳಪೆ ವಿಚಾರ ಹಾಗೂ ತುಕಾಲಿ ಸಂತೂ ತನ್ನ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಪರೋಕ್ಷವಾಗಿ ವಿನಯ್‌ಗೆ ಬಿಟ್ಟುಕೊಟ್ಟಿದ್ದು. ಇದೆಲ್ಲವೂ ವಿನಯ್ ಪರವಾಗಿಯೇ ಕೆಲಸ ಮಾಡಿದ್ದಾರೆ.


Click it and Unblock the Notifications











